Udupi : ನಾಯಕವಾಡಿಯಲ್ಲಿ ನಡೆದ ಸುವರ್ಣ ಸಂಭ್ರಮ : ಅದ್ದೂರಿ ಸೀತಾರಾಮಚಂದ್ರ ಕಲ್ಯಾಣೋತ್ಸವ ಕಾರ್ಯಕ್ರಮ ಸಂಪನ್ನ..!
Monday, April 6, 2026
ಬೈಂದೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರದ ಗುಜ್ಜಾಡಿ ಗ್ರಾಮದ ನಾಯಕವಾಡಿ ಶ್ರೀ ರಾಮ್ ಭಗವಾನ್ ರಾಮ ಮಂದಿರದ 50ನೇ ವರ್ಷದ ಸುವರ್ಣ ಸಂಭ್ರಮ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಜರುಗಿತು.
ಆದಿತ್ಯವಾರ ಸೀತಾರಾಮ ಚಂದ್ರ ಕಲ್ಯಾಣೋತ್ಸವ ಕಾರ್ಯಕ್ರಮ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ ಕನ್ಯಾಡಿ ಧರ್ಮಸ್ಥಳ ಆಸ್ಥಾನ ಪುರೋಹಿತ ವೇದಮೂರ್ತಿ ಪ್ರವೀಣ್ ಲಕ್ಷ್ಮೀಪತಿ ಗೋಪಾಲ್ ಆಚಾರ್ಯ ಪೌರೋಹಿತ್ಯ ದಲ್ಲಿ ಶ್ರೀರಾಮ ದೇವರ ವಿಧ ಧಾರ್ಮಿಕ ವಿಧಿ ವಿಧಾನಗಳ ಪೂಜಾ ಕಾರ್ಯಕ್ರಮಗಳು ಜರುಗಿತು
ಶ್ರೀರಾಮ ದೇವರನ್ನು ಮರವಂತೆ ವರಹ ಸ್ವಾಮಿ ದೇವಸ್ಥಾನದ ಕಡೆಯುವರಿಂದ ವರ ಶ್ರೀ ರಾಮ ದೇವರನ್ನು ದಿಬ್ಬಣದ ಮೂಲಕ ನಾಯಕವಾಡಿ ಕಡೆಗೆ ಹಾಗೂ ವಧು ಸೀತಾ ಮಾತೆಯನ್ನು ಗಂಗೊಳ್ಳಿ ಕಡೆಯಿಂದ ದಿಬ್ಬಣದ ಮೂಲಕ ನಾಯಕವಾಡಿ ಸೀತಾರಾಮಚಂದ್ರ ಕಲ್ಯಾಣೋತ್ಸವ ಮಂಟಪಕ್ಕೆ ಕರೆದುಕೊಂಡು ಬರುವ ವೇಳೆ ಸಾವಿರಾರು ಭಕ್ತರು ಹಾಜರಿದ್ದರು
ದಿಬ್ಬಣದ ಮೆರವಣಿಗೆಯಲ್ಲಿ ಚಂಡೆ ವಾದನ, ಕುಣಿತ ಭಜನೆ ಟೆಬ್ಲೋ ಕೀಲು ಕುದುರೆ ತಟ್ಟಿ ರಾಯನ ಕುಣಿತ ಮೆರವಣಿಗೆಯ ಅದ್ದೂರಿ ಮೆರವಣಿಗೆ ಕಾರ್ಯಕ್ರಮದಲ್ಲಿ ವಿಶೇಷ ಮೆರುಗು ನೀಡಿತು
ಸೀತಾರಾಮ ಚಂದ್ರ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ಶ್ರೀ ಗುರುದೇವ ಮಠ ಕನ್ಯಾಡಿ ಧರ್ಮಸ್ಥಳ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಆಗಮಿಸಿ ಶ್ರೀರಾಮ ಭಕ್ತರಿಗೆ ಶುಭ ಹಾರೈಸಿದರು, ಮತ್ತು ಶ್ರೀರಾಮ ಭಗವಾನ್ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ದವರು ಸಾರ್ವಜನಿಕ ಸೀತಾರಾಮ ಚಂದ್ರ ಕಲ್ಯಾಣೋತ್ಸವ ಕಾರ್ಯಕ್ರಮ ಜಾತಿ ಬೇದ ಮರೆತು ಒಗ್ಗಟ್ಟಿನಿಂದ ಭಕ್ತಿ ಶ್ರದ್ಧೆ ಭಾವದಿಂದ ಮಾಡಿದ್ದೀರಿ ಶ್ರೀರಾಮನು ನಿಮ್ಮ ಕುಟುಂಬದವರಿಗೆ ಹಾಗೂ ಸುಖ ಸಂಪತ್ತು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಆಶೀರ್ವಾದ ಮಾಡಿದರು
ಕಾರ್ಯಕ್ರಮದ ವ್ಯವಸ್ಥಾಪನ ಸಮಿತಿ ಹಾಗೂ ದೇವಸ್ಥಾನದ ಅಧ್ಯಕ್ಷರು ನಾರಾಯಣ ಟಿ ಪೂಜಾರಿಯವರು ಸೀತಾರಾಮಚಂದ್ರ ಕಲ್ಯಾಣೋತ್ಸವಕ್ಕೆ ಸತತ ಹಲವು ದಿನಗಳಿಂದ ಶ್ರಮಿಸುತ್ತಿರುವ ಪುರುಷರಿಗೆ ಮಹಿಳೆಯರಿಗೆ ಸೇರಿದಂತೆ ಮಕ್ಕಳಿಗೆ ಮತ್ತು ಹಲವು ಸಂಘ ಸಂಸ್ಥೆಗಳಿಗೆ ಆಗಮಿಸಿದಂತ ಭಕ್ತರಿಗೆ ಹಾಗೂ ಊರ ಪರ ಊರಿನಲ್ಲಿ ನೆಲೆ ನಿಂತಿರುವ ಸಹಸ್ರಾರು ಶ್ರೀರಾಮ ಭಕ್ತರಿಗೆ ಅಭಿನಂದನೆ ಸಲ್ಲಿಸಿದರು,
ಸೀತಾರಾಮಚಂದ್ರ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ದೇವರ ಮುಡಿಗಂಧ ಪ್ರಸಾದ ಸ್ವೀಕರಿಸಿ ಶ್ರೀದೇವರ ಕೃಪೆಗೆ ಪಾತ್ರರಾದರು