ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

kundapura:ಕುಂದಾಪುರಸಂಚಾರ ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡ ಪೊಲೀಸ್  ಸಿಬ್ಬಂದಿಗಳಿಗೆ ಬೀಳ್ಕೊಡುಗೆ ಸಮಾರಂಭ

kundapura:ಕುಂದಾಪುರಸಂಚಾರ ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡ ಪೊಲೀಸ್ ಸಿಬ್ಬಂದಿಗಳಿಗೆ ಬೀಳ್ಕೊಡುಗೆ ಸಮಾರಂಭ

ಕುಂದಾಪುರ : 
ಕುಂದಾಪುರ ಪೊಲೀಸ್ ಠಾಣೆಯಿಂದ ತಮ್ಮ ಸ್ವಂತ ಕೋರಿಕೆಯ ಮೇರೆಗೆ ಉಡುಪಿ ಸಂಚಾರ ಠಾಣೆಗೆ ವರ್ಗಾವಣೆ ಗೊಂಡ ASI ನರೇಶ್ ಕೋಟ್ಯನ್ ಹಾಗೂ ಸಂಗಪ್ಪ PC ಬೆಳಗಾಂ (ಬೆಳಗಾವಿ) ಠಾಣೆಗೆ ವರ್ಗಾವಣೆ ಗೊಂಡ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ತಮ್ಮ ಜೊತೆಯಲ್ಲಿ ಕೆಲಸ ಮಾಡಿರುವ ಆತ್ಮೀಯ ಸ್ನೇಹಿತರನ್ನು ಹೃದಯಪೂರ್ವಕವಾಗಿ ಆಶೀರ್ವದಿಸಿ ಶುಭ ಕೋರಿದರು 
ಇಲ್ಲಿಯ ತನಕ ನಮ್ಮ ಜೊತೆಯಲ್ಲಿ ಇದ್ದು ತಮ್ಮ ಸ್ವಂತ ಕೋರಿಕೆಯ ಮೇರೆಗೆ ವರ್ಗಾವಣೆಗೊಂಡಂತ ನರೇಶ್ ಕೋಟ್ಯಾನ್ ಹಾಗೂ ಸಂಗಪ್ಪ ಗಾಣಿಗ ರವರಿಗೆ ಆತ್ಮೀಯವಾಗಿ ಬೀಳ್ಕೊಡುಗೆ ಕಾರ್ಯಕ್ರಮ16- 02- 2026 ಸೋಮವಾರ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಜರುಗಿತು 

ಕಾರ್ಯಕ್ರಮದ ವೇಳೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಠಾಣಾಧಿಕಾರಿ ಅನುಪ್ ನಾಯಕ್ ಹಾಗೂ ಸುಧಾ ಪ್ರಭು ರವರು ಉಪಸ್ಥಿತರಿದ್ದರು 
ಕುಂದಾಪುರ ಸಂಚಾರ ಠಾಣೆ ಹೆಡ್ ಕಾನ್ಸ್ಟೇಬಲ್ ವೆಂಕಟೇಶ್ ರವರು ವಂದಿಸಿ, ಸ್ವಾಗತಿಸಿದರು ASI ನಾಗರಾಜ್ ಕುಲಾಲ್ ಧನ್ಯವಾದ ಹೇಳಿದರು 

ಈ ಸಂದರ್ಭ ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಗಳು ವರ್ಗಾವಣೆಗೊಂಡಂತ ಸಿಬ್ಬಂದಿಗಳಿಗೆ ಸಿಹಿ ತಿಂಡಿ ನೀಡಿ ಬೀಳ್ಕೊಡುಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದರು.

Ads on article

Advertise in articles 1

advertising articles 2

Advertise under the article