Udupi ಬೈಂದೂರು: ಸಮಾಜ ಸೇವಕನ ಮಾದರಿ ಸರ್ವೀಸ್ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಮೆಚ್ಚುಗೆ
Monday, March 9, 2026
ಬೈಂದೂರು: ಯಡ್ತರೆ ಯಲ್ಲಿ ಇತ್ತೀಚಿಗೆ ಪ್ರಯಾಣಿಕರ ಅನುಕೂಲಕ್ಕಾಗಿ ಬೈಂದೂರು KSRTC ಬಸ್ ನಿಲ್ದಾಣ ಬಹಳಷ್ಟು ಜನರ ಪ್ರಯತ್ನದಿಂದ ಲೋಕಾರ್ಪಣೆಗೊಂಡಿರುವುದು ಗೊತ್ತಿರುವ ವಿಚಾರ ಆದರೆ ಸರಕಾರಕ್ಕೆ ಲೆಕ್ಕ ಕುಂಟು ಪ್ರಯಾಣಿಕರ ಪ್ರಯೋಜನಕ್ಕೆ ಬಾರದೆ ದಿನ ಕಳೆಯುತ್ತಿದೆ
ಹೌದು ಬೈಂದೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಉದ್ಘಾಟನೆ ಗೊಂಡು ಮೂರು ತಿಂಗಳು ಕಳೆದಿದೆ ಆದ್ರೂ ಕಾರವಾರ ಕುಮಟಾ ಸಿರ್ಸಿ ಬಾಗಲಕೋಟೆ ಉತ್ತರ ಕರ್ನಾಟಕ ಕಡೆಯಿಂದ ಬಸ್ ಬೈಂದೂರು ಬಸ್ ನಿಲ್ದಾಣದ ಒಳಗೆ ಬರುತ್ತೆ.
ಆದರೆ ಕುಂದಾಪುರ ಉಡುಪಿ ಜಿಲ್ಲೆ ಕಡೆಯಿಂದ ಬರುವ ಬಸ್ ಗಳಿಗೆ ಒಳಗಡೆ ಪ್ರವೇಶ್ ಕ್ಕೆ ಮಾರ್ಗ ಇಲ್ಲದೆ ಪ್ರಯಾಣಿಕರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿ ಪರಿಣಮಿಸಿದೆ ಹೌದು ಈ ಬಗ್ಗೆ ಮಾಧ್ಯಮದಲ್ಲಿ ಹಲವು ಬಾರಿ ವರದಿ ಪ್ರಕಟ ಮಾಡಿದರು ಕೂಡ ಪ್ರಯೋಜನವಾಗದೆ ಬೈಂದೂರು ಸಮಾಜ ಸೇವಕ ಸುಬ್ರಹ್ಮಣ್ಯ ಬಿಜೂರು ರವರು ತನ್ನ ಸ್ವಂತ ಹಣದಿಂದ ಯಡ್ತರೆ ಸರ್ಕಲ್ ನಿಂದ ಬೈಂದೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದವರಿಗೆ ಕೆಂಪು ಮಣ್ಣು ತುಂಬಿಸಿ ಕೆಂಪು ಮಣ್ಣಿನ ರಸ್ತೆ ಮಾಡಿ ಉಡುಪಿ ಮಂಗಳೂರು ಕಡೆಯಿಂದ ಬರುವ ಬಸ್ ಗಳಿಗೆ ಒಳಗಡೆ ಪ್ರವೇಶ್ ಕ್ಕೆ ಅನುವು ಮಾಡಿ ಕೊಡುವ ಮೂಲಕ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ಸಂಚಾರ ಮಾಡಲು ಸಹಕರಿಸಿದ್ದಾರೆ
ಪ್ರಯಾಣಿಕರ ಅನುಕೂಲಕ್ಕಾಗಿ ಬಹಳಷ್ಟು ಬಾರಿ ರಾಷ್ಟ್ರೀಯ ಹೆದ್ದಾರಿ 66ರ ಪ್ರಾಧಿಕಾರಕ್ಕೆ ಮತ್ತು ಸಚಿವರಿಗೆ ಜನಪ್ರತಿನಿಧಿಗಳಿಗೆ ಸಂಬಂಧಪಟ್ಟ ಎಲ್ಲಾ ಇಲಾಖೆ ಅಧಿಕಾರಿಗಳಿಗೂ ಎಷ್ಟು ಬಾರಿ ಮನವಿ ಮಾಡಿದರು ಪ್ರಯೋಜನಕ್ಕೆ ಬಾರದ ಹಿನ್ನೆಲೆಯಲ್ಲಿ ಸಮಾಜ ಸೇವಕರ ಈ ಸಾಧನೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ
ಈತನಕ ತನ್ನ ಸ್ವಂತ ಹಣದಿಂದ ಲಕ್ಷಾಂತರ ರೂಪಾಯಿ ಹಣ ವೆಚ್ಚ ಮಾಡಿ ಕೆಂಪು ಮಣ್ಣಿನ ರಸ್ತೆ ನಿರ್ಮಾಣ ಮಾಡಿರುವುದು ಪ್ರಯಾಣಿಕರ ಅನುಕೂಲಕ್ಕಾಗಿ ಮುಂದಿನ ದಿನದಲ್ಲಾದರೂ ಶಾಶ್ವತ ರೀತಿಯ ವೈಜ್ಞಾನಿಕ ರೀತಿಯ ಡಾಂಬರು ರಸ್ತೆ ಅಥವಾ ಕಾಂಕ್ರೇಟು ರಸ್ತೆ ನಿರ್ಮಾಣ ಮಾಡಿಕೊಡಿ ಎಂದು ಸಮಾಜಸೇವಕ ಸುಬ್ರಹ್ಮಣ್ಯ ಬಿಜೂರು ಸರಕಾರಕ್ಕೆ ಮನವಿ ಮಾಡಿದ್ದಾರೆ
ಸಮಾಜ ಸೇವಕ ಸುಬ್ರಮಣ್ಯ ಬಿಜೂರು ರವರ ಈ ಮಾನವೀಯತೆಯ ಕಾರ್ಯಕ್ಕೆ ಪ್ರಯಾಣಿಕರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಸರಕಾರದಿಂದ ಎಂಟು ಕೋಟಿಗೊ ಮಿಕ್ಕಿ ಹಣ ಬೈಂದೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಲೋಕಾರ್ಪಣೆ ಆಗಿದ್ದರೂ ಕೂಡ ಹೆಚ್ಚಿನ ಮೂಲಸೌಕರ್ಯ ಇಲ್ಲದೆ ಬಸ್ ನಿಲ್ದಾಣ ಮೂಲೆಗುಂಪಾಗುತ್ತಿದೆ ಎಂದು ಎಂದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ