ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

BIG BREAKING NEWS ಕೌಟುಂಬಿಕ ಕಲಹಕ್ಕೆ  ಪತ್ನಿಯನ್ನು ಕೊಲೆ ಮಾಡಿ ಸ್ವಿಮ್ಮಿಂಗ್ ಪೂಲ್‌ಗೆ ಎಸೆದ ಪತಿ!!

BIG BREAKING NEWS ಕೌಟುಂಬಿಕ ಕಲಹಕ್ಕೆ ಪತ್ನಿಯನ್ನು ಕೊಲೆ ಮಾಡಿ ಸ್ವಿಮ್ಮಿಂಗ್ ಪೂಲ್‌ಗೆ ಎಸೆದ ಪತಿ!!

ರಾಮನಗರ: ಈಜುಕೊಳದಲ್ಲಿ ಮಹಿಳೆಯೊಬ್ಬರ ಶವವಾಗಿ ಪತ್ತೆಯಾಗಿದ್ದು, ಪತಿಯೇ ಪತ್ನಿಯನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. 
ರಾಮನಗರದ ಕನಕಪುರ ತಾಲೂಕಿನ ಬೆಟ್ಟೆಗೌಡನಪಾಳ್ಯದಲ್ಲಿ ಈ ಘಟನೆ ನಡೆದಿದೆ.

29 ವರ್ಷದ ಪ್ರತಿಭಾ ಮೃತ ಮಹಿಳೆ. ಪ್ರತಿಭಾ ಹಾಗೂ ಪತಿ ಬಾಬು ಗ್ರಾಮದ ಹೊರವಲಯದಲ್ಲಿರುವ ತೋಟದ ಮನೆಯಲ್ಲಿ ವಾಸವಾಗಿದ್ದರು.

ಪತ್ರಿಭಾ ಬಾಬುಗೆ ಎರಡನೇ ಹೆಂಡತಿ. ದಂಪತಿಗೆ ಇಬ್ಬರು ಮಕ್ಕಳಿದ್ದರು.

ಪತಿ-ಪತ್ನಿ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ಕೌಟುಂಬಿಕ ಕಲಹಕ್ಕೆ ಪತ್ನಿಯನ್ನೇ ಪತಿ ಬಾಬು ಹತ್ಯೆ ಮಡಿದ್ದಾನೆ ಎಂದು ಪ್ರತಿಭಾ ಪೋಷೋಷಕರು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಕೋಡಿಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪ್ರತಿಭಾ ಪೋಷಕರ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article