ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Bengaluru ಗ್ಯಾಸ್‌ ಸಿಲಿಂಡ‌ರ್ ಅಭಾವದ ಬೆನ್ನಲ್ಲೇ ಪೊಲೀಸರ ಬಿರುಸಿನ ಕಾರ್ಯಾಚರಣೆ: ಹೊಸಕೋಟೆ ಭಾಗದಲ್ಲಿ ಗೋಡೌನ್‌ಗಳ ಪರಿಶೀಲನೆ

Bengaluru ಗ್ಯಾಸ್‌ ಸಿಲಿಂಡ‌ರ್ ಅಭಾವದ ಬೆನ್ನಲ್ಲೇ ಪೊಲೀಸರ ಬಿರುಸಿನ ಕಾರ್ಯಾಚರಣೆ: ಹೊಸಕೋಟೆ ಭಾಗದಲ್ಲಿ ಗೋಡೌನ್‌ಗಳ ಪರಿಶೀಲನೆ

ಹೊಸಕೋಟೆ: ರಾಜಾದಂತ ವಾಣಿಜ ಬಳಕೆಯ ಟಾಗಿರ ಸಿಲಿಂಡ‌ರ್ ಪೂರೈ ಹಿನ್ನೆಲೆಯಲ್ಲಿ ಪರಿಸ್ಥಿತಿಯ ದುರ್ಲಾಭ ಪಡೆದು ಅಕ್ರಮ ದಾಸ್ತಾನು ಮಾಡುವುದನ್ನು ತಡೆಯಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಹೊಸಕೋಟೆ ತಾಲೂಕಿನ ಅನಗೊಂಡನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿರುವ ಗ್ಯಾಸ್‌ ಗೋಡೌನ್‌ಗಳಿಗೆ ಇಂದು ಪೊಲೀಸರ ತಂಡ ಭೇಟಿ ನೀಡಿತು. ಇನ್ಸೆಕ್ಟರ್ ಗೋವಿಂದ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಅಡುಗೆ ಅನಿಲದ ದಾಸ್ತಾನು ಮತ್ತು ವಿತರಣೆಯ ಮೇಲೆ ತೀವ್ರ ನಿಗಾ ವಹಿಸಲಾಯಿತು.
ಗ್ಯಾಸ್‌ ಕೊರತೆಯ ನೆಪದಲ್ಲಿ ಸಿಲಿಂಡರ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಳ್ಳುವುದು ಅಥವಾ ಹೆಚ್ಚಿನ ಬೆಲೆಗೆ ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಕಂಡುಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇನ್ಸೆಕ್ಟರ್ ಗೋವಿಂದ್ ಮಾಲೀಕರಿಗೆ ಎಚ್ಚರಿಕೆ ನೀಡಿದರು. ಪ್ರಸ್ತುತ ಗೋಡೌನ್‌ನಲ್ಲಿರುವ ಗ್ಯಾಸ್‌ ಸಿಲಿಂಡರ್‌ಗಳ ಲಭ್ಯತೆ ಮತ್ತು ಅವುಗಳ ವಿತರಣೆಯ ಅಂಕಿ-ಅಂಶಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.

ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮವಾಗಿ ಗ್ಯಾಸ್‌ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಬಗ್ಗೆ ಸಚಿವರೇ ಹೇಳಿಕೆ ನೀಡಿರುವ ಬೆನ್ನಲ್ಲೇ, ಸಾರ್ವಜನಿಕರಿಗೆ ಮತ್ತು ಹೋಟೆಲ್ ಉದ್ಯಮಿಗಳಿಗೆ ಅನಗತ್ಯ ತೊಂದರೆಯಾಗದಂತೆ ನೋಡಿಕೊಳ್ಳಲು ಪೊಲೀಸರು ಈ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಲು ನಿರಂತರ ತಪಾಸಣೆ ನಡೆಸುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದಾಗೆ
ಈ ಕಾರ್ಯಾಚರಣೆಯಿಂದಾಗಿ ಅಕ್ರಮವಾಗಿ ಸಿಲಿಂಡ‌ರ್ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದವರಲ್ಲಿ ನಡುಕ ಉಂಟಾಗಿದ್ದು, ಪಾರದರ್ಶಕ ವಿತರಣೆಗೆ ಪೊಲೀಸರು ಒತ್ತು ನೀಡಿದ್ದಾರೆ. ರಾಜ್ಯದ್ಯಂತ ಇನ್ನೂ ಹಲವು ಅಕ್ರಮ ಪ್ರಕರಣಗಳು ಬಯಲಿಗೆ ಬರುವ ಸಾಧ್ಯತೆ ಇದೆ!!

Ads on article

Advertise in articles 1

advertising articles 2

Advertise under the article