BAINDURU ಬೈಂದೂರು: ಹೆಸರಿಗೆ KSRTC ಬಸ್ ನಿಲ್ದಾಣ ಪ್ರಯಾಣಿಕರಿಗೆ ಪ್ರಯೋಜನ ಆಗದ ಯೋಜನೆ: ಸಮಾಜ ಸೇವಕ ರವೀಂದ್ರ ಶೇಟ್
Thursday, February 19, 2026
ಬೈಂದೂರು :ತಾಲೂಕು
ಯಡ್ತರೆ ಬಳಿ ನೂತನ KSRTC ಬಸ್ ಸ್ಟಾಂಡ್ ಉದ್ಘಾಟನೆ ಆಗಿ ಎರಡು ತಿಂಗಳು ಕಳೆದಿದೆ ಆದರೆ ಪ್ರಯಾಣಿಕರಿಗೆ ಮಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಆಗಿದ್ದಂತೂ ಸತ್ಯ..!
KSRTC ಬಸ್ ನಿಲ್ದಾಣಗೆ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಸರಕಾರ ಬೇಜವಾಬ್ದಾರಿಯಿಂದ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯ ದೊರೆಯುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ಹೊನ್ನಾವರ Division Service Road ಬಿಡಲು ಒಪ್ಪದೇ ಇರುವುದೇ ಮೂಲ ಕಾರಣವಾಗಿದೆ,
ಬೈಂದೂರು ಬಸ್ ಸ್ಟಾಂಡ್ ನಲ್ಲಿ ರಿಜರ್ವೇಶ್ ಟಿಕೆಟ್ ಕೌಂಟರ್ ಕಂಪ್ಯೂಟರ್ ಇಲ್ಲಾ.
ಬಸ್ ಸ್ಟಾಂಡ್ ಗೆ ಸರ್ಕಾರದ ಲ್ಯಾಂಡ್ ಫೋನ್ OR ಸರ್ಕಾರದ ಮೊಬೈಲ್ ಸಂಖ್ಯೆ ಇಲ್ಲಾ.
ನೂತನ ಬಸ್ ಸ್ಟಾಂಡ್ ನಲ್ಲಿ ಯಾವುದೇ ಹೋಟೆಲ್-ಅಂಗಡಿ ಮುಂಗಟ್ಟ್ ಗಳು ಇನ್ನು ಯಾವುದೇ ತೆರೆದಿಲ್ಲ
ಬಸ್ ಸ್ಟಾಂಡ್ ನಲ್ಲಿ ಊರಿಂದ ಊರಿಗೆ ಹೋಗುವವರಿಗೆ ಸಾರ್ವಜನಿಕರ ಅನುಕೂಲಕ್ಕೆ ಮಾಹಿತಿಗಾಗಿ ಯಾವುದೇ TV OR ಡಿಸ್ಪ್ಲೇ ಇಲ್ಲಾ.
ಬೇರೆ ಬೇರೆ ಜಿಲ್ಲೆ ,ತಾಲೂಕು ಬಂದವರಿಗೆ ಬಸ್ ಗಳು KSRTC ಸ್ಟಾಂಡ್ ಗೆ ಹೋಗುವುದಿಲ್ಲ.
KSRTC ಬಸ್ ಸ್ಟಾಂಡ್ ನಲ್ಲಿ ಬೇರೆ ಬೇರೆ ಊರುಗಳಿಗೆ ಹೋಗುವವರು ಬರುವವರು ಪ್ರತಿ ದಿನ ಪ್ರಯಾಣ ಮಾಡುವ ಮಹಿಳೆಯರು ಮದ್ಯೆ ದಾರಿಯಲ್ಲಿ ರಾತ್ರಿ ವೇಳೆಯಲ್ಲಿ ಪರದಾಡುವ ಪರಿಸ್ಥಿತಿ,
ಇವಾಗಲೇ ಯಡ್ತರೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡಲಾಗಿದೆ ಆದರೆ ಸಾರ್ವಜನಿಕರ ಅನುಕೂಲ ವಾಗದೆ ಶೂನ್ಯ ಆಗಿ ಪರಿಗಣಿಸಿದೆ, ತಕ್ಷಣ ಭೂ ಸ್ವಾದಿನ ಅಧಿಕಾರಿಗಳು ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ ಹಾಗೂ IRB ಟೋಲ್ ರಸ್ತೆಗೆ ಸಂಬಂಧ ಪಟ್ಟ ಅಧಿಕಾರಿಗಳೇ NH 66 ರಾಷ್ಟ್ರಿಯ ಹೆದ್ದಾರಿಗೆ ಬಸ್ ಸ್ಟಾಂಡ್ ಹೋಗಲು ಸರ್ವಿಸ್ ರಸ್ತೆ OR U ಟರ್ನ್ ಜಂಕ್ಷನ್ ಮಾಡಬೇಕಾಗಿ ನಾಗರಿಕ ಸಮಿತಿ ಹಾಗೂ ಸಮಾಜಸೇವಕ ರವೀಂದ್ರ ಶೇಟ್ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ