ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Bainduru : ಆಸರೆ ಚಾರಿಟೇಬಲ್ ಟ್ರಸ್ಟ್ ರಿ ಮರವಂತೆ ವತಿಯಿಂದ 2ನೇ ವರ್ಷದ ಚಿಣ್ಣರ ಕ್ರೀಡಾಕೂಟ

Bainduru : ಆಸರೆ ಚಾರಿಟೇಬಲ್ ಟ್ರಸ್ಟ್ ರಿ ಮರವಂತೆ ವತಿಯಿಂದ 2ನೇ ವರ್ಷದ ಚಿಣ್ಣರ ಕ್ರೀಡಾಕೂಟ

ಬೈಂದೂರು
ಆಸರೆ ಚಾರಿಟೇಬಲ್ ಟ್ರಸ್ಟ್ ರಿ ಮರವಂತೆ ವತಿಯಿಂದ ದಶಯಾನದ ಅಂಗವಾಗಿ 2ನೇ ವರ್ಷದ under 16 ಚಿಣ್ಣರ ಕ್ರಿಕೆಟ್ ಆಸರೆ ಟ್ರೋಫಿ 2026
ಮರವಂತೆಯ ನೇತಾಜಿ ಶುಭಾಸ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ದಿನಾಂಕ 24/05/2026 ರಂದು ವ್ಯವಸ್ಥಿತವಾಗಿ ಅಚ್ಚುಕಟ್ಟಾಗಿ ಸಂಪನ್ನಗೊಂಡಿತು.
16 ರ ಒಳಗಿನ ವಯೋಮಿತಿಯ ಕುಂದಾಪುರ ಮತ್ತು ಬೈಂದೂರು ತಾಲೂಕು ವ್ಯಾಪ್ತಿಯ ಸುಮಾರು 15 ತಂಡಗಳು ಭಾಗವಹಿಸಿದ್ದವು ಅದರಲ್ಲಿ ಕಾಳಿಕಾಂಬಾ ನ್ಯೂ ಫ್ರೆಂಡ್ಸ್ ಕೋಣಿ ಪ್ರಥಮ ಸ್ಥಾನಿಯಾದರೆ K F K ಕೋಣಿ ದ್ವಿತೀಯ ಸ್ಥಾನಿಯಾಗಿ ವಿಜೃಂಬಿಸಿದರು. ಕಾಳಿಕಾಂಬಾ ನ್ಯೂ ಫ್ರೆಂಡ್ಸ್ ನ ದರ್ಶನ್ ಸರಣಿ ಶ್ರೇಷ್ಠ ಪಡೆದರೆ, ಉತ್ತಮ ಬ್ಯಾಟ್ಸಮನ್ ಆಗಿ kfk ತಂಡದ ರಾಹುಲ್, ಉತ್ತಮ ಬೌಲರ್ ಆಗಿ ಕಾಳಿಕಾಂಬಾ ತಂಡದ ಚಿರಾಗ್ ಮೂಡಿಬಂದರು. 
ಕಾರ್ಯಕ್ರಮದ ಪೋಷಕರಾದ ಸಂತೋಷ ಶೆಟ್ಟಿ ಉದ್ಯಮಿಗಳು ಮರವಂತೆ ಹಾಗೂ ಮಾತ್ರಶ್ರೀ ಜ್ಯುವೆಲರ್ಸ್ ಕಂಬದಕೋಣೆಯ ಮಾಲಕರದ ಅಶೋಕ್ ಆಚಾರ್ಯ ಮರವಂತೆ ಉಪಸ್ಥಿತರಿದ್ದು ವಿಜೇತ ತಂಡಗಳಿಗೆ ಟ್ರೋಫಿಗಳನ್ನು ಹಸ್ತಾಂತರಿಸಿದರು. ಕಾರ್ಯಕ್ರಮ ಕ್ಕೆ ನಿರಂತರವಾಗಿ ಕೈ ಜೋಡಿಸಿದ ಸಂಗಮ ಯುವಕಮಂಡಲದ ಅಧ್ಯಕ್ಷರು ಅದ ಶರತ್ ಮರವಂತೆ ಶುಭಕೋರಿದರು. ಆಸರೆಯ ಟ್ರಸ್ಟಿಗಳೆಲ್ಲ ಉಪಸ್ಥಿತರಿದ್ದು ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಿಕೊಟ್ಟರು

Ads on article

Advertise in articles 1

advertising articles 2

Advertise under the article