ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Kundapura:  ಕಮಲಶಿಲೆಯ ಕಲಾ ಕುಸುಮ, 31 ವರ್ಷಗಳ ಯಕ್ಷ ಪಯಣದ ಸರದಾರ: ಶ್ರೀ ಮಂಜುನಾಥ ಕುಲಾಲ್

Kundapura: ಕಮಲಶಿಲೆಯ ಕಲಾ ಕುಸುಮ, 31 ವರ್ಷಗಳ ಯಕ್ಷ ಪಯಣದ ಸರದಾರ: ಶ್ರೀ ಮಂಜುನಾಥ ಕುಲಾಲ್


ಕುಂದಾಪುರ: ಯಕ್ಷಗಾನ ಎಂಬುದು ಕೇವಲ ಕಲೆಯಲ್ಲ, ಅದೊಂದು ಜೀವನ ಪದ್ಧತಿ. ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧವಾಗಿರುವ ಈ ಯಕ್ಷ ರಂಗದಲ್ಲಿ ಗೆಜ್ಜೆ ಕಟ್ಟಿ, ಬಣ್ಣ ಹಚ್ಚಿ, ಪ್ರೇಕ್ಷಕರ ಮನ ಗೆಲ್ಲುವುದು ಸುಲಭದ ಮಾತಲ್ಲ. ಅಂತಹ ಕಠಿಣ ಪರಿಶ್ರಮ ಮತ್ತು ನಿರಂತರ ಸಾಧನೆಯ ಮೂಲಕ ಕಮಲಶಿಲೆಯ ಕೀರ್ತಿಯನ್ನು ಹೆಚ್ಚಿಸಿದವರು ನಮ್ಮ ಹೆಮ್ಮೆಯ ಕಲಾವಿದ ಶ್ರೀ ಮಂಜುನಾಥ್ ಕುಲಾಲ್.
 *ಹಿನ್ನೆಲೆ ಮತ್ತು ಕುಟುಂಬ:
ಕಮಲಶಿಲೆಯ ಶ್ರೀ ಸೂರ ಕುಲಾಲ ಮತ್ತು ಶ್ರೀಮತಿ ವೆಂಕಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದ ಮಂಜುನಾಥರು, ಬಾಲ್ಯದಿಂದಲೇ ಕಲೆಯ ಬಗ್ಗೆ ವಿಶೇಷ ಒಲವು ಹೊಂದಿದ್ದವರು. ಕಲಾವಿದನ ಬದುಕು ರಂಗಸ್ಥಳದಲ್ಲಿ ಸಾರ್ಥಕವಾದರೆ, ಕೌಟುಂಬಿಕ ಜೀವನವು ನೆಮ್ಮದಿಯ ತಾಣವಾಗಬೇಕು. ಅದರಂತೆ ಶ್ರೀಯುತರು ಪತ್ನಿ ಶ್ರೀಮತಿ ಜ್ಯೋತಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿ, ಮಕ್ಕಳಾದ ಮನ್ವಿತ, ಆರುಷಿ ಮತ್ತು ಆಹಾನ್ ಅವರೊಂದಿಗೆ ಸುಂದರ ಹಾಗೂ ತೃಪ್ತಿದಾಯಕ ಜೀವನ ನಡೆಸುತ್ತಿದ್ದಾರೆ.
 *ಮೂರು ದಶಕಗಳ ಕಲಾ ಸೇವೆ:* 
ಕಳೆದ 31 ವರ್ಷಗಳಿಂದ ಅವಿರತವಾಗಿ ಯಕ್ಷಗಾನ ಕಲಾ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರ ಕಲಾ ಪಯಣ ಅದ್ಭುತವಾದುದು. ಇವರು ತಿರುಗಾಟ ನಡೆಸಿದ ಒಡಗುತ್ತಿನ ಪ್ರಸಿದ್ಧ ಮೇಳಗಳ ಪಟ್ಟಿ ಇವರ ಅನುಭವಕ್ಕೆ ಸಾಕ್ಷಿ:
ಕಮಲಶಿಲೆ ಮೇಳ: 5 ವರ್ಷಗಳು
ಪೇರಡೂರು ಮೇಳ: 2 ವರ್ಷಗಳು
ಹಾಲಾಡಿ ಮೇಳ: 9 ವರ್ಷಗಳು
ಮಂದಾರ್ತಿ ಮೇಳ: 11 ವರ್ಷಗಳು
ನೀಲಾವರ ಮೇಳ: 4 ವರ್ಷಗಳು
ಹೀಗೆ ಒಟ್ಟು 31 ವರ್ಷಗಳ ಕಾಲ ರಂಗಸ್ಥಳದಲ್ಲಿ ಮಿಂಚಿರುವ ಇವರು, ತಮ್ಮ ವಿಶಿಷ್ಟ ಅಭಿನಯದ ಮೂಲಕ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಅಪಾರ ಯಕ್ಷಗಾನ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಪ್ರಸ್ತುತ ಸುರಾಲು ಮೇಳದಲ್ಲಿ ಸ್ತ್ರೀ ವೇಷದಾರಿಯಾಗಿ ತೊಡಗಿರುತ್ತಾರೆ
 *ಅರಸಿ ಬಂದ ಗೌರವ:* 
ಯೋಗ್ಯ ಸಾಧಕನಿಗೆ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ ಎನ್ನುವುದಕ್ಕೆ ಮಂಜುನಾಥ್ ಅವರೇ ಸಾಕ್ಷಿ. ಇವರ ದೀರ್ಘಕಾಲದ ಕಲಾ ಸೇವೆಯನ್ನು ಗುರುತಿಸಿ ' ಯಕ್ಷ ಕಲ್ಪ ಕಮಲಶಿಲೆ' () ಇವರ ವತಿಯಿಂದ "ಕಮಲಶಿಲೆಯ ಯಕ್ಷ ಸಾಧಕ" ಎಂಬ ಅರ್ಥಪೂರ್ಣ ಬಿರುದನ್ನು ನೀಡಿ ಗೌರವಿಸಲಾಗುತ್ತಿದೆ. ಇದು ಅವರ ಶ್ರದ್ಧೆ ಮತ್ತು ಬದ್ಧತೆಗೆ ಸಂದ ಗೌರವವಾಗಿದೆ.
ಇವರ ಗುರುಗಳು ಕೊಚ್ಚಾಡಿ ರಾಮಣ್ಣ. ಮತ್ತು ತಾರಿಕೊಡ್ಲು ಉದಯಕುಮಾರ್ ರಾವ್. ರಮೇಶ್ ಗಾಣಿಗ ಹಾರಾಡಿ. ಜಯನಂದ್ ಹೊಳೆಕೊಪ್ಪ. ಸಂಜು ಶೆಟ್ಟಿ ಹೊನ್ನೆಬೈಲ್. ಪ್ರವೀಣ್ ಗಾಣಿಗ ಕೆಮ್ಮಣ್ಣು. ಗಣಪತಿ ಭಟ್ ಗುಂಡಿ ಬೈಲ್. ಚಂದ್ರುಕುಲಾಲ್ ನೀರ್ಜಡ್ಡು ಇವರಲ್ಲಿ ಹೆಜ್ಜೆ ಕಲಿತು ಮತ್ತು ಪೌರಾಣಿಕ ಪ್ರಸಂಗಗಳ ಮಾತುಗಳನ್ನು ಅಭ್ಯಾಸ ಮಾಡಿ ಸ್ತ್ರೀವೇಷದಾರಿಯಾಗಿ ಹೆಸರುಗಳಿಸಿದ ಇವರು. ಹಿಮ್ಮೇಳ ಮುಮ್ಮೇಳ ಕಲಾವಿದರನ್ನು ಪ್ರೀತಿಸುವ ಇವರು ಪೌರಾಣಿಕ ಪ್ರಸಂಗದಲ್ಲಿ ದಮಯಂತಿ. ಮೀನಾಕ್ಷಿ. ಭ್ರಮರಕುಂತಳೆ.ಮದನಾಕ್ಷಿ. ಗುಣಸುಂದರಿ.ಚಿತ್ರಾವತಿ. ದಾಕ್ಷಾಹಿನಿ. ಶ್ರೀದೇವಿ.ಮಾಲಿನಿ. ಕಾಜ್ರಳ್ಳಿ ಕ್ಷೇತ್ರ ಮಾತ್ಮೆಯ.ವನದುರ್ಗಾಪರಮೇಶ್ವರಿ.ಎಲ್ಲಾ ಪ್ರಧಾನ ವೇಷ.ಸಖಿ ವೇಷ ಹಾಗೂ ಪುರುಷ ವೇಷದಲ್ಲಿ ಕೃಷ್ಣ. ಬಾಲಸುದೀರ. ಚಂಡ ಮುಂಡ. ಬ್ರಹ್ಮ.ಈಶ್ವರ. ಇನ್ನಿತರ ಸಣ್ಣಪುಟ್ಟ ಪುರುಷವೇಷವನ್ನು ಮಾಡಿರುತ್ತಾರೆ. ಶ್ರದ್ದೆ. ಭಕ್ತಿ. ನಿಷ್ಠೆ ಸಮಯ ಪ್ರಜ್ಞೆ. ಹಾಗೂ ಹಿಮ್ಮೇಳ ಮುಮ್ಮಳದ ಕಲಾವಿದರಲ್ಲಿ ಯಾವ . ವೈರತ್ವವನ್ನು ಇಲ್ಲದೆ ಬೆಳೆದ ಕಲಾವಿದರು. ಇವರ ಯಕ್ಷಗಾನದ ಬದುಕು ಇನ್ನೂ ಎತ್ತರಕ್ಕೆ ಬೆಳೆಯಲಿ ಪ್ರಶಸ್ತಿಗಳು ಒಲಿದು ಬರಲಿ ಇನ್ನು ದಶಕಗಳ ಕಾಲ ಯಕ್ಷಗಾನದಲ್ಲಿ ಇದ್ದು ಪ್ರೇಕ್ಷಕರನ್ನು ಮನರಂಜಿಸುವಂತಾಗಲಿ. ಇವರಿಗೂ ಇವರ ಮಕ್ಕಳಿಗೂ ಆಯುರಾರೋಗ್ಯ ಕೊಟ್ಟು ಶ್ರೀ ದೇವರು ಕಾಪಾಡಲಿ ಎಂದು ಶ್ರೀ ಕಲಾಮಾತೆಯಲ್ಲಿ ಬೇಡಿಕೊಳ್ಳುತ್ತಿದ್ದೇವೆ.   
🙏🙏💐💐 ಸಂದರ್ಶನ.ಅಜಿತ್ ಕುಮಾರ್.ಹಟ್ಟಿಕುದ್ರು.ಬಸ್ರುರು

Ads on article

Advertise in articles 1

advertising articles 2

Advertise under the article