ಮನೆಯಲ್ಲಿ ಕಡ್ಡಾಯವಾಗಿ ಮಕ್ಕಳ ಜೊತೆ ಕನ್ನಡ ಮಾತನಾಡಬೇಕು. : ಪ್ರಶಾಂತ ಶೆಟ್ಟಿ
Saturday, November 1, 2025
ಕೋಟ ಉಪವಿಭಾಗ ಪ್ರಾಥಮಿಕ ಸಮಿತಿ ವತಿಯಿಂದ ಕನ್ನಡ ಗಣರಾಜ್ಯೋತ್ಸವ ಕಾರ್ಯಕ್ರಮ ವನ್ನು ಕೋಟ ಶಾಖಾಕಛೇರಿಯಲ್ಲಿ ನಡೆಸಲಾಯಿತು 
ಕನ್ನಡ ಭುವನೇಶ್ವರಿ ತಾಯಿಗೆ ಪುಷ್ಪ ಅರ್ಚನೆ ಮಾಡಲಾಯಿತು ಸಂದರ್ಭದಲ್ಲಿ  ಸಹಾಯಕ ಇಂಜಿನಿಯರ್ ಪ್ರಶಾಂತ ಶೆಟ್ಟಿ ಮಾತನಾಡುತ್ತಾ ಕನ್ನಡ ಭಾಷೆಯನ್ನು ಮಕ್ಕಳಿಗೆ ಮನೆಯಲ್ಲಿ ಮಾತನಾಡುವ ಮೂಲಕ ಕನ್ನಡದ ಭಾಷೆಯನ್ನು ಉಳಿಸಬೇಕಾದಂತ ಕರ್ತವ್ಯ ತಂದೆ ತಾಯಿದಾಗಿದೆ ಎಂದು ಹೇಳಿದರು ಹಾಗೂ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಾಡ ಗೀತೆಗಳನ್ನು  ಹಾಡಿದರು ಈ ಸಂದರ್ಭದಲ್ಲಿ ಪ್ರಾಥಮಿಕ ಸಮಿತಿ ಅಧ್ಯಕ್ಷರಾದ ದಿನೇಶ ಪುತ್ರನ್ ವಿಠಲವಾಡಿ, ಕಾರ್ಯದರ್ಶಿ ಸುಕುಮಾರ ಶೆಟ್ಟಿ, ಸಾಸ್ತಾನ ಶಾಖಾಧಿಕಾರಿ ಮಹೇಶ ಕೆ,ಮೇಲ್ವಿಚಾರಕ ಚಂದ್ರಶೇಖರ, ಪ್ರಾಥಮಿಕ ಸಮಿತಿ ಸದಸ್ಯರು, ಹಾಗೂ ನೌಕರರು ಗುತ್ತಿಗೆದಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು