ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Bhatkal: ಪತ್ರಕರ್ತರ ವಿಚಾರ ಸಂಕಿರಣ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಅದ್ದೂರಿ ಕಾರ್ಯಕ್ರಮದಲ್ಲಿ ಪತ್ರಕರ್ತರನ್ನು ಹುರಿದುಂಬಿಸಿದ ಕಾರ್ಯಕ್ರಮ

Bhatkal: ಪತ್ರಕರ್ತರ ವಿಚಾರ ಸಂಕಿರಣ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಅದ್ದೂರಿ ಕಾರ್ಯಕ್ರಮದಲ್ಲಿ ಪತ್ರಕರ್ತರನ್ನು ಹುರಿದುಂಬಿಸಿದ ಕಾರ್ಯಕ್ರಮ

ಭಟ್ಕಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ ಭಟ್ಕಳ ಘಟಕವು ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಬಂಗ್ಲೆ ನೇತೃತ್ವದಲ್ಲಿ ತಾಲೂಕಾಧ್ಯಕ್ಷ ಶಂಕರ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯಮಟ್ಟದ ಪತ್ರಕರ್ತರ ವಿಚಾರ ಸಂಕಿರಣ ಹಾಗೂ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಬಂಗಾರ ಮಕ್ಕಿ ಸಂಸ್ಥಾನದ ಶ್ರೀ ಮಾರುತಿ ಗುರೂಜಿ ಅವರು ಉದ್ಘಾಟಿಸಿ ಮಾತನಾಡುತ್ತಾ ಪತ್ರಕರ್ತರು ಯಾರದ್ದೋ ಒತ್ತಡಕ್ಕೆ ಮಣಿಯದೆ ಸಮಾಜದ ಹಿತದೃಷ್ಟಿಯಿಂದ ಪತ್ರಿಕಾ ಧರ್ಮವನ್ನು ಪಾಲಿಸಬೇಕು ಸಮಾಜ ಅಂಕುಡೊಂಕುವನ್ನು ತಿದ್ದುವ ಕೆಲಸ ಪತ್ರಕರ್ತರು ಮಾಡಬೇಕು ಎಂದು ಹೇಳಿದರು. ನಾಗಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸ್ವಾಮೀಜಿ ಮಾತನಾಡುತ್ತಾ ಸಮಾಜವನ್ನು ಮತ್ತು ಪತ್ರಕರ್ತರನ್ನು ಎಚ್ಚರಿಸಿದರು. 
ಪತ್ರಕರ್ತರು ಪ್ರಾಮಾಣಿಕವಾಗಿ ನಿಷ್ಠೆಯಿಂದ ದುಡಿಯಬೇಕಿದೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕೋದ್ಯಮ ರಾಜ್ಯದ ದೇಶದ ಸ್ಥಿತಿಗತಿಗಳ ಬಗ್ಗೆ ವರದಿ ಮಾಡುವುದು ನೈಜ್ಯ ಪತ್ರಕರ್ತರ ಲಕ್ಷಣವಾಗಿದೆ ಎಂದರು. ಸಮಾಜದ ಕುಂದುಕೊರತೆಗಳನ್ನ ಸರಿಪಡಿಸುವ ಪತ್ರಕರ್ತರು ಇಂದು ಪತ್ರಕರ್ತರ ಕುಂದು ಕೊರತೆಗಳ ಬಗ್ಗೆ ಸರಕಾರವನ್ನ ಬೇಡಿಕೊಳ್ಳುವ ಪರಿಸ್ಥಿತಿ ಪತ್ರಕರ್ತರಲ್ಲಿ ಬಂದಿದೆ. 
ಪತ್ರಕರ್ತರು ವೇಗದ ಸುದ್ದಿ ಮಾಡುವ ಅವಸರದಲ್ಲಿ ಪ್ರಾಣವನ್ನ ಬಿಟ್ಟ ಅನೇಕ ಉದಾಹರಣೆಗಳಿವೆ ಪತ್ರಕರ್ತರು ಪ್ರಾಣದ ಹಂಗನ್ನು ತೊರೆದು ಸುದ್ದಿಯನ್ನು ಬಿತ್ತರಿಸುತ್ತಾರೆ ಅವರ ಕುಟುಂಬಗಳಿಗೆ ಸರಕಾರ ಏನು ಸಹಾಯ ಮಾಡದೆ ಇರುವುದು ವಿಪರ್ಯಾಸವೇ ಸರಿ ಎಂದು ಮಾರ್ವಿಕವಾಗಿ ಹೇಳಿದರು,
 ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದ ಸಮಾಜಸೇವಕ ಗೋವಿಂದ್ ಪೂಜಾರಿ ಮಾತನಾಡಿ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ಕೊಡಿಸುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದು ಪತ್ರಕರ್ತರ ಕುಟುಂಬಗಳಿಗೆ ನೆರವಾಗಲು ನಮ್ಮ ಟ್ರಸ್ಟ್ ಸದಾ ಸಿದ್ಧ ಇರುತ್ತದೆ ಎಂದು ಹೇಳಿದರು. ಹಿರಿಯ ಪತ್ರಕರ್ತ ಗಂಗಾಧರ್ ಮೊದಲಿಯಾರ್ ಮಾತನಾಡಿ ಪತ್ರಕರ್ತರು ಎಂದರೆ ಭಯೋತ್ಪಾದಕರು ಎಂಬ ಭಾವನೆ ಇದೆ ಮಾಧ್ಯಮ ಉಳಿಸಿಕೊಳ್ಳುವ ಜವಾಬ್ದಾರಿ ಪತ್ರಕರ್ತರ ಮೇಲಿದೆ ಪತ್ರಿಕೋದ್ಯಮ ರೂಪಾಂತರವಾಗುತ್ತಿದೆ ಕಾಲ ಕಾಲಕ್ಕೆ ತಕ್ಕಂತೆ ಪತ್ರಿಕಾ ಮಾಧ್ಯಮದವರು ತಾಂತ್ರಿಕತೆ ಬೆಳೆದಂತೆ ಮಾಧ್ಯಮದವರು ಹೊಂದಿಕೊಳ್ಳಬೇಕು. ಇಂತಹ ವಿಚಾರ ಸಂಕಿರಣ ಮತ್ತು ರಾಜ್ಯ ಪ್ರಶಸ್ತಿ ಕಾರ್ಯಕ್ರಮಗಳು ಮತ್ತೆ ಮತ್ತೆ ನಡೆದು ಹೊಸ ಪತ್ರಿಕಾ ಮಾಧ್ಯಮದವರಿಗೆ ಸ್ಪೂರ್ತಿ ಆಗಲಿ ಎಂದರು. 
ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ರಿ ರಾಜ್ಯಾಧ್ಯಕ್ಷ ಬಂಗಲೇ ಮಲ್ಲಿಕಾರ್ಜುನ್ ಪ್ರಸ್ತಾವಿಕ ಮಾತನಾಡಿ ಕೇವಲ ಮೂರು ವರ್ಷಗಳಲ್ಲಿ ಸಂಘಟನೆಯು 21 ಜಿಲ್ಲೆಗಳಿಗೆ ವಿಸ್ತರಿಸಿದ್ದು ಪತ್ರಕರ್ತರ ಮಾಸಾಸನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮಾಡಲಾಗುವುದು ಎಂದು ಭರವಸೆ ನೀಡಿದರು. 

ನಮ್ಮ ಸಂಘಟನೆಯ ಪತ್ರಕರ್ತರನ್ನು ನಕಲಿ ಪತ್ರಕರ್ತರ ಸಂಘಟನೆ ಎಂದು ಹೇಳಿದ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರಿಗೆ ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ಎಚ್ಚರಿಕೆಯನ್ನ ನೀಡಿದರು. ನಿಮಗೆ ತಾಕತ್ತಿದ್ದರೆ ಧಮ್ ಇದ್ದರೆ ನಮ್ಮ ಸಂಘಟನೆಯ ಮೇಲೆ ಕೇಸ್ ಅನ್ನ ದಾಖಲು ಮಾಡಿ ಎಂದು ಹೇಳಿದರು.

 ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶಿವಾನಂದ ನಾಯ್ಕ್ ಮಾತನಾಡಿ ಸಮಾಜ ಸುಧಾರಣೆಗಾಗಿ ಪತ್ರಿಕಾ ವರದಿಯನ್ನು ಮಾಡುವ ಪತ್ರಕರ್ತರು ಇಂದು ತಮ್ಮ ಸುಧಾರಣೆಗಾಗಿ ಸರಕಾರವನ್ನು ಬೇಡುವ ಪರಿಸ್ಥಿತಿ ಬಂದಿದೆ ಎಂದು ಹೇಳಿದರು. ತಂಜಿಂ ಅಧ್ಯಕ್ಷ ಇನಾಯತುಲಾ ಶಾಬಂದ್ರಿ ಮಾತನಾಡಿ ಭಟ್ಕಳದಂತ ಸಣ್ಣ ಊರಿನಲ್ಲಿ ರಾಜ್ಯಮಟ್ಟದ ಪತ್ರಕರ್ತರ ಸಮಾವೇಶವನ್ನು ಆಯೋಜನೆ ಮಾಡಿದ ಶಂಕರ್ ನಾಯಕ್ ಮತ್ತು ಅವರ ಟೀಮಿಗೆ ನನ್ನದೊಂದು ಪ್ರಣಾಮಗಳು ಭಟ್ಕಳದಲ್ಲಿ ಇಂತಹ ಕಾರ್ಯಕ್ರಮಗಳಿಗೆ ನಮ್ಮ ಸಮುದಾಯದಿಂದ ಸದಾ ಸಹಕರಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.
 ಈ ಕಾರ್ಯಕ್ರಮದಲ್ಲಿ ಸಮಾಜದಲ್ಲಿ ಸೇವೆ ಸಲ್ಲಿಸಿದ ಸಮಾಜ ಸೇವಕರಿಗೆ ಹಾಗೂ ರಾಜ್ಯ ಪತ್ರಕರ್ತರಿಗೆ ರಾಜ್ಯ ಪ್ರಶಸ್ತಿಯನ್ನ ನೀಡಿ ಸನ್ಮಾನಿಸಲಾಯಿತು. ಭಟ್ಕಳದ sslc ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ರಾಜ್ಯದ ಮೂಲೆ ಮೂಲೆಗಳಿಂದ ಎಳು ನೂರಕ್ಕೂ ಹೆಚ್ಚು ಪತ್ರಕರ್ತರು ಆಗಮಿಸಿದ್ದರು.  
 ಕಾರ್ಯಕ್ರಮದಲ್ಲಿ ಗಣ್ಯ ವ್ಯಕ್ತಿಗಳು ಭಟ್ಕಳ್ ಘಟಕದ ಪ್ರಧಾನ ಕಾರ್ಯದರ್ಶಿಯಾದ ಉಲ್ಲಾಸ್ ಶಾನಭಾಗ್ ಖಜಾಂಚಿ ನಸಿಮುಲ್ಲಾ ಘನಿ ಜಾವೇದ್ ಸಿಂಗೇರಿ ಉಪಸ್ಥಿತರಿದ್ದರು

Ads on article

Advertise in articles 1

advertising articles 2

Advertise under the article