Kundapura: ಸೋಶಿಯಲ್ ಮೀಡಿಯಾ "ಕ್ಯಾನ್ ಕೋಸ್ ಗ್ರೀನ್ ಅವೇ" ಸುರೇಶ್ ಪೂಜಾರಿ ಬೈಲೂರು ವಿಜೇತರು
Saturday, December 20, 2025
ಮೂಲ್ಕಿ:
ಮೂಲ್ಕಿಯ ಕ್ಯಾನ್ ಕೋಸ್ ಡ್ರೈ ಫ್ರೂಟ್ ಸ್ಟೋರ್ ಸೋಶಿಯಲ್ ಮೀಡಿಯಾದಲ್ಲಿ ಆಯೋಜಿಸಿದ ಸ್ಪರ್ಧೆ ಕ್ಯಾನ್ ಕೋಸ್ ಗ್ರೀನ್ ಅವೇ ಯಲ್ಲಿ ಸುರೇಶ್ ಪೂಜಾರಿ ಬೈಲೂರು ವಿಜೇತರಾದರು.
ಬಹುಮಾನವನ್ನು ಮೂಲ್ಕಿಯ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಹರ್ಷರಾಜ್ ಶೆಟ್ಟಿ ಜಿ.ಎಂ ಹಾಗೂ ಮೂಲ್ಕಿ ನಾಲ್ಕು ಪಟ್ಟಣ ಮೊಗವೀರ ಸಭಾ ಅಧ್ಯಕ್ಷರಾದ ಚಂದ್ರಕಾಂತ
ಶ್ರೀಯಾನ್ ವಿತರಿಸಿದರು.
ಈ ಸಂದರ್ಭದಲ್ಲಿ
ಹೊಸ ಅಂಗಣ ಪತ್ರಿಕೆಯ ಸಂಪಾದಕರು
ಹರಿಶ್ಚಂದ್ರ ಸಾಲಿಯನ್, ಉದಯ್ ಅಮೀನ್ ಮಟ್ಟು,
ಹೆಜಮಾಡಿ ಪಂಚಾಯತ್ ಸದಸ್ಯರಾದ ಜನಾರ್ಧನ್ ಕೋಟ್ಯಾನ್,ವಿಜಯ ರೈತ ಸೇವಾ ಸಂಘದ ನಿರ್ದೇಶಕರಾದ ಪ್ರಭಾಕರ್ ದೇವಾಡಿಗ, ಕ್ಯಾನ್ ಕೋಸ್ ವೆಂಕಟೇಶ ಬಂಗೇರ ಹಾಗೂ ಈ ಮೀಡಿಯಾದ ರಕ್ಷಿತ್ ಇನ್ನಿತರರು ಉಪಸ್ಥಿತರಿದ್ದರು.
ದಿನೇಶ್ ಕೊಲ್ನಾಡ್ ಕಾರ್ಯಕ್ರಮ ನಿರೂಪಿಸಿದರು.
ಕ್ಯಾನ್ ಕೋಸ್ ಡ್ರೈ ಫುಡ್ಸ್ ಸ್ಟೋರ್ ನಲ್ಲಿ ದೇಶವಿದೇಶದ ವಿವಿಧ ಬಗೆಯ ಉತ್ತಮ ಗುಣಮಟ್ಟದ ಡ್ರೈ ಫ್ರೂಟ್ಸ್ ನಟ್ಸ್, ಬೀಜಗಳು ಮತ್ತು ಡ್ರೈ ಫ್ರೂಟ್ಸ್ ಬರ್ಫಿ, ಸ್ವೀಟ್ ಗಳು ಲಭ್ಯವಿದ್ದು ಊರಿನ ಮತ್ತು ಪರವೂರಿನ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ ಹಾಗೆಯೇ ಸಮಾರಂಭಗಳಿಗೆ ಬೇಕಾದ ಬೀಜ ದ್ರಾಕ್ಷಿ ಇತ್ಯಾದಿ ಲಭ್ಯವಿದೆ ಗ್ರಾಹಕರ ನೆಚ್ಚಿನ ಸಂಸ್ಥೆಯಾಗಿ ಜನ ಮನ್ನಣೆ ಪಡೆದಿದೆ.