ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

ರಾಷ್ಟ್ರೀಯ ಹೆದ್ದರಿಯಲ್ಲಿ ಬಿದ್ದಿರುವ ಮಾನಸಿಕ ಅಸ್ವಸ್ಥತೆಯಿಂದ  ಕೂಡಿದ, ಅಸಹಾಯಕ ಸ್ಥಿತಿಯಲ್ಲಿದ್ದ  ಓರ್ವ ಮಹಿಳೆ ಓರ್ವ ಗಂಡಸನ್ನು ರಕ್ಷಿಸಿದ : ಇಬ್ರಾಹಿಂ ಗಂಗೊಳ್ಳಿ

ರಾಷ್ಟ್ರೀಯ ಹೆದ್ದರಿಯಲ್ಲಿ ಬಿದ್ದಿರುವ ಮಾನಸಿಕ ಅಸ್ವಸ್ಥತೆಯಿಂದ ಕೂಡಿದ, ಅಸಹಾಯಕ ಸ್ಥಿತಿಯಲ್ಲಿದ್ದ ಓರ್ವ ಮಹಿಳೆ ಓರ್ವ ಗಂಡಸನ್ನು ರಕ್ಷಿಸಿದ : ಇಬ್ರಾಹಿಂ ಗಂಗೊಳ್ಳಿ

ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಕುಂದಾಪುರ ತಾಲೂಕಿನ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಕ್ತಿಯಲ್ಲಿ ಹೃದಯವಂತ ಆಪತ್ಬಾಂಧವ ಆಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿಯವರು ಮಾನವೀಯತೆಯ ಘಟನೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ 
ಹೌದು ಭಟ್ಕಳ ಕುಂದಾಪುರ ಗಂಗೊಳ್ಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ತ್ರಾಸಿ ಬಸ್ ಸ್ಟ್ಯಾಂಡ್ ಹಾಗೂ ಬೀಚ್ ಬದಿಯ ಹೆದ್ದಾರಿಯಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅಸಹಾಯಕ ಸ್ಥಿತಿಯಲ್ಲಿದ್ದ ಓರ್ವ ವಯಸ್ಕ ಮಹಿಳೆ ಹಾಗೂ ಓರ್ವ ವಯಸ್ಕ ಪುರುಷರನ್ನು ಗಂಗೊಳ್ಳಿ ಪೊಲೀಸ್ ಠಾಣಾ ನಿರೀಕ್ಷಕರಾದ ಪವನ್ ನಾಯಕ್ ಸೂಚನೆಯಂತೆ ಸಿಬ್ಬಂದಿಗಳಾದ ರಾಜು ನಾಯಕ್ ಹಾಗೂ ಮಹಿಳಾ ಸಿಬ್ಬಂದಿ ವಿಮಲ, 
ಇವರ ಮಾರ್ಗದರ್ಶನದಲ್ಲಿ ಆಪತ್ಬಾಂಧವ ಹೃದಯವಂತ ಆಂಬುಲೆನ್ಸ್ ಚಾಲಕ 
24x7 ಇಬ್ರಾಹಿಂ ಗಂಗೊಳ್ಳಿ ಇವರ ನೇತ್ರತ್ವದಲ್ಲಿ ಹೆದ್ದಾರಿ ಬದಿಯಿಂದ ರಕ್ಷಿಸಿ ಉಡುಪಿ ಸಮೀಪದ ಹೊಸ ಬದುಕು ಆಶ್ರಮದಲ್ಲಿ ಆಶ್ರಯ ಹಾಗೂ ಪುನರ್ವಸತಿಗಾಗಿ ಟೀಮ್ ಎಮ್ ಎಚ್ ಐ ಅಂಬುಲೆನ್ಸ್ ಗಂಗೊಳ್ಳಿ ಮೂಲಕ ಕರೆದುಕೊಂಡು ಹೋಗಲಾಗಿದೆ
 
ಕಾರ್ಯಾಚರಣೆಯಲ್ಲಿ ತ್ರಾಸಿಯ ಲಿಪ್ಟನ್ ಒಲಿ ವೀರ, ವಿಕಾಸ್ ಮೊಗವೀರ ನಾಯಕವಾಡಿ, ವಿಲ್ಸನ್ ರೆಬೆರಾವ್ ಗಂಗೊಳ್ಳಿ, ಖಾಜಿ ಸಮಿಉಲ್ಲಾ ಹಾಗೂ ಕೆಲ ಸ್ಥಳೀಯರು ಸಹಕರಿಸಿದರು.
 ಆಶ್ರಮದ ವಿನಯ್ಚಂದ್ರ ಸಾಸ್ತಾನ ಹಾಗೂ ಶ್ರೀಮತಿ ರಾಜಶ್ರೀ ಇವರು ಇಬ್ಬರನ್ನು ಸಹ ಆತ್ಮೀಯವಾಗಿ ತಮ್ಮ ಆಶ್ರಮಕ್ಕೆ ದಾಖಲು ಮಾಡಿಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article