ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

Bhopal : ರಾಜ್ಯಪಾಲರ ಮೊಮ್ಮಗನ ವಿರುದ್ಧ ವರದಕ್ಷಿಣೆ ಕಿರುಕುಳ,ಹಲ್ಲೆ ಆರೋಪ: ಪ್ರಕರಣ ದಾಖಲು*

Bhopal : ರಾಜ್ಯಪಾಲರ ಮೊಮ್ಮಗನ ವಿರುದ್ಧ ವರದಕ್ಷಿಣೆ ಕಿರುಕುಳ,ಹಲ್ಲೆ ಆರೋಪ: ಪ್ರಕರಣ ದಾಖಲು*


ಭೋಪಾಲ್*: ಕರ್ನಾಟಕ ರಾಜ್ಯಪಾಲ ಅವರ ಮೊಮ್ಮಗ, ದೇವೇಂದ್ರ ಗೆಹ್ಲೋಟ್ (೩೨) ವಿರುದ್ಧ ಅವರ ಪತ್ನಿ ದಿವ್ಯಾ ಗೆಹ್ಲೋಟ್ ಗಂಭೀರ ಆರೋಪ ಮಾಡಿ ಮಧ್ಯಪ್ರದೇಶದ ರತ್ಲಾಂ ಜಿಲ್ಲಾ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಈ ದೂರಿನಲ್ಲಿ ವರದಕ್ಷಿಣೆ ಕಿರುಕುಳ, ದೈಹಿಕ-ಮಾನಸಿಕ ಹಿಂಸೆ,ಹಲ್ಲೆ ಹಾಗೂ ನಾಲ್ಕು ವರ್ಷದ ಮಗಳ ಅಪಹರಣದ ಆರೋಪ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ದಿವ್ಯಾ ಅವರು ತಮ್ಮ ದೂರಿನಲ್ಲಿ ತಿಳಿಸಿರುವಂತೆ, ೨೦೧೮ರಲ್ಲಿ ನಡೆದ ವಿವಾಹದ ನಂತರವೇ ದೇವೇಂದ್ರ ಹಾಗೂ ಅವರ ಕುಟುಂಬಸ್ಥರು ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡುತ್ತಿದ್ದರು. “ಹೆಣ್ಣುಮಗುವಿನ ಜನನದ ನಂತರ ಕಿರುಕುಳ ಇಮ್ಮಡಿಯಾಗಿ, ದೈಹಿಕ ಹಿಂಸೆ, ಜೀವ ಬೆದರಿಕೆ ಎದುರಿಸಬೇಕಾಯಿತು” ಎಂದು ದಿವ್ಯಾ ಹೇಳಿದ್ದಾರೆ. ಇದಲ್ಲದೆ, ತಮ್ಮ ಮಗಳನ್ನು ಉಜ್ಜಯಿನಿ ಜಿಲ್ಲೆಯ ನಾಗ್ಡಾ ಗ್ರಾಮದಲ್ಲಿ ದೇವೇಂದ್ರರ ಅತ್ತೆ-ಮಾವಂದಿರು ಬಲವಂತವಾಗಿ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ರತ್ಲಾಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಅವರು ದೂರಿನ ಆಧಾರದಲ್ಲಿ ಭಾನುವಾರವೇ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.

Ads on article

Advertise in articles 1

advertising articles 2

Advertise under the article