U Kಭಟ್ಕಳದಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋಗಿ ದುರ್ಮಣ ಹೊಂದಿದ ಕುಟುಂಬವನ್ನು ಭೇಟಿ ನೀಡಿದ: ಮಂಕಳ್ ವೈದ್ಯ
Wednesday, May 27, 2026
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದ ದಾರುಣ ದುರ್ಘಟನಿಗೆ ವಿಷಾದ ವ್ಯಕ್ತಪಡಿಸಿ ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬಿ ಸರಕಾರದಿಂದ ಪರಿಹಾರ ನೀಡುತ್ತೇನೆ ಎಂದ ಮೀನುಗಾರಿಕಾ ಇಲಾಖೆ ಸಚಿವರು ಮತ್ತು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಳ್ ವೈದ್ಯ ತಿಳಿಸಿದರು
ಕಳೆದ ಮೂರು ದಿನಗಳ ಹಿಂದೆ ಭಟ್ಕಳದಲ್ಲಿ ನಡೆದ ದಾರುಣ ಘಟನೆಗೆ ಸಂಬಂಧಿಸಿದಂತೆ ಮೀನುಗಾರಿಕಾ ಸಚಿವ ಮಂಕಳ್ ವೈದ್ಯ ವಿಷಾದ ವ್ಯಕ್ತಪಡಿಸಿದ್ದಾರೆ,
ಹೌದು ಕೆಲಸದ ನಿಮಿತ್ತ ಬೆಂಗಳೂರಿನಲ್ಲಿರುವಾಗ ಕಪ್ಪೆ ಚಿಪ್ಪು ಮೀನುಗಾರಿಕೆಗೆ ತೆರಳಿದಾಗ ಆದ ದುರಂತ ತಿಳಿಯಿತು. ಕೂಡಲೇ ಮುಖ್ಯಮಂತ್ರಿಗಳ ಗಮನಕ್ಕೆ ತಂದರು ಅದರಂತೆ ಮಾನ್ಯ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರು ಮೃತಪಟ್ಟ ಕುಟುಂಬಕ್ಕೆ ತಲಾ 5 ಲಕ್ಷದಂತೆ ಮರಣ ಹೊಂದಿದ ಕುಟುಂಬದವರಿಗೆ ಪರಿಹಾರವನ್ನು ಘೋಷಣೆ ಮಾಡಲು ತಿಳಿಸಿದ್ದರು.
ಅಲ್ಲಿಂದ ನೇರವಾಗಿ ಹೊರಟು ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಬದುಕುಳಿದಿದ್ದ ನಾಗರತ್ನ ಈಶ್ವರ ನಾಯ್ಕ ಯವರು ಚಿಕಿತ್ಸೆ ಪಡೆಯುತ್ತಿದ್ದ ಭೇಟಿ ಮಾಡಿ ಅವರ ಆರೋಗ್ಯ ಕ್ಷೇಮವನ್ನು ವಿಚಾರಿಸಿ ಅವರಿಗೆ ಧೈರ್ಯ ತುಂಬಿ ಮತ್ತು ಆಸ್ಪತ್ರೆಯ ವೆಚ್ಚವನ್ನ ಸಂಪೂರ್ಣವಾಗಿ ಸರ್ಕಾರ ಬರಿಸಲಿದೆ ಎಂದು ಹೇಳಿದರು