Kundapura ಮೊನ್ನೆ ನಡೆದ ಐಡಿಯಲ್ ಟ್ರೋಫಿ 2,026. ಬರೀ ಒಂದು ಕ್ರೀಡೆ ಮಾತ್ರವಲ್ಲ, ಅದು ಒಂದು ಹೊಸತನದ ಕನಸು
Wednesday, April 8, 2026
ಕುಂದಾಪುರದ ಖಾರ್ವಿ ಸಮಾಜದ ಹುಡುಗ ತನ್ನ ಚಿಕ್ಕ ವಯಸ್ಸಿನಿಂದಲೂ ಕ್ರಿಕೆಟ್ ಎನ್ನುವ ಕ್ರೀಡೆಯಲ್ಲಿ ಅಪಾರ ಪ್ರೀತಿ ಇಟ್ಟಂತ ಹುಡುಗ, ಸತತ ಪ್ರಯತ್ನ ಬೌಲಿಂಗ್ ಬ್ಯಾಟಿಂಗ್ ಕಿಪಿಂಗ್ ಹೀಗೆ ಮುಂದೊಂದು ದಿನ ಆಲ್ರೌಂಡರ್ ಆಟಗಾರನಾಗಿ ಬೆಳೆದ, ಹೀಗೆ ಇವನ ಆಟ ಮುಂದುವರೆದಿತ್ತು, ಇವನ ಇಂತ ಅದ್ಭುತ ಆಟದ ವೈಖರಿ ಒಂದುದಿನ ಕುಂದಾಪುರದ ಹೆಮ್ಮೆಯ ಕ್ರಿಕೆಟ್ ತಂಡವಾದ ಜಾನ್ಸನ್ ಕುಂದಾಪುರ ತಂಡದ ಹಿರಿಯ ಆಟಗಾರರ ಮನಸ್ಸನ್ನು ಗೆದ್ದೇ ಬಿಟ್ಟಿತು, ಜಾನ್ಸನ್ ಕುಂದಾಪುರ ತಂಡ ಈ ಹುಡುಗನಿಗೆ ತಮ್ಮ ತಂಡದಲ್ಲಿ ಆಡಲು ಅವಕಾಶ ನೀಡಿತು, ಇವನ ಆಟ ಜಾನ್ಸನ್ ಕುಂದಾಪುರ ತಂಡಕ್ಕೆ ಮತ್ತೊಂದು ಶಕ್ತಿಯಾಯಿತು, ಆ ಕಾಲದಲ್ಲಿ ಹಲವಾರು ಪ್ರಶಸ್ತಿ ತನ್ನಮೂಡಿಗೆರಿಸಿಕೊಂಡ ಜಾನ್ಸನ್ ಕುಂದಾಪುರ ತಂಡ ಕುಂದಾಪುರದ ಬಲಿಷ್ಠ ತಂಡವಾಗಿ ರಾಜ್ಯದುದ್ದಕ್ಕೂ ಇನ್ನೂ ಹೆಚ್ಚಿನ ಹೆಸರು ಮಾಡಿತು, ಒಂದು ಮುಖ್ಯವಾದ ವಿಚಾರ ಏನೆಂದರೆ ಈಗಿನ ಕಾಲದಲ್ಲಿ ಅವಕಾಶ ಕೊಟ್ಟವರನ್ನು ತುಳಿದು ಬದುಕುವ ಈ ಕಾಲದಲ್ಲಿ, ಅವಕಾಶ ಕೊಟ್ಟು ತನಗೂ ಕೂಡ ಅಂತರಾಜ್ಯ ಮಟ್ಟದಲ್ಲಿ ಹೆಸರು ಮಾಡಲು ಸಹಕರಿಸಿದ ತನ್ನ ತಂಡದ ಹೆಸರನ್ನೇ ತನ್ನ ಹೆಸರಿನ ಮುಂದೆ ಸೇರಿಸಿಕೊಂಡು ಹೆಮ್ಮೆ ಪಟ್ಟ ಅಪ್ರತಿಮ ಆಟಗಾರ ಟೆನ್ನಿಸ್ ಬಾಲ್ ಕಂಡ ಒಬ್ಬ ಹೆಮ್ಮೆಯ ಕ್ರಿಕೇಟಿಗ ಎಂದರೆ ಅವನೇ "ಜಾನ್ಸನ್ ಅನಿಲ್ ಖಾರ್ವಿ ಕುಂದಾಪುರ" ಇದೇ ಸರಳ ಮನಸಿನ ಕ್ರಿಕೆಟಿಗನ ಕನಸಿನ ಪಂದ್ಯಾಟವೇ ಐಡಿಯಲ್ ಟ್ರೋಫಿ ಸೀಜನ್ (3) ಅದ್ದೂರಿಯಾಗಿ ಕ್ರಿಕೆಟ್ ಕಾಶಿಯಾದ ಕುಂದಾಪುರದ ಗಾಂಧಿಮೈದಾನದಲ್ಲಿ ದಿನಾಂಕ:ಏಪ್ರಿಲ್ 4/5/2,026.ರಂದು ಬಹಳ ಅದ್ದೂರಿಯಾಗಿ ನಡೆಯಿತು.
ಈ ಪಂದ್ಯಾಟ ಹೊಸತನದಲ್ಲಿ ಅಂದರೆ 10/10/ಓವರ್ ಮಾದರಿಯಲ್ಲಿ ನಡೆಯಿತು ಮತ್ತೊಮ್ಮೆ ಎಲ್ಲರನ್ನು ಹದಿನೈದು ಇಪ್ಪತ್ತು ವರುಷಗಳ ಹಿಂದಿನ ಆಟವನ್ನು ನೆನಪಿಸಿತ್ತು, ಕ್ರೀಡೆ ನಡೆಸುವುದೇ ಕಷ್ಟ ಅಂತಾದ್ದರಲ್ಲಿ ಅನಿಲ್ ಖಾರ್ವಿ ಬಡ ಕುಟುಂಬಕ್ಕೆ ವೇದಿಕೆಯಲ್ಲಿ ಆಹಾರದ ಕಿಟ್ಟು ನೀಡಿ ಸಹಕರಿಸಿದ್ದು ಮಾತ್ರ ಎಲ್ಲರ ಮನಸೆಳೆದಿತ್ತು, ಪಂದ್ಯಾಟದ ಪ್ರಾರಂಭದಿಂದ ಕೊನೆಯ ತನಕವೂ ಕೂಡ ಸಾಸಿವೆ ಕಾಳಿನಷ್ಟು ಎಲ್ಲೂ ಯಾವುದೇ ಲೋಪದೋಷಗಳು ಆಗದಿರುವಂತೆ ನೋಡಿಕೊಂಡು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು ಮತ್ತೊಂದು ಹೆಮ್ಮೆಯ ವಿಚಾರ, ಬಹುಷಃ ಇದಕ್ಕೆಲ್ಲ ಮುಖ್ಯ ಕಾರಣ ಜಾನ್ಸನ್ ಅನಿಲ್ ಖಾರ್ವಿಯಲ್ಲಿರುವ ಕ್ರಿಯಾಶೀಲಾ ಮನಸ್ಸು ಕ್ರೀಡಾ ಮನೋಭಾವನೆ ಒಳ್ಳೆತನವೇ ಕಾರಣ ಎನ್ನಬಹುದು ಮುಂದೆ ಇಂತಾ ಕ್ರೀಡೆಗೆ ಎಲ್ಲರೂ ಪ್ರೋತ್ಸಹಿಸಬೇಕು ಎನ್ನುವ ಮಾತುಗಳೊಂದಿಗೆ, ತೀರ್ಪುಗಾರರು ವೀಕ್ಷಕ ವಿವರಣೆಗಾರರಾದ 1)ಫಜಲ್ ಹೊನ್ನಾಳ
2)ಪ್ರವೀಣ್ ಆಚಾರ್ಯ ಮಾರ್ಗೋಳಿ
3)ಶರತ್ ಕುಂಬಾಶಿ
*ಪರವಾಗಿ ತುಂಬು ಹೃದಯದ ಅಭಿನಂದನೆಗಳು ಜಾನ್ಸನ್ ಅನಿಲ್ ಖಾರ್ವಿಗೆ
ವಯಕ್ತಿಕ ಶುಭನುಡಿಗಳೊಂದಿಗೆ ಸ್ನೇಹಿತ,
*"ವಿಶ್ವನಾಥ್ ಗಂಗೊಳ್ಳಿ"*
*9480889298*