Udupi ಕುಂದಾಪುರ: ಕ್ರಿಕೆಟಿನಲ್ಲಿ ಗೆದ್ದು ಬಂದ ಬಹುಮಾನದ ಹಣ: ಬಡ ರೋಗಿಗಳಿಗೆ ನೀಡುವ ಮೂಲಕ ಮಾದರಿಯಾದ ಹುಡುಗರು..!
Wednesday, April 8, 2026
ಕುಂದಾಪುರ: ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ತ್ರಾಸಿ ಹುಡುಗರ ಮಾನವೀಯತೆಯ ಕಾರ್ಯಕ್ಕೆ
, ಈಗಿನ ಕಾಲಗಟ್ಟದಲ್ಲಿ ಹೆಚ್ಚಿನ ಹುಡುಗರ ಕಯ್ಯಲ್ಲಿ ದುಡ್ಡು ಬಂದರೆ ಸಾಕು ಅದನ್ನು ಯಾವ ರೀತಿಯಲ್ಲಿ ಯಾವ ಬಾರಿನಲ್ಲಿ ಕುಳಿತುಕೊಂಡು ಹೇಗೆ ಖರ್ಚು ಮಾಡುವುದು ಎಂದು ಯೋಚಿಸುತ್ತಾರೆ, ಆದರೆ ಇಲ್ಲೊಂದು ಹುಡುಗರ ತಂಡ ಈ ವಿಚಾರದಲ್ಲಿ ವಿಭಿನ್ನ, ಇವರ ಈ ಕಾರ್ಯ ಹೊಸತೇನು ಅಲ್ಲ, ಸುಮಾರು ವರುಷಗಳಿಂದ ಊರಿನ ನಾನಾ ಕಡೆ ತಮ್ಮ ಕ್ರಿಕೆಟ್ ತಂಡ ಕಟ್ಟಿಕೊಂಡು ಆಟವಾಡಿ, ಗೆದ್ದರೆ ಆ ಹಣದಲ್ಲಿ ಬಡ ರೋಗಿಗಳಿಗೆ ಬಡ ಕುಟುಂಬಕ್ಕೆ ಸಹಾಯ ಮಾಡುವುದು ಇವರ ಮೂಲ ಉದ್ದೇಶ, ಅದೇ ರೀತಿ ಈ ವರ್ಷವು ಕೂಡ ಒಂದು ದಿನದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿ ಕಷ್ಟ ಪಟ್ಟು ದಾನಿಗಳನ್ನು ಸಂಪರ್ಕಿಸಿ ಪಂದ್ಯಾಟ ಯಶಸ್ವಿಯಾಗಿ ಮುಗಿಸಿ, ಅದರಲ್ಲಿ ಉಳಿದ ಸರಿಸುಮಾರು (12,000) ರೂಪಾಯಿ ಹಣವನ್ನು ತಮ್ಮ ವಠಾರವಾದ (ಭಾರತ್ ನಗರ)ದಲ್ಲಿ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ನೀಡಿ ಮತ್ತೊಮ್ಮೆ ಮಾನವೀಯತೆ ಮೆರೆದಿರುತ್ತಾರೆ, ಇಂತ ಒಂದು ಅಪರೂಪದ ಸಹೃದಯಿ ಯುವಕರುಗಳ ಕ್ರಿಕೆಟ್ ತಂಡ ಇರುವುದು ನಮ್ಮ ತ್ರಾಸಿಯ ಭಾರತ್ ನಗರದಲ್ಲಿ, ಈ ತಂಡದ ಹೆಸರೇ "ಭಾರತ್ ಫ್ರೆಂಡ್ಸ್ ಭಾರತ್ ನಗರ" ಎಂದು.👍 ಮೋಜು ಮಸ್ತಿ ಮಾಡುವವರಿಗೆ ದೋನೆಷನ್ ನೀಡುವ ದಾನಿಗಳು ಮುಂದಿನ ದಿನಗಳಲ್ಲಿ ಇಂತ ಯುವಕರ ಕಡೆ ಗಮನವಹಿಸಿ ಬೆಂಬಲವಾಗಿ ನಿಲ್ಲಬೇಕಾಗಿದೆ, ಯಾಕೆಂದರೆ ಹಿರಿಯರ ಆಶೀರ್ವಾದ ಪ್ರೋತ್ಸಾಹ ಸಿಕ್ಕಿದರೆ ಖಂಡಿತ ಈ ಹುಡುಗರು ಮುಂದಿನ ದಿನಗಳಲ್ಲಿ ಬಡ ಕುಟುಂಬಗಳಿಗೆ ನೆರಳಾಗಿ ನಿಂತು ಸಹಾಯ ಮಾಡುತ್ತಾರೆ ಎನ್ನುವುದು ನಿಶ್ಚಿತ ಸತ್ಯ.👍 ನಿಜವಾಗಿಯೂ ಉತ್ತಮ ತಂಡ ಭಾರತ್ ಫ್ರೆಂಡ್ಸ್ ಭಾರತ್ ನಗರ❤️ ಅಭಿನಂದನೆಗಳೊಂದಿಗೆ "ವಿಶ್ವನಾಥ್ ಗಂಗೊಳ್ಳಿ🎤🙏*