Kundapura : ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಉಚಿತ ನೇತ್ರ ತಪಾಸಣಾ ಶಿಬಿರ
Thursday, January 29, 2026
ಕುಂದಾಪುರ: ರಸ್ತೆ ಸುರಕ್ಷತೆಯಲ್ಲಿ ಚಾಲಕರ ದೃಷ್ಟಿ ದೋಷ ನಿವಾರಣೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಉದ್ದೇಶದೊಂದಿಗೆ, ಉಡುಪಿ ಜಿಲ್ಲಾ ಪೊಲೀಸ್ ಕುಂದಾಪುರ ವಿಭಾಗ ಹಾಗೂ ಕುಂದಾಪುರ ಪೊಲೀಸ್ ಠಾಣೆ ಮತ್ತು ಸಂಚಾರ ಪೊಲೀಸ್ ಠಾಣೆಯ ವತಿಯಿಂದ ವಿಶೇಷ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ನಿರೀಕ್ಷಕರು ಜಯರಾಮ್ ಡಿ. ಗೌಡ ರವರು ವಹಿಸಿ ಮಾತನಾಡಿದ ಅವರು ಈ ಕಾರ್ಯಕ್ರಮ ಆಯೋಜನೆ ಮಾಡಿದ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಉಪನಿರೀಕ್ಷಕ ಅನುಪ್ ನಾಯಕ್ ರವರಿಗೆ ಕೃತಜ್ಞತೆ ಹೇಳುವ ಮೂಲಕ ಪ್ರಸಾದ್ ನೇತ್ರಾಲಯದ ವೈದ್ಯಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು
ಹೌದು ಉಡುಪಿಯ ಸುಪ್ರಸಿದ್ಧ ಪ್ರಸಾದ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ (ರಿ.), ಬೆಂಗಳೂರಿನ ಒನ್ ಸೈಟ್ ಹಾಗೂ ಲಕ್ಸೋಟಿಕಾ ಫೌಂಡೇಶನ್ ಇವರುಗಳ ಸಹಭಾಗಿತ್ವದಲ್ಲಿ ಈ ಶಿಬಿರವು 29-01-2026 ಗುರುವಾರ ಕುಂದಾಪುರದ ಪೊಲೀಸ್ ಲೈನ್‌ನಲ್ಲಿರುವ ರಕ್ತೇಶ್ವರಿ ದೇವಸ್ಥಾನದ ಹಾಲ್ನಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ಪ್ರಸಾದ್ ನೇತ್ರಾಲಯದ ನೇತ್ರ ತಜ್ಞರು ನುರಿತ ವೈದ್ಯಧಿಕಾರಿ ಕ್ರೀನಾ ರವರು ನೆರವೇರಿಸಿದರು
ಮುಖ್ಯ ಅತಿಥಿಗಳಾಗಿ ಗಾಯಿತ್ರಿ ಪ್ಯಾನಲ್ ವಕೀಲರು ಕುಂದಾಪುರ ಹಾಗೂ ರಮೀಜಾ ರವರು ಮತ್ತು PRO ಮೋಹನ್ ದಾಸ್ ಪ್ರಸಾದ್ ನೇತ್ರಾಲಯದ ವೇದಿಕೆಯಲ್ಲಿ ಉಪಸ್ಥಿತರಿದ್ದರು,
ಸುರಕ್ಷತೆಗೆ ಆದ್ಯತೆ: ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಭಾಗವಾಗಿ ನಡೆದ ಈ ಶಿಬಿರದಲ್ಲಿ, ವಾಹನ ಚಾಲಕರು ಮತ್ತು ಸಾರ್ವಜನಿಕರಿಗೆ ಉಚಿತವಾಗಿ ಕಣ್ಣಿನ ತಪಾಸಣೆ ನಡೆಸಲಾಯಿತು.
ತಜ್ಞರಿಂದ ತಪಾಸಣೆ: ಪ್ರಸಾದ ನೇತ್ರಾಲಯದ ನುರಿತ ನೇತ್ರ ತಜ್ಞರು ಪಾಲ್ಗೊಂಡು ನೂರಾರು ಫಲಾನುಭವಿಗಳಿಗೆ ಆಧುನಿಕ ಉಪಕರಣಗಳ ಮೂಲಕ ತಪಾಸಣೆ ನಡೆಸಿ, ಅಗತ್ಯ ಸಲಹೆ ಹಾಗೂ ಚಿಕಿತ್ಸೆಗಳನ್ನು ಸೂಚಿಸಿದರು.
ಸಮುದಾಯದ ಪಾಲ್ಗೊಳ್ಳುವಿಕೆ: ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಸೌಲಭ್ಯದ ಪ್ರಯೋಜನ ಪಡೆದುಕೊಂಡರು.
ಈ ಸಂದರ್ಭ ಮೇದಿನಿ CHO ಸರಕಾರಿ ಕುಂದಾಪುರ ಆಸ್ಪತ್ರೆ, ಅನುಪ್ ನಾಯಕ್ ಕುಂದಾಪುರ ಸಂಚಾರ ಪೊಲೀಸ್ ಉಪನಿರೀಕ್ಷಕರು , ಸುಧಾ ಪ್ರಭು ಕುಂದಾಪುರ ಸಂಚಾರ ಪೊಲೀಸ್ ಉಪನಿರೀಕ್ಷಕರು, ಪುಷ್ಪಾ ಕುಂದಾಪುರ ಪೊಲೀಸ್ ಠಾಣೆ ತನಿಕಾ ವಿಭಾಗದಉಪನಿರೀಕ್ಷಕರು,
ವೇದಿಕೆಯಲ್ಲಿ ಹಾಜರಿದ್ದರು, ಈ ವೇಳೆ ವೆಂಕಟರಮಣ ಸ್ಕೂಲಿನ ಚಾಲಕರು ಮತ್ತು ಸ್ಥಳೀಯ ಸಾರ್ವಜನಿಕರು, ಟ್ಯಾಕ್ಸಿ ಮತ್ತು ಗೂಡ್ಸ್ ವಾಹನದ ಚಾಲಕರು , ರಿಕ್ಷಾ ಚಾಲಕರು, ಖಾಸಗಿ ಬಸ್ ಚಾಲಕರು, ಸೇರಿದಂತೆ ಸಾರ್ವಜನಿಕರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು,
ASIನಾಗರಾಜ್ ವಂದಿಸಿ, ಧನ್ಯವಾದ ಕಾರ್ಯಕ್ರಮ ಹೆಡ್ ಕಾನ್ಸ್ಟೇಬಲ್ ಮಧುಕರ್ (ಯಾನೆ )ಮಧು ರವರು ನೆರವೇರಿಸಿದರು,
ಉಚಿತ ನೇತ್ರ ತಪಾಸಣೆ ಹಾಗೂ ಆರೋಗ್ಯ ತಪಾಸಣೆ
ಬಿಪಿ ಮತ್ತು ಶುಗರ್ ಅನ್ನ ಕುಂದಾಪುರ ತಾಲೂಕು ಆಸ್ಪತ್ರೆ ವೈದ್ಯರು ಟೆಸ್ಟ್ ಮಾಡಲಾಗಿತ್ತು.