ಕುಂದಾಪುರ: ರಸ್ತೆಗಳ ಹೊಂಡ ಗುಂಡಿಗಳು ಸಂಪೂರ್ಣ ಮುಕ್ತಿ ತೋರಿಸಬೇಕು ಗುತ್ತಿಗೆದಾರರಿಗೆ ಖಡಕ್ ಆದೇಶ: . ಪಿ ಡಬ್ಲ್ಯೂ ಡಿ ಅಧಿಕಾರಿ ರಾಮಣ್ಣ ಗೌಡ
Tuesday, December 23, 2025
. ರಾಮಣ್ಣ ಗೌಡ
ಪಿಡಬ್ಲ್ಯೂಡಿ ಸಹಾಯಕ ಇಂಜಿನಿಯರ್ ಕುಂದಾಪುರ
ಕುಂದಾಪುರ: ಸಹಾಯಕ ಕಾರ್ಯಪಾಲಕ ನಿರ್ವಹಣಾ ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಕುಂದಾಪುರ ಉಪ ವಿಭಾಗ ಅಧಿಕಾರಿ ರಾಮಣ್ಣ ಗೌಡ. ರವರ ಕಾರ್ಯ ವ್ಯಾಪ್ತಿಗೆ ಬರುವ. ಸರಕಾರದಿಂದ ಪಡೆದ ಕಾಮಗಾರಿಗಳು ವೈಜ್ಞಾನಿಕವಾಗಿ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಖಡಕ್ ಆದೇಶ ಮಾಡಲಾಗಿದೆ ಎಂದು ತಿಳಿದುಬಂದಿದೆ
ಹೌದು ಇತ್ತೀಚಿನ ದಿನಗಳಲ್ಲಿ ರಸ್ತೆಗಳ ಮೇಲೆ ಬೃಹತ್ ಗಾತ್ರದ ಹೊಂಡ ಗುಂಡಿಗಳು, ಮತ್ತು ರಸ್ತೆಯ ಬದಿಯಲ್ಲಿ ಬೆಳೆದು ನಿಂತ ಹಸಿರು ಹುಲ್ಲುಗಳು ಇದರಿಂದ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮದ ವರದಿಂದ ತಿಳಿದು ಬಂದ ಹಿನ್ನೆಲೆಯಲ್ಲಿ ಪಿಡಬ್ಲ್ಯೂಡಿ ಅಧಿಕಾರಿಗಳಾದ ರಾಮಣ್ಣ ಗೌಡ್ರು ನೇರವಾಗಿ ಗುತ್ತಿಗೆದಾರರಿಗೆ ರಸ್ತೆಗಳ ಹೋಂಡಾ ಗುಂಡಿ ಸಂಪೂರ್ಣ ವೈಜ್ಞಾನಿಕ ರೀತಿಯಲ್ಲಿ ಮುಚ್ಚಬೇಕು, ಹಾಗೆ ಹೊಸದಾಗಿ ನಿರ್ಮಾಣ ಆಗುತ್ತಿದ್ದ ಹೊಸ ರಸ್ತೆಗಳು ಸಹ ವೈಜ್ಞಾನಿಕವಾಗಿ ಯಾವುದೇ ಲೋಪ ಆಗದಂತೆ ಎಚ್ಚರ ವಹಿಸಬೇಕು ಎಲ್ಲಿಯೂ ಸ್ವಲ್ಪ ಕಾನೂನು ಬಾಹಿರ ವಾಗಿ ನಡೆದ ಕಾಮಗಾರಿಗಳು ನಡೆಯದಂತೆ ಗುತ್ತಿಗೆದಾರರಿಗೆ ಖಡಕ್ ಸೂಚನೆ ಸೂಚನೆ ನೀಡಿದ್ದೇನೆ ಎಂದು ಮಾಧ್ಯಮದವರು ಸಹಾಯಕ ಕಾರ್ಯಪಾಲಕ ನಿರ್ವಹಣಾ ಅಧಿಕಾರಿ ಶ್ರೀ ರಾಮಣ್ಣ ಗೌಡ ಅವರಿಗೆ ಫೋನ್ ಕರೆ ಮೂಲಕ ವಿಚಾರಿಸಿದಾಗ ಮಾಹಿತಿ ಹೇಳಿದರು
ಹೌದು ಇತ್ತೀಚಿನ ದಿನಗಳಲ್ಲಿ
ಪಿ ಡಬ್ಲ್ಯೂ ಡಿ ಇಲಾಖೆಯ ಅಡಿಯಲ್ಲಿ ಬರುವ ವಂಡ್ಸೆ ಆಲೂರು ಗುಜ್ಜಾಡಿ ಮುಖ್ಯ ರಸ್ತೆಯು, ಕಳೆದ ಕೆಲವು ಸಮಯದಿಂದ ಭಾಗಶಃ ಹೊಂಡ ಗುಂಡಿ ಹಾಗೂ ಅಳ ಎತ್ತರಕ್ಕೆ ಬೆಳೆದ ಹುಲ್ಲು ರಾಶಿಯಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸಂಚರಿಸಲು ತೀವ್ರ ಅಡಚಣೆ ಉಂಟಾಗಿತ್ತು. ಇದರ ಬಗ್ಗೆ ಮಾಧ್ಯಮದಲ್ಲಿ ವರದಿ ಪ್ರಸಾರವಾಗಿತ್ತು, ವರದಿಯ
ಫಲ ಶೃತಿಯಂತೆ ( ಬಿಗ್ ಇನ್ ಫ್ಯಾಕ್ಟ್) ಎಂಬಂತೆ ಇಂದು ವಂಡ್ಸೆ, ಆಲೂರು, ತ್ರಾಸಿ, ಗುಜ್ಜಾಡಿ ನಾಯಕವಾಡಿ ಎಲ್ಲಾ ಭಾಗದಲ್ಲೂ ರಸ್ತೆಗಳು ಸಂಪೂರ್ಣ ಹೋಂಡಾ ಗುಂಡಿಗಳನ್ನು ಮುಚ್ಚಿ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಮೆಚ್ಚುಗೆ ಆಗುವಂತೆ ವೈಜ್ಞಾನಿಕವಾಗಿ ಕಾಮಗಾರಿ ಮಾಡಲಾಗಿದೆ , ಇಂತಹ ನಡೆಗೆ ಗುತ್ತಿಗೆ ಪಡೆದು ಕಾಮಗಾರಿ ಮಾಡಿರುವ ನಿತೇಶ್ ಮೊಗವೀರ ಗುಜ್ಜಾಡಿ ಅವರಿಗೆ ವ್ಯಾಪಕ ಪ್ರಶಂಸೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ
ಒಟ್ಟಾರೆಯಾಗಿ ರಸ್ತೆಗಳ ಹೊಂಡ ಗುಂಡಿಗಳು ಸಂಪೂರ್ಣ ಮುಕ್ತಿ ತೋರಿಸಬೇಕು ಗುತ್ತಿಗೆದಾರರಿಗೆ ಖಡಕ್ ಆದೇಶ: . ಮಾಡಿದ ಪಿ ಡಬ್ಲ್ಯೂ ಡಿ ಅಧಿಕಾರಿ ರಾಮಣ್ಣ ಗೌಡ ರವರ ಪ್ರಾಮಾಣಿಕ ಕರ್ತವ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ