ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Udupi  ಕಾರ್ಕಳದಲ್ಲಿ ಅಂದರ್‌-ಬಾಹರ್ ಜುಗಾರಿ ಅಡ್ಡೆಗೆ ಪೊಲೀಸರ ದಾಳಿ : 8 ಮಂದಿ ಬಂಧನ..!!

Udupi ಕಾರ್ಕಳದಲ್ಲಿ ಅಂದರ್‌-ಬಾಹರ್ ಜುಗಾರಿ ಅಡ್ಡೆಗೆ ಪೊಲೀಸರ ದಾಳಿ : 8 ಮಂದಿ ಬಂಧನ..!!

ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಜುಗಾರಿ ಆಟ ನಡೆಯುತ್ತಿದ್ದ ಅಡ್ಡೆಗೆ ಕಾರ್ಕಳ ನಗರ ಪೊಲೀಸರು ದಾಳಿ ನಡೆಸಿದ್ದು, 8 ಮಂದಿಯನ್ನು ಬಂಧಿಸಿರುವ ಘಟನೆ ನಡೆದಿದೆ.

ಫೆಬ್ರವರಿ 7ರ ರಾತ್ರಿ ಸುಮಾರು 8 ಗಂಟೆ 45 ನಿಮಿಷದ ವೇಳೆಗೆ, ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ಬೈಲ್ ಬೆಟ್ಟು ಪ್ರದೇಶದಲ್ಲಿರುವ ಸಾದ್ವಿನ್ ಎಂಬುವರ ಮನೆಯ ಮೊದಲ ಮಹಡಿಯಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿರಿಸಿ ಇಸ್ಪೀಟ್ ಎಲೆಗಳಿಂದ ಅಂದರ್-ಬಾಹರ್ ಎಂಬ ಜುಗಾರಿ ಆಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಮುರುಳೀಧರ ನಾಯ್ಕ್ ಹಾಗೂ ಸಿಬ್ಬಂದಿ ತಂಡ ದಾಳಿ ನಡೆಸಿದೆ.

ದಾಳಿಯ ವೇಳೆ 22,690 ರೂಪಾಯಿ ನಗದು, 52 ಇಸ್ಪೀಟ್ ಎಲೆಗಳು, 16 ಹೊಸ ಇಸ್ಪೀಟ್ ಎಲೆಗಳ ಪ್ಯಾಕೆಟ್, 10 ಪ್ಲಾಸ್ಟಿಕ್ ಕುರ್ಚಿ, 4 ಪ್ಲಾಸ್ಟಿಕ್ ಟೇಬಲ್ ಹಾಗೂ 9 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣದಲ್ಲಿ ಉಮ್ಮರ ಫಾರೂಕ್, ಅಬ್ದುಲ್ ಅಜೀಜ್, ಸತೀಶ ಎಸ್ ಪ್ರಭು, ಅಬ್ದುಲ್ ರಹಿಮಾನ್, ಸಮೀರ್, ಸುಲೇಮಾನ್, ಇರ್ಪಾನ್ ಹಾಗೂ ಚೇತಕ್ ಸೇರಿದಂತೆ 8 ಆರೋಪಿಗಳನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Ads on article

Advertise in articles 1

advertising articles 2

Advertise under the article