ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Udupi ಕುಂದಾಪುರ : ಚಿತ್ತೇರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಾಗಮಂಡಲೋತ್ಸವ ಕಾರ್ಯಕ್ರಮದ ಚಪ್ಪರ ಮುಹೂರ್ತ

Udupi ಕುಂದಾಪುರ : ಚಿತ್ತೇರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಾಗಮಂಡಲೋತ್ಸವ ಕಾರ್ಯಕ್ರಮದ ಚಪ್ಪರ ಮುಹೂರ್ತ

ಕುಂದಾಪುರ: ಇದೇ ಬರುವ ಏಪ್ರಿಲ್ 12 ರಂದು ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಆರಾಟೆ ಭಾಗದ ಚಿತ್ತೇರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ಏಕ: ಪವಿತ್ರ ನಾಗಮಂಡಲೋತ್ಸವಕ್ಕೆ ಚಪ್ಪರ ಮುಹೂರ್ತ ಬುಧವಾರ ಜರಗಿತು.
ಶ್ರೀ ದೇಗುಲದ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪಕ್ಕದ ಗದ್ದೆಯಲ್ಲಿ ನಡೆಯಲಿರುವ ಏಕಪವಿತ್ರ ನಾಗ ಮಂಡಲೋತ್ಸವ ಕಾರ್ಯಕ್ರಮಕ್ಕೆ ಮುಂಚಿತವಾಗಿ ನಡೆಯುವ ಶ್ರೀ ದೇವರ ಕಾರ್ಯಕ್ಕೆ ಚಪ್ಪರ ಮುಹೂರ್ತ ಕಾರ್ಯಕ್ರಮವನ್ನು ವೇ.ಮೂ ಶ್ರೀಶ ಅಡಿಗ ಮುಳ್ಳಿಕಟ್ಟೆ ಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಸಲ್ಲಿಸಿ, ಅಡಿಕೆ ಮರವನ್ನು ನಿಲ್ಲಿಸುವ ಮೂಲಕ ಚಪ್ಪರ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಚಪ್ಪರ ಮುಹೂರ್ತ ಕಾರ್ಯದಲ್ಲಿ ಅರ್ಚಕರು ಸೇರಿದಂತೆ ಊರಿನ ಹಿರಿಯರು ಸಮಸ್ತ ಹೊಸಾಡು ಗ್ರಾಮದ ಗ್ರಾಮಸ್ಥರು ಹಾಜರಿದ್ದರು 

ಏಕ ಪವಿತ್ರ ನಾಗ ಮಂಡಲೋತ್ಸವ ಕಾರ್ಯಕ್ರಮದ ಚಪ್ಪರ ಮುಹೂರ್ತ ಕಾರ್ಯದಲ್ಲಿ ಊರಿನ ಸಮಸ್ತ ಬಂಧುಗಳು ಹಾಜರಿಂದು ಈ ಪುಣ್ಯದ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಿ ಶ್ರೀ ದೇವರ ಮುಡಿಗಂಧ ಪ್ರಸಾದವನ್ನು ಸ್ವೀಕರಿಸಿದರು ಹಾಗೂ ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು ಸೇರಿದಂತೆ ಊರಿನ ಮುಖಂಡರು ಹಾಜರಿದ್ದರು

ವರದಿ: ರಾಜೇಶ್ ಪೂಜಾರಿ ತ್ರಾಸಿ 

Ads on article

Advertise in articles 1

advertising articles 2

Advertise under the article