ಬೈಂದೂರು: ಮರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ್ ಪಟಗಾರ ಬಿಜೆಪಿ ಪಕ್ಷಕ್ಕೆ ರಾಜೀನಾಮೆ!!
Wednesday, November 5, 2025
ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ್ ಪಟಗಾರ ಬಿಜೆಪಿ ಪಕ್ಷದ ಸದ್ಯಸತ್ವ ಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ,
ಇತ್ತೀಚಿನ ದಿನಗಳಲ್ಲಿ ಮರವಂತೆ ಗ್ರಾಮ ಪಂಚಾಯತ್ ವ್ಯವಸ್ಥೆಯಲ್ಲಿ ಬೆಂಕಿ ಮುಚ್ಚಿದ ಗೆಂಡದಂತೆ ಕಂಡುಬಂದಿದ್ದು ಇಂದು ಆಶ್ಚರ್ಯ ಎಂಬಂತೆ ಬೆಳವಣಿಗೆ ಗೋಚರಿಸಿದೆ
ಕಳೆದ ಒಂದು ವರ್ಷದ ಹಿಂದೆ ಮರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷದಿಂದ ಅಧಿಕಾರ ಸ್ವೀಕರಿಸಿದ ನಾಗರಾಜ್ ಪಟಗಾರ ಬುಧವಾರ ಬೆಳಗ್ಗೆ ಬೈಂದೂರು ಕ್ಷೇತ್ರದ ಕ್ಷೇತ್ರಧ್ಯಕ್ಷರಾದ ಅನಿತಾ ಮರವಂತೆ ಅವರ ಕೈಗೆ ರಾಜೀನಾಮೆ ಪತ್ರ ನೀಡಿ ಬಿಜೆಪಿ ರಾಜೀನಾಮೆ ನೀಡಿ ಆಶ್ಚರ್ಯ ಮೂಡಿಸಿದ್ದಾರೆ
ನಾಗರಾಜ್ ಪಟಗಾರ ಅವರು ಸತತ 4 ಬಾರಿ ಮರವಂತೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ ಆದರೆ ಇತ್ತೀಚಿನ ದಿನಗಳಲ್ಲಿ ಪಕ್ಷಕ್ಕೆ ಸೆಡ್ಡು ಹೊಡೆದು ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ,
ಹಾಗೂ ವಿಶೇಷ ಎಂಬಂತೆ ಮರವಂತೆ ಮತ್ತು ನಾಡ ಗ್ರಾಮ ಪಂಚಾಯತ್ ನಲ್ಲಿ ಇನ್ನು ಹೆಚ್ಚಿನ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ
ಇನ್ನು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ