ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Udupiಬೈಂದೂರು: ನಾಯಕವಾಡಿಯಲ್ಲಿ ನಡೆಯುತ್ತಿರುವ ಸುವರ್ಣ ಸಂಭ್ರಮ ಕಾರ್ಯಕ್ರಮದ ವೇದಿಕೆಯಲ್ಲಿ  : ಉದ್ಯಮಿ  ದಯಕರ ಮೇಸ್ತ ರವರಿಗೆ  ಸನ್ಮಾನ..!

Udupiಬೈಂದೂರು: ನಾಯಕವಾಡಿಯಲ್ಲಿ ನಡೆಯುತ್ತಿರುವ ಸುವರ್ಣ ಸಂಭ್ರಮ ಕಾರ್ಯಕ್ರಮದ ವೇದಿಕೆಯಲ್ಲಿ : ಉದ್ಯಮಿ ದಯಕರ ಮೇಸ್ತ ರವರಿಗೆ ಸನ್ಮಾನ..!

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಕುಂದಾಪುರ ತಾಲೂಕಿನ ಗುಜ್ಜಾಡಿ ನಾಯಕವಾಡಿಯಲ್ಲಿ ನಡೆಯುತ್ತಿರುವ ಸುವರ್ಣ ಸಂಭ್ರಮದ ವೇದಿಕೆಯಲ್ಲಿ ರಾಮ ಭಗವಾನ್ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಮುಖ್ಯದ್ವಾರದ ಹೆಬ್ಬಾಗಿಲು ನೂತನವಾಗಿ ನಿರ್ಮಾಣ ಮಾಡಿ ದೇವಸ್ಥಾನಕ್ಕೆ ದೇಣಿಗೆ ನೀಡಿ ಸುವರ್ಣ ಸಂಭ್ರಮದ ಕಾರ್ಯಕ್ರಮದ ಮೆರಗು ಹೆಚ್ಚಿಸಿರುವ ಮಹಾನ್ ವ್ಯಕ್ತಿ ಹಾಗೂ ಶೈಕ್ಷಣಿಕ ಕ್ಷೇತ್ರದ ಪೋಷಕ ನಾಯಕ , ಧಾರ್ಮಿಕ ಕ್ಷೇತ್ರದ ಆಪದ್ಬಾಂಧವ ಕೊಡಕೈ ದಾನಿ ದಯಕರ ಮೇಸ್ತ ರವರ ಸಾಮಾಜಿಕ ಕ್ಷೇತ್ರದ ಸೇವೆಯನ್ನು ಗುರುತಿಸಿ ಸುವರ್ಣ ಸಂಭ್ರಮದ ಎರಡನೇ ದಿನ ನಡೆಯುವ ಸಭಾ ಕಾರ್ಯಕ್ರಮದಲ್ಲಿ ದಯಕರ ಮೇಸ್ತ ಮತ್ತು ಮಗಳು ಐಶ್ವರ್ಯ ದಯಕರ ಮೇಸ್ತ ವರನ್ನು ಗೌರವದಿಂದ ಸನ್ಮಾನಿಸಲಾಯಿತು
ಈ ವೇಳೆ ಶ್ರೀ ರಾಮ ಭಗವಾನ್ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಗೌರವಧ್ಯಕ್ಷ ನಾರಾಯಣ್ ಟಿ ಪೂಜಾರಿಯವರು ಮಾತನಾಡಿ ಕಳೆದ 25 ವರ್ಷದ ಹಿಂದೆ ಅಜೀರ್ಣ ವ್ಯವಸ್ಥೆಯಲ್ಲಿದ್ದ ರಾಮ ಮಂದಿರವನ್ನು ನಾನು ನೂತನವಾದ ರಾಮ ಮಂದಿರ ನಿರ್ಮಾಣ ಮಾಡುತ್ತಿದ್ದೇನೆ ಆದರೆ ದೇವಸ್ಥಾನದ ಮುಖ್ಯ ದ್ವಾರದ ಹೆಬ್ಬಾಗಿಲು ಮರದ ಸುಂದರವಾದ ಬಾಗಿಲು ದೇಣಿಗೆ ನೀಡಿ ದೇವಸ್ಥಾನದ ಕಿರೀಟದ ಕಳೆ ಬಂದಿದೆ ಅವರ ಸಾಮಾಜಿಕ ಕಳಕಳಿಯ ಸೇವೆಯನ್ನು ಗುರುತಿಸಿ ನಡೆಯುತ್ತಿರುವ 50ನೇ ವರ್ಷದ ಸುವರ್ಣ ಸಂಭ್ರಮದ ವೇಳೆ ಅವರನ್ನು ಗುರುತಿಸುವ ಸೌಭಾಗ್ಯ ನಮ್ಮ ಸಮುದಾಯಕ್ಕೆ ಬಂದಿದೆ , ಹಾಗೂ ಆದಿತ್ಯವಾರ ನಡೆಯುವ ಸೀತಾರಾಮ ಚಂದ್ರ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕು ಎಂದು ಮನವಿ ಮಾಡಿದರು 
ಸುವರ್ಣ ಸಂಭ್ರಮದ ಎರಡನೇ ದಿನದ ಕಾರ್ಯಕ್ರಮದಲ್ಲಿ ಅರೆಹೊಳೆ ಪ್ರತಿಷ್ಠಾನ ( ರಿ) ನಂದಗೋಕುಲ ಕಲಾವಿದರು, ಮಂಗಳೂರು ಇವರಿಂದ ಅದ್ದೂರಿ ನೃತ್ಯ ವೈಭವ ಜರುಗಿತು
ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಉದ್ಯಮಿ ಉಮೇಶ್ ಮೇಸ್ತ , ವಿನೋದ್ ಭಂಡಾರಿ ಶಿವಮೊಗ್ಗ ಉದ್ಯಮಿ, ಮಂಜುನಾಥ್ ಪೂಜಾರಿ ನಾಡ ದುಬೈ ಉದ್ಯಮಿ, ಶಿವರಾಂ ಪೂಜಾರಿ ಬೆಂಗಳೂರು, ರಾಜೇಶ್ ಪೂಜಾರಿ ತ್ರಾಸಿ ಶ್ರೀನಿವಾಸ್ ಖಾರ್ವಿ ಕಂಚುಗೋಡು, ಗಣಪತಿ ಮೇಸ್ತ ಗುಜ್ಜಾಡಿ ಉದ್ಯಮಿ, ಕೃಷ್ಣ ಪೂಜಾರಿ ಬಾದಾಮಿ, ದೇವಸ್ಥಾನದ ಕಾರ್ಯದರ್ಶಿ ಶಂಕರ ಪೂಜಾರಿ ಮೇಲ್ಹಂಡಿ, ಖಜಂಚಿ ಪ್ರಕಾಶ್ ಪೂಜಾರಿ ಗುಜ್ಜಾಡಿ, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು

ನಿರೂಪಣೆ ಸುಂದರ್ ಜಿ ಗಂಗೊಳ್ಳಿ ನೆರವೇರಿಸಿ ಸ್ವಾಗತ ರಾಜು ಪೂಜಾರಿ, ಧನ್ಯವಾದ ಅಣ್ಣಪ್ಪ ಪೂಜಾರಿ ಮೇಲ್ಹಂಡಿ ನೆರವೇರಿಸಿದ

Ads on article

Advertise in articles 1

advertising articles 2

Advertise under the article