Kundapura : ತಲ್ಲೂರು ಸರ್ಕಲ್ ನಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ಲಾರಿ ಸ್ಕೂಟಿಗೆ ಡಿಕ್ಕಿ!.!!!
Monday, December 8, 2025
ಸ್ಕೂಟರ್ ಸವಾರರು ಹೆಮ್ಮಾಡಿ ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದರು
ಲಾರಿ ಚಾಲಕನು ತನ್ನ ಸ್ವಂತ ಕೆಲಸಕ್ಕೆಂದು ನಿರ್ಲಕ್ಷ್ಯೆಯಿಂದ ತಲ್ಲೂರು ಸರ್ಕಲ್ ಬಳಿ ವಿರುದ್ಧ ದಿಕ್ಕಿನಿಂದ ಲಾರಿ ಚಲಾಯಿಸಿಕೊಂಡು ಬಂದು ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾನೆ , ಸ್ಕೂಟಿ ಯಲ್ಲಿದ ಓರ್ವ ಗಂಡಸು ಹಾಗೂ ಓರ್ವ ಮಹಿಳೆ ರಸ್ತೆ ಮೇಲೆ ಬಿದ್ದು ಸಣ್ಣ ಪುಟ್ಟ ಗಾಯವಂದಿಗೆ ಪಾರಾಗಿದ್ದಾರೆ
ಘಟನೆ ನಡೆದ ತಕ್ಷಣ ಸ್ಥಳೀಯರು ಒಟ್ಟಾಗಿ ಸ್ಕೂಟರ್ ಸವಾರರನ್ನು ರಸ್ತೆಯ ಮೇಲೆ ಬಿದ್ದಿರುವ ವ್ಯಕ್ತಿಗಳನ್ನು ಮೇಲಕ್ಕೆ ಎತ್ತಿ ವಿಚಾರಿಸಿದ್ದಾರೆ ನಂತರ ಲಾರಿ ಚಾಲಕನ ವಿರುದ್ಧ ಆಕ್ರೋಶ ಹೊರಗಿದ್ರು ಮಾನ್ಯ ಉಡುಪಿ ಜಿಲ್ಲಾ ಹಿರಿಯ ಪೊಲೀಸ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಇಂತಹ ಚಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈ ಕೊಳ್ಳಬೇಕೆಂದು ಮನವಿ ಮಾಡಿಕೊಂಡರು
ಕುಂದಾಪುರ ಸಂಚಾರಿ ಪೊಲೀಸರು ಇಂತಹ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ದೊಡ್ಡ ಅನಾಹುತ ಎದುರಿಸಬೇಕಾಗುತ್ತದೆ ಸಮಸ್ಯೆ ತಪ್ಪಿಸಲು ತಾವು ಸಂಜೆ ಹಾಗೂ ಬೆಳಗ್ಗಿನ ವೇಳೆ ಹೆಮ್ಮಾಡಿ , ತ್ರಾಸಿ, ಮುಳ್ಳಿಕಟ್ಟೆ, ಹೆಮ್ಮಾಡಿ, ಸಂಗಮ್ ಸರ್ಕಲ್ ಬಳಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಬೇಕೆಂದು ಸಾರ್ವಜನಿಕರ ಅಭಿಪ್ರಾಯವಾಗಿದೆ