Mangaluru ಕತ್ತು ಸೀಳಿ ಅಸ್ಸಾಂ ಮೂಲದ ಯುವಕನ ಬರ್ಬರ ಹತ್ಯೆ!! ಕೊಲೆಯಾದ ಒಂದು ಗಂಟೆಯ ಒಳಗೆ ಹಂತಕನನ್ನು ಹೆಡೆಮುರಿ ಕಟ್ಟಿದ ಪೊಲೀಸರು.
Monday, December 8, 2025
ಪಣಂಬೂರು: ಕುಡಿಯಲು ಹಣ ನೀಡಿಲ್ಲ ಎಂದು ಜಗಳಮಾಡಿದಕ್ಕೆ ಚೂರಿಯಿಂದ ಇರಿದು ಕೊಲೆ ಗೈದ ಘಟನೆ ಬಾನುವಾರ ತಡರಾತ್ರಿ ಬೈಕಂಪಾಡಿಯಲ್ಲಿ ವರದಿಯಾಗಿದೆ.
ಕೊಲೆಯಾದವರನ್ನು ಅಸ್ಸಾಂ ಮೂಲದ ನಿವಾಸಿ ಸಚಿನ್ ಕುಮಾರ್ ಎಂದು ಗುರುತಿಸಲಾಗಿದ್ದು, ಮೂಲತಃ ಬೆಳಗಾವಿ ಜಿಲ್ಲೆ ಪ್ರಸ್ತುತ ಬೈಕಂಪಾಡಿಯ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಪ್ರವೀಣ್ ಶಿವ ಶಂಕರಪ್ಪ ಕೊಲೆಗೈದ ಆರೋಪಿ ಎಂದು ತಿಳಿದು ಬಂದಿದೆ.
ಕೊಲೆಗೀಡಾದ ಸಚಿನ್ ಕುಮಾರ್ ಮತ್ತು ಪ್ರವೀಣ್ ಶಿವ ಶಂಕರಪ್ಪ ನೆರೆಹೊರೆಯ ಮನೆಗಳಲ್ಲಿ ವಾಸವಾಗಿದ್ದರು. ಮದ್ಯ ಖರೀದಿಸಲೆಂದು ಸಚಿನ್ ಕುಮಾರ್ ನು ಶಿವಶಂಕರರಪ್ಪನಲ್ಲಿ ಹಣ ಕೇಳಿದ್ದನು. ಆತ ಹಣ ನೀಡದೇ ಹಿಂದೆ ಕಳುಹಿಸಿದ್ದ ಎನ್ನಲಾಗಿದೆ.
ಬಳಿಕ ತಡರಾತ್ರಿ ಕಂಠಪೂರ್ತಿ ಕುಡಿದು ಬಂದ ಸಚಿನ್ ಕುಮಾರ್ ನು ಶಿವಕಂರಪ್ಪನ ಮನೆ ಬಳಿ ಬಂದು ಆತನ ತಂದೆ ತಾಯಿಗೆ ಬೈದಾಡಿದ್ದಾನೆ ಎನ್ನಲಾಗಿದೆ. ಈ ವೇಳೆ ಆಕ್ರೋಶಗೊಂಡ ಶಿವಶಂಕರನು ಸಚಿನ್ ನ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿ ಮಾಹಿತಿ ತಿಳಿದೊಡನೆ ಸ್ಥಳಕ್ಕೆ ಭೇಟಿ ನೀಡಿದ ಪಣಂಬೂರು ಪೊಲೀಸ್ ನಿರೀಕ್ಷಕರಾದ ಸಲೀಮ್ ಅಬ್ಬಾಸ್ ಅವರ ನೇತೃತ್ವದ ತಂಡ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿತ್ತು.
ತಕ್ಷಣ ಕಾರ್ಯಪ್ರವೃತ್ತರಾದ ಪಣಂಬೂರು ಪೊಲೀಸರು, ತಲೆ ಮರೆಸಿಕೊಳ್ಳಲು ಯತ್ನಿಸಿದ್ದ ಆರೋಪಿಯನ್ನು ಘಟನೆ ನಡೆದು ಒಂದು ಘಂಟೆಯ ಒಳಗಾಗಿ ಮಂಗಳೂರು ರೈಲು ನಿಲ್ದಾಣದಲ್ಲಿ ಬಂಧಿಸುವಲ್ಲಿ ಪಣಂಬೂರು ಪೊಲೀಸ್ ನಿರೀಕ್ಷಕ ಸಲೀಮ್ ಅಬ್ಬಾಸ್ ನೇತೃತ್ವದ ತಂಡ ಯಶಸ್ವಿಯಾಗಿದೆ.