ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

 ಜನ..ಗಣ..ಮನ..ಬ್ರಿಟಿಷ್ ಅಧಿಕಾರಿಯ ಸ್ವಾಗತ ಗೀತೆ ! : ಸಂಸದ ಕಾಗೇರಿ ಸಂಶೋಧನೆ!!

ಜನ..ಗಣ..ಮನ..ಬ್ರಿಟಿಷ್ ಅಧಿಕಾರಿಯ ಸ್ವಾಗತ ಗೀತೆ ! : ಸಂಸದ ಕಾಗೇರಿ ಸಂಶೋಧನೆ!!


. ವಿವಾದಾತ್ಮಕ ಹೇಳಿಕೆ ನೀಡಿ ಸಂಚಲನ ಮೂಡಿಸಿದ                           ಸಂಸದ ವಿಶ್ವೇಶ್ವರ  ಹೆಗಡೆ ಕಾಗೇರಿ 

ಹೊನ್ನಾವರ*: ಉತ್ತರ ಕನ್ನಡ ಲೋಕಸಭಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೊನ್ನಾವರದಲ್ಲಿ ನಡೆದ ಏಕತಾ ಯಾತ್ರೆಯಲ್ಲಿ ರಾಷ್ಟ್ರಗೀತೆ 'ಜನ ಗಣ ಮನ' ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದಾರೆ.
"ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಅಧಿಕಾರಿಯ ಸ್ವಾಗತಕ್ಕೆ ರಚಿತವಾದ ಗೀತೆ ಜನ ಗಣ ಮನ. ಅದಕ್ಕೆ 'ಭಾರತ ಮಾತಾ ಕಿ ಜೈ' ಅಥವಾ 'ವಂದೇ ಮಾತರಂ'ನಂತೆ ದೇಶಭಕ್ತಿಯ ಭಾವನೆ ಇಲ್ಲ. ಆದರೆ ನಮ್ಮ ಪೂರ್ವಜರು ಒತ್ತಡಕ್ಕೆ ಮಣಿದು ಇದನ್ನೇ ರಾಷ್ಟ್ರಗೀತೆಯನ್ನಾಗಿ ಒಪ್ಪಿಕೊಂಡರು. ಇನ್ನಾದರೂ ಎಲ್ಲ ಕಾರ್ಯಕ್ರಮಗಳಲ್ಲಿ ಮೊದಲು 'ವಂದೇ ಮಾತರಂ' ಹಾಡಿ ರಾಷ್ಟ್ರಭಕ್ತಿಯ ಜ್ವಾಲೆಯನ್ನು ಉರಿಸೋಣ" ಎಂದು ಕಾಗೇರಿ ಕರೆ ನೀಡಿದರು.ಕಾಗೇರಿಯವರ
ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ರಾಜಕೀಯ ಅoಗಳದಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ. ಕಾಂಗ್ರೆಸ್ ನಾಯಕರು "ರಾಷ್ಟ್ರಗೀತೆಯನ್ನೇ ಅವಮಾನಿಸುವ ಬಿಜೆಪಿ ಧೋರಣೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಬಿಜೆಪಿ ವಲಯದಲ್ಲಿ "ಐತಿಹಾಸಿಕ ಸತ್ಯವನ್ನು ಬಯಲುಮಾಡಿದ್ದಾರೆ" ಎಂದು ಸಮರ್ಥನೆ ವ್ಯಕ್ತವಾಗಿದೆ.ಆದರೆ

ರವೀಂದ್ರನಾಥ ಠಾಗೋರ್ ಅವರೇ ಈ ಗೀತೆ ಬ್ರಿಟಿಷ್ ರಾಜನ ಸ್ತುತಿಗೆ ಅಲ್ಲ ಎಂದು ಸ್ಪಷ್ಟಪಡಿಸಿದ್ದರು. ೧೯೫೦ರಲ್ಲಿ ಸಾಂವಿಧಾನಿಕ ಸಭೆಯು ಇದನ್ನು ರಾಷ್ಟ್ರಗೀತೆಯನ್ನಾಗಿ ಅಂಗೀಕರಿಸಿತ್ತು ಎಂಬುದಿಲ್ಲಿ ಗಮನಾರ್ಹ. ಸ್ವತಃ ಗೀತೆ ರಚನೆಕಾರರೇ ಹೇಳಿದ್ದಾಗಲೂ ಬಿಜೆಪಿ ಮುಖಂಡರ ವಿವಾದಾತ್ಮಕ ಹೇಳಿಕೆ ವ್ಯರ್ಥ ಪ್ರಲಾಪ ಎಂದೇ ಟೀಕಾ ಪ್ರಹಾರಕ್ಕೆ ತುತ್ತಾಗಿದೆ.

Ads on article

Advertise in articles 1

advertising articles 2

Advertise under the article