ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Kundapura ಕರ್ನಾಟಕ ಸಾರ್ವಭೌಮ ಪ್ರಶಸ್ತಿ 2026ಗೆ ಬಾಜನರಾದ ಕಂಡ್ಲೂರು ದಸ್ತಗಿರಿ ಸಾಹೇಬ್

Kundapura ಕರ್ನಾಟಕ ಸಾರ್ವಭೌಮ ಪ್ರಶಸ್ತಿ 2026ಗೆ ಬಾಜನರಾದ ಕಂಡ್ಲೂರು ದಸ್ತಗಿರಿ ಸಾಹೇಬ್

ಕುಂದಾಪುರ: ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿ ಹಾಗೂ ಕಂಡ್ಲೂರು ಗ್ರಾಮ ಪಂಚಾಯತ್ ನಲ್ಲಿ ಮೂರು ಬಾರಿ ಅಧ್ಯಕ್ಷರಾಗಿ ರಾಜಕೀಯದಲ್ಲೂ ಯಾರಿಗೂ ತಾರತಮ್ಯ ಮಾಡದೆ ಜನಮೆಚ್ಚುಗೆ ಗಳಿಸಿದ ಹೆಮ್ಮೆಯ ರಾಜಕಾರಣಿ ದಸ್ತಗಿರಿ ಸಾಹೇಬ್ ಕಂಡ್ಲೂರು ರವರು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ್ರು ಬಣ ಕೊಡ ಮಾಡುವ ಕರ್ನಾಟಕ  ಸಾರ್ವಭೌಮ ಪ್ರಶಸ್ತಿಗೆ-2026 ಉಡುಪಿ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.
ಹೌದು ಸರಳ ಸಜ್ಜನಿಕೆಯ ವ್ಯಕ್ತಿ ಕೊಡುಗೈ ದಾನಿ, ಆಪದ್ಬಾಂಧವ, ಉದ್ಯಮಿ, ಸರಳ ರಾಜಕಾರಣಿ ಎಂದೇ ಪ್ರಖ್ಯಾತಿಗೆ ಹೆಸರಾದ ದಸ್ತಗಿರಿ ಸಾಹೇಬ್ ಕಂಡ್ಲೂರು ಅವರು ಈ ಪ್ರಶಸ್ತಿಗೆ ಆಯ್ಕೆಯಾದರು. ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಪ್ರಭಾಕರ್ ಪೂಜಾರಿ ಮತ್ತು ಜಿಲ್ಲೆಯ ಸಂಘಟನೆ ಹಿರಿಯರು ಸೇರಿದಂತೆ ಪದಾಧಿಕಾರಿಗಳು ಸೇರಿ 2026 ರಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನೀಡುವಂತ ಕರ್ನಾಟಕ ಸಾರ್ವಭೌಮ ಪ್ರಶಸ್ತಿಯನ್ನು ಕುಂದಾಪುರ ತಾಲೂಕಿನ ಕಂಡ್ಲೂರು ದಸ್ತಗಿರಿ ಸಾಹೇಬರಿಗೆ ನೀಡುವ ಬಗ್ಗೆ ಸರ್ವಸದಸ್ಯರ ಒಮ್ಮತದಿಂದ ಆಯ್ಕೆ ಮಾಡಲಾಯಿತು.
ಈ ವೇಳೆ ದಸ್ತಗಿರಿ ಸಾಹೇಬರು ಮಾತನಾಡಿ ಕನ್ನಡ ಸಂಘಟನೆ ಇಂತಹ ಅದ್ಭುತ ಪ್ರಶಸ್ತಿ ನೀಡಿ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಮತ್ತು ನಾನು ಚಿಕ್ಕವನಾಗಿದ್ದಾಗ ಶಿವಮೊಗ್ಗ ಬೆಂಗಳೂರು ಭಾಗದಲ್ಲಿ ಕನ್ನಡ ರಕ್ಷಣಾ ವೇದಿಕೆ ಬಾವುಟ ಹಿಡಿದಿದ್ದೇನೆ ಮತ್ತು ಈಗ ನನಗೆ ಕನ್ನಡಿಗರ ಸೇವೆ ಮಾಡಲು ಅವಕಾಶ ಸಿಕ್ಕಿದೆ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜನರಿಗೋಸ್ಕರ ಹಗಲು ರಾತ್ರಿ ಎನ್ನದೆ ಸೇವೆ ಮಾಡುತ್ತೇನೆ ಎಂದರು.
ಈ ಸಂದರ್ಭ ಕರವೇ ಜಿಲ್ಲಾಧ್ಯಕ್ಷ ಅ. ರಾ ಪ್ರಭಾಕರ್ ಪೂಜಾರಿ, ಪುರುಷೋತ್ತಮ್ ಪೂಜಾರಿ ಕೊಡಪಾಡಿ, ಕುಂದಾಪುರ ತಾಲೂಕು ಅಧ್ಯಕ್ಷ ಸಂತೋಷ್ ಶೆಟ್ಟಿ ಪಡುಮುಂಡು , ಬೈಂದೂರು ತಾಲೂಕು ಅಧ್ಯಕ್ಷ ರಾಜೇಶ್ ಪೂಜಾರಿ, ಕುಂದಾಪುರ ತಾಲೂಕು ಪ್ರಧಾನ ಕಾರ್ಯದರ್ಶಿ ಕೃಷ್ಣ ಮೊಗವೀರ, ಕುಂದಾಪುರ ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ನಾಗರಾಜ್ ಕೆಂಚನೂರು ಗೋಪಾಲ್ ಕಾವ್ರಾಡಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.
ವರದಿ: ಸುರೇಶ್ ಅಮಾಸೆ ಬೈಲು ಕೋಸ್ಟಲ್ ನ್ಯೂಸ್ ಕುಂದಾಪುರ 

Ads on article

Advertise in articles 1

advertising articles 2

Advertise under the article