ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Kundapura:  ಹೃದಯ ವಿದ್ರಾವಕ ಸುದ್ದಿ -ಗಾರೆ ಕೆಲಸದ ವೇಳೆ ವಿದ್ಯುತ್ ಶಾಕ್ : ಯುವಕ ದುರ್ಮರಣ…!!

Kundapura: ಹೃದಯ ವಿದ್ರಾವಕ ಸುದ್ದಿ -ಗಾರೆ ಕೆಲಸದ ವೇಳೆ ವಿದ್ಯುತ್ ಶಾಕ್ : ಯುವಕ ದುರ್ಮರಣ…!!

ಕುಂದಾಪುರ: ನಿರ್ಮಾಣ ಹಂತದ ಮನೆಯೊಂದರ ಗಾರೆ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿಗೆ ಕಬ್ಬಿಣದ ಏಣಿ ಸ್ಪರ್ಶಿಸಿ ವಿದ್ಯುತ್‌ ಆಘಾತದಿಂದ ಯುವಕನೋರ್ವ ಮೃತಪಟ್ಟ ಘಟನೆ ಕುಂದಾಪುರದ ಕಡ್ಡಿಮನೆ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಹೌದು ಶಿವರಾಜ್ ರವರ ತಂದೆ ಅನಾರೋಗ್ಯದಿಂದ ಬಳುತ್ತಿರುವ ಹಿನ್ನೆಲೆಯಲ್ಲಿ ಅವರ ಔಷಧ ಉಪಚಾರಕ್ಕೆ ದಿನಲು ದುಡಿಯುತ್ತಿರುವ ಮಗ ಇಂದು ಎಲ್ಲರನ್ನು ಬಿಟ್ಟು ಅಗಲಿರುವುದು ನೋಡಿದರೆ ದೇವರೇ ಇಂತಹ ಬಡ ಕುಟುಂಬಕ್ಕೆ ಕ್ರೂರಿ ಆದೆಯ ದೇವರೇ ಎಂದು ಊರಿನವರು ಹೇಳುವಂತಾಗಿದೆ, ಹೌದು
ಕುಂದಾಪುರ ತಾಲೂಕಿನ ಮೂಡ್ಲಕಟ್ಟೆ ಸಮೀಪದ ಕಂದಾವರ ಸಾಂತಾವರ ನಿವಾಸಿ ಶಿವರಾಜ್ (35) ಮೃತ ಯುವಕ. ಇವರು ಕಳೆದ 15 ವರ್ಷಗಳಿಂದ ಗಾರೆ ವೃತ್ತಿ ಮಾಡಿಕೊಂಡಿದ್ದರು.

ಕುಂದಾಪುರ ಹೊರವಲಯದ ಕಡ್ಡಿಮನೆ ರಸ್ತೆಯ ಕೊನೆಯಲ್ಲಿ ಪ್ರವೀಣ್ ಖಾರ್ವಿ ಎನ್ನುವರ ನಿರ್ಮಾಣ ಹಂತದಲ್ಲಿರುವ ಮನೆಯ ಗಾರೆ ಕೆಲಸಕ್ಕೆ ಸೋಮವಾರ ಶಿವರಾಜ್ ಹಾಗೂ ಇತರರು ಬಂದಿದ್ದು ತನ್ನ ಜೊತೆ ಕೆಲಸ ಮಾಡುವ ಇನ್ನಿಬ್ಬರು ಕೆಲಸಗಾರರೊಂದಿಗೆ ಕಬ್ಬಿಣದ ಏಣಿಯನ್ನು ಎತ್ತಿ ಬೇರೆ ಕಡೆಗೆ ಹೊತ್ತೊಯ್ಯುವಾಗ ಆಕಸ್ಮಿಕವಾಗಿ ಏಣಿಯು ಆಯತಪ್ಪಿ ಅಲ್ಲಿಯೇ ಹಾದು ಹೋಗಿರುವ ವಿದ್ಯುತ್ ತಂತಿಗೆ ತಾಗಿದೆ.
ಹೀಗಾಗಿ ವಿದ್ಯುತ್ ಶಾಕ್ ತಗುಲಿದ್ದರಿಂದ ಶಿವರಾಜ್ ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಶಿವರಾಜ್ ಮೃತಪಟ್ಟಿದ್ದರು. ಘಟನೆಯಲ್ಲಿ ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ.

ಕುಂದಾಪುರ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಪುಷ್ಪಾ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article