Aಬೈಂದೂರು:ಜನಾರ್ದನ್ ಕೆ. ಮರವಂತೆ ಅವರಿಗೆ ಆತ್ಮೀಯ ಸನ್ಮಾನ: ಮರವಂತೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಸಂಭ್ರಮದ ಕಾರ್ಯಕ್ರಮ
Monday, February 9, 2026
ಮರವಂತೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಬೈಂದೂರು ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಜನಾರ್ದನ್ ಕೆ. ಮರವಂತೆ ಅವರಿಗೆ ಇತ್ತೀಚೆಗೆ ಮರವಂತೆಯಲ್ಲಿ ಅಭಿನಂದನಾ ಪೂರ್ವಕ ಸನ್ಮಾನ ಕಾರ್ಯಕ್ರಮ ನಡೆಯಿತು. ಸಾಮಾಜಿಕ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅವರ ಸೇವೆಯನ್ನು ಗುರುತಿಸಿ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಅವರನ್ನು ಗೌರವಿಸಿದರು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಗಳ ಪ್ರಮುಖರು ಜನಾರ್ದನ್ ಮರವಂತೆ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ವೇದಿಕೆಯಲ್ಲಿ ಈ ಕೆಳಗಿನ ಗಣ್ಯರು ಉಪಸ್ಥಿತರಿದ್ದರು:
ಪ್ರವೀಣ್: ಅಧ್ಯಕ್ಷರು, ಮರವಂತೆ ಮೀನುಗಾರರ ಸಂಘ.
ಡಿ. ನಾಗೇಶ್ ಖಾರ್ವಿ: ಅಧ್ಯಕ್ಷರು, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ದಾಮೋದರ್ ಮೊಗವೀರ ನಾಯಕವಾಡಿ, ಕಾರ್ಯದರ್ಶಿ ಪುರುಷೋತ್ತಮ್ ಪೂಜಾರಿ,
ಸುರೇಶ್ ಖಾರ್ವಿ: ಅಧ್ಯಕ್ಷರು, ಶ್ರೀರಾಮ ಸೇವಾ ಸಮಿತಿ.
ಮಂಜುನಾಥ್ ಬಾಳಿಕೆರೆ: ಅಧ್ಯಕ್ಷರು, ಜೈ ಕರ್ನಾಟಕ ಸಹಕಾರ ಸಂಘ. ಕರ್ನಾಟಕ ರಕ್ಷಣಾ ವೇದಿಕೆ ಬೈಂದೂರು ತಾಲೂಕು ಅಧ್ಯಕ್ಷ ರಾಜೇಶ್ ಪೂಜಾರಿ ತ್ರಾಸಿ,
ನಾಗರಾಜ್, ಮರವಂತೆ ಗ್ರಾಮ ಪಂಚಾಯತ್. ಅಧ್ಯಕ್ಷರು
ನಾಗರಾಜ್ ಪಟೇಗಾರ್ , ಅಧ್ಯಕ್ಷರು, ಓಂ ದಶಮಿ ಸಂಘ.
ಕಾರ್ಯಕ್ರಮದ ನಿರೂಪಣೆ
ಕೆ. ಶ್ರೀಧರ್ ಅವರು ಅಚ್ಚುಕಟ್ಟಾಗಿ ನಿರೂಪಿಸಿದರು. ವಾಚಕ ಗಂಗಾಧರ್ ಅವರು ಕಾರ್ಯಕ್ರಮದ ಆಶಯಗಳನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು, ಮರವಂತೆ ಮೀನುಗಾರರ ಸಹಕಾರ ಸಂಘದ ಉಪಾಧ್ಯಕ್ಷರು, ವಿವಿಧ ನಿರ್ದೇಶಕರು ಹಾಗೂ ಊರಿನ ಪ್ರಮುಖ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು. ಸನ್ಮಾನ ಸ್ವೀಕರಿಸಿದ ಜನಾರ್ದನ್ ಕೆ. ಮರವಂತೆ ಅವರು ಮಾತನಾಡಿ, ಪತ್ರಕರ್ತರ ಹಿತರಕ್ಷಣೆ ಮತ್ತು ಸಾಮಾಜಿಕ ಕಳಕಳಿಯೊಂದಿಗೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.