ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Kundapura  SCAM... SCAM... SCAM...🤔ಎಲ್ಕಂಡ್ರು ಸ್ಕ್ಯಾಮ್👹 ಬ್ಯಾಂಕಲ್ಲೂ ಸ್ಕ್ಯಾಮ್

Kundapura SCAM... SCAM... SCAM...🤔ಎಲ್ಕಂಡ್ರು ಸ್ಕ್ಯಾಮ್👹 ಬ್ಯಾಂಕಲ್ಲೂ ಸ್ಕ್ಯಾಮ್

ನಂದಾ ಕುಂದಾಪುರ
 ಮಂಗಳೂರಿನ 68 ವರ್ಷದ ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರು, ತಾನು ಇಡೀ ಜೀವಮಾನದಲ್ಲಿ ದುಡಿದು ಉಳಿಸಿದ ಸುಮಾರು 28 ಲಕ್ಷ ಹಣವನ್ನು ತನ್ನ ನಿವೃತ್ತಿ ಜೀವನಕ್ಕೋಸ್ಕರ ಬ್ಯಾಂಕ್ನಲ್ಲಿಟ್ಟಿದ್ದರು. ಸೈಬರ್ ಖದೀಮರು ಆಕೆಯ ಅಕೌಂಟ್ ಹ್ಯಾಕ್ ಮಾಡಿ ಅಷ್ಟೂ ಹಣವನ್ನು ದೋಚಿದ್ರು. ಪಾಪ, ಈ ಇಳೀ ವಯಸ್ಸಲ್ಲಿ ಅವರ ಸ್ಥಿತಿ ಹೇಗಾಗಬೇಡ? 

ಇಲ್ಲಿಯವರೆಗೆ ನಾವೆಲ್ಲರೂ "BANK", ಉಳಿದೆಲ್ಲಾ ಹಣಕಾಸು ಸಂಸ್ಥೆಗಳಿಗಿಂತ "SAFE" ಅಂತ ತಿಳಿದಿದ್ದೆವು. ಇಲ್ಲೂ ಹೀಗಾದ್ರೆ ಹೇಗೆ? ನಾವು ಯಾರನ್ನು ನಂಬೋದು? "ಇಂದು ಗಳಿಸಿ- ನಾಳೆಗಾಗಿ ಉಳಿಸಿ" ಎನ್ನೋ SLOGAN ಈಗೀಗ ಅರ್ಥ ಕಳ್ಕೊಳ್ತಿದೆ. 
 ಹಣ ಕೈಲಿದ್ರೆ ಖಾಲಿಯಾಗುತ್ತೆ, ಮನೆಯಲ್ಲಿಟ್ಟರೆ ಕಳ್ಳರ ಹೆದರಿಕೆ, ಅಂತ ನಾವೆಲ್ಲರೂ ಹಣವನ್ನು ಬ್ಯಾಂಕ್ ನಲ್ಲಿ ಇಡ್ತೇವೆ. "ಮನೆ ಕಟ್ಟಲಿಕ್ಕೆ, ಕಾರು ಕೊಳ್ಳಲಿಕ್ಕೆ, ಮಕ್ಕಳ ಫೀಸ್ ಕಟ್ಟಲಿಕ್ಕೆ, ಇಲ್ಲಾ ಮದುವೆಯ ಖರ್ಚಿಗೆ ಅಂತ ಸಾಮಾನ್ಯವಾಗಿ ಎಲ್ಲರೂ ಹಣವನ್ನು ಬ್ಯಾಂಕಲ್ಲಿಡ್ತಾರೆ. ಬ್ಯಾಂಕಿನಲ್ಲಿಟ್ಟ ಹಣಕ್ಕೂ ಭದ್ರತೆ ಇಲ್ಲ ಅಂದ್ರೆ ಹೇಗೆ ? ಇದೀಗ ಆಕೆಗಾದ ನಷ್ಟವನ್ನ ಯಾರು ಭರಿಸುತ್ತಾರೆ ? Bank ಯಾ ಸರ್ಕಾರ ಈ ಬಗ್ಗೆ ಏನು ಹೇಳುತ್ತೆ?         

ಈ ಮೊದಲು, "OTP ಕೊಟ್ಟಾಗ, LINK ಒತ್ತಿದಾಗ, ATM ನ PIN" ಹೇಳಿದಾಗಲೆಲ್ಲ, ನಮ್ಮ 
ಅಜಾಗರೂಕತೆಯಿಂದ ನಾವು ಹಣ ಕಳ್ಕೋತಿದ್ವಿ. ಇಲ್ಲಿ ಈಗ ಇದೇನೂ ನಡೆಯದೆ, ನಮ್ಮ ಅರಿವಿಗೇ ಬಾರದೆ, Silent ಆಗಿ ನಮ್ಮ A/c ಖಾಲಿ ಮಾಡೋ ಇಂದ್ರಜಾಲ ವಿದ್ಯೆ ಕಲಿತ ಸೈಬರ್ ಕಳ್ಳರ ಹಾವಳಿ ಜಾಸ್ತಿಯಾಗಿದೆ. ಸರ್ಕಾರ ಈ ಬಗ್ಗೆ ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಅವರ ಹೆಡೆಮುರಿ ಕಟ್ಟಿ, ಅಮಾಯಕ ಬ್ಯಾಂಕ್ ಗ್ರಾಹಕರನ್ನು ರಕ್ಷಿಸಬೇಕಾಗಿದೆ. ಕಳೆದ 2-3 ವರ್ಷಗಳಿಂದ ಈ ಕರಾಳ ದಂಧೆ ವಿಪರೀತವಾಗಿ ನಡೆಯುತ್ತಿದ್ದರೂ, ಸೈಬರ್ ಕ್ರೈಂ ತಂಡದವರು ಎಷ್ಟು ಜನರನ್ನು ಹಿಡಿದರು? ಅದರಲ್ಲಿ ಎಷ್ಟು ಜನರಿಗೆ ಶಿಕ್ಷೆ ಆಗಿದೆ? ಎಷ್ಟು ಹಣವನ್ನು ವಸೂಲಿ ಮಾಡಿ ಕಳ್ಕೊಂಡವರಿಗೆ ಹಂಚಲಾಗಿದೆ? ಎಂಬ ಯಾವುದೇ ಮಾಹಿತಿ ಸಾರ್ವಜನಿಕರಿಗೆ ಸಿಕ್ತಾ ಇಲ್ಲ. ಈ ರೀತಿ ಮೋಸ ಮಾಡುವವರಿಗೆ ಗಲ್ಲು ಶಿಕ್ಷೆಯೇ ನೀಡಬೇಕು. ಏಕೆಂದ್ರೆ ಇದು ಉದ್ದೇಶ ಪೂರ್ವಕವಾಗಿ ಮಾಡೋ ಕ್ರತ್ಯ. ಇದನ್ನೇ ಕುಲಕಸುಬನ್ನಾಗಿ ಮಾಡಿಕೊಂಡು ಮೋಸ ಮಾಡುವವರಿಗೆ ಯಾವ ಕಾರಣಕ್ಕೂ ಕ್ಷಮೆ ಸಿಗಬಾರದು. ಆಗಲಾದರೂ ಈ ಮೋಸದ ಆಟ ನಿಲ್ಲುತ್ತೋ ಏನೋ? ಕಾದು ನೋಡೋಣ. ಏನಂತೀರಿ?
    ✍️ 07/03/26
ನಂದಾ ಕುಂದಾಪುರ🙏
ಆರೋಗ್ಯ & ಜೀವವಿಮಾ ಸಲಹೆಗಾರರು

Ads on article

Advertise in articles 1

advertising articles 2

Advertise under the article