ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Kundapura: ಭಟ್ಕಳದ ರಾಜ್ಯ ಮಟ್ಟದ ಪತ್ರಕರ್ತರ ವಿಚಾರ ಸಂಕೀರ್ಣ ಪೂರ್ವಭಾವಿ ಸಿದ್ಧತೆ: ಕುಂದಾಪುರದಲ್ಲಿ ರಾಜ್ಯದ್ಯಕ್ಷರಿಗೆ ಆತ್ಮೀಯ ಸ್ವಾಗತ

Kundapura: ಭಟ್ಕಳದ ರಾಜ್ಯ ಮಟ್ಟದ ಪತ್ರಕರ್ತರ ವಿಚಾರ ಸಂಕೀರ್ಣ ಪೂರ್ವಭಾವಿ ಸಿದ್ಧತೆ: ಕುಂದಾಪುರದಲ್ಲಿ ರಾಜ್ಯದ್ಯಕ್ಷರಿಗೆ ಆತ್ಮೀಯ ಸ್ವಾಗತ

ಕುಂದಾಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) ಸಂಘಟನೆಯ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 28- 01- 2026 ರಂದು ಹಮ್ಮಿಕೊಳ್ಳಲಾಗಿರುವ ಪತ್ರಕರ್ತರ ವಿಚಾರ ಸಂಕೀರ್ಣ ಮತ್ತು ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭದ ಹಿನ್ನೆಲೆಯಲ್ಲಿ, ಸೋಮವಾರ ಸಂಘಟನೆಯ ರಾಜ್ಯದ್ಯಕ್ಷರಾದ ಮಲ್ಲಿಕಾರ್ಜುನ ಬಂಗ್ಲೆಯವರು ಕುಂದಾಪುರಕ್ಕೆ ಭೇಟಿ ನೀಡಿದರು.
ಈ ಸಂದರ್ಭ 
ಭಟ್ಕಳದಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮಕ್ಕೆ ಮುಂಚಿತವಾಗಿ ಜಿಲ್ಲಾ ಪ್ರವಾಸ ಕೈಗೊಂಡಿರುವ ರಾಜ್ಯ ಅಧ್ಯಕ್ಷರನ್ನು ಕುಂದಾಪುರ ಮತ್ತು ಬೈಂದೂರು ಭಾಗದ ಪತ್ರಕರ್ತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಆತ್ಮೀಯವಾಗಿ ಬರಮಾಡಿಕೊಂಡರು.
 ಕಾರ್ಯಕ್ರಮದ ಪ್ರಮುಖಾಂಶಗಳು:
ಈ ಸಂದರ್ಭದಲ್ಲಿ ನಡೆದ ಅನೌಪಚಾರಿಕ ಸಭೆಯಲ್ಲಿ ಭಟ್ಕಳದ ಮುಂಬರುವ ಕಾರ್ಯಕ್ರಮದ ಯಶಸ್ಸಿನ ಕುರಿತು ಚರ್ಚಿಸಲಾಯಿತು.
 ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಮುಖರು:
ದಾಮೋದರ್ ಮೊಗವೀರ ನಾಯಕವಾಡಿ: ಉಡುಪಿ ಜಿಲ್ಲಾ ಅಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ.( ರಿ)
ಕೃಷ್ಣ ಮೊಗವೀರ: ಮುಖಂಡರು, ಕರ್ನಾಟಕ ರಕ್ಷಣಾ ವೇದಿಕೆ ಕುಂದಾಪುರ , ಪುರುಷೋತ್ತಮ್ ಪೂಜಾರಿ ಕೊಡಪಾಡಿ
ರಾಜೇಶ್ ಪೂಜಾರಿ ತ್ರಾಸಿ: ಬೈಂದೂರು ವಲಯ ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ.
ಪತ್ರಕರ್ತ ಗಣ್ಯರು: ಸುರೇಶ್ ಅಮಾಸೆಬೈಲು, ಗೋಪಾಲ್ ಕವ್ರಾಡಿ, ಪರಮೇಶ್ವರ್ ಪೂಜಾರಿ ಬಳ್ಕೂರು ಹಾಗೂ ಬೈಂದೂರು-ಕುಂದಾಪುರ ಭಾಗದ ವರದಿಗಾರರು ಉಪಸ್ಥಿತರಿದ್ದರು, 

 *ಕುಮಾರ್ ಭಟ್ಕಳ: ಕರಾವಳಿ ಭಾಗದ ಪತ್ರಿಕಾ ಮುಖಂಡರು.* 
 *ಒಗ್ಗಟ್ಟಿನ ಮಂತ್ರ* :
ಕರಾವಳಿ ಭಾಗದ ಪತ್ರಕರ್ತರ ಸಮಸ್ಯೆಗಳು ಹಾಗೂ ಪತ್ರಿಕೋದ್ಯಮದ ಸವಾಲುಗಳ ಕುರಿತು ವಿಚಾರ ಸಂಕಿರಣದಲ್ಲಿ ಗಂಭೀರ ಚರ್ಚೆ ನಡೆಯಲಿದ್ದು, ಈ ನಿಟ್ಟಿನಲ್ಲಿ ಕುಂದಾಪುರದಲ್ಲಿ ನಡೆದ ಈ ಪೂರ್ವಭಾವಿ ಭೇಟಿ ಮಹತ್ವ ಪಡೆದುಕೊಂಡಿದೆ. ರಾಜ್ಯ ಅಧ್ಯಕ್ಷರು ಈ ಸಂದರ್ಭದಲ್ಲಿ ಮಾತನಾಡಿ, ಪತ್ರಕರ್ತರ ಹಿತರಕ್ಷಣೆ ಮತ್ತು ಸಂಘಟನೆಯ ಬಲವರ್ಧನೆಗೆ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ಬೈಂದೂರು ಮತ್ತು ಕುಂದಾಪುರ ವಲಯದ ಪತ್ರಕರ್ತ ಮಿತ್ರರು ಈ ಸಭೆಯಲ್ಲಿ ಪಾಲ್ಗೊಂಡು, ಭಟ್ಕಳದ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು

Ads on article

Advertise in articles 1

advertising articles 2

Advertise under the article