ಕುಂದಾಪುರ: ಮದ್ದುಗುಡ್ಡೆ ನಿವಾಸಿಗಳ ಹಲವು ವರ್ಷಗಳಿಂದ ಈಡೇರದ ಬೇಡಿಕೆಯನ್ನು ಈಡೇರಿಸಿದ: ಅಬೂ ಮಹಮ್ಮದ್
Sunday, November 2, 2025
ಕುಂದಾಪುರ: ಪುರಸಭೆ ವ್ಯಾಪ್ತಿಯ ಹೃದಯ ಭಾಗದ ಮದ್ದುಗುಡ್ಡೆ ಪ್ರಭಾಕರ್ ಟೈಲ್ಸ್ ಬಳಿ ಇರುವ ಪ್ರಕಾಶ್ ಸೋಮಿಲ್   ಪಕ್ಕದ ರಸ್ತೆ ಬಹಳಷ್ಟು ವರ್ಷಗಳಿಂದ  ಹದಗೆಟ್ಟು ರಸ್ತೆಯಲ್ಲಿ ಹೊಂಡ ಗುಂಡಿಗಳು ತುಂಬಿ  ಓಡಾಡಲು ಪ್ರಯೋಜನಕ್ಕೆ ಬಾರದೆ  ನಿವಾಸಿಗಳ ಪಾಲಿಗೆ ಉಪಯೋಗಕ್ಕೆ ಬಾರದೆ  ಆಟಕ್ಕುಂಟು  ಲೆಕ್ಕಕ್ಕಿಲ್ಲದಂತೆ    ಮಾರ್ಪಟ್ಟಿತು ನಿವಾಸಿಗಳು ಮಾತ್ರ ಓಡಾಡಲು ಹೈರಾಣದ ಪರಿಸ್ಥಿತಿ ಎದುರಾಗಿದ್ದಂತು ಸತ್ಯ 
ಹೌದು ಕುಂದಾಪುರ ಪುರಸಭೆಯ ವ್ಯಾಪ್ತಿಯಲ್ಲಿ  ಮಳೆಗಾಲದಲ್ಲಿ ಬಿದ್ದಿರುವ  ಎಲ್ಲಾ ನೀರು ತುಂಬಿ ಪಂಚಗಂಗಾವಳಿ  ಸೌಪರ್ಣಿಕಾ ಹೊಳೆಗೆ ಸೇರುವ ರಾಜಕಾಲುವೆಯ. ಮುದ್ದುಗುಡ್ಡೆ   ಕೊನೆಯ ಭಾಗದಲ್ಲಿ 100 ಮೀಟರ್ ರಸ್ತೆ ಬಹಳಷ್ಟು ವರ್ಷಗಳಿಂದ  ಹೊಂಡ ಗುಂಡಿಗಳಿಂದ  ಮತ್ತು ಮರ-ಗಿಡಗಳಿಂದ ರಸ್ತೆ  ಹದಗಿಟ್ಟಿತು  
 ನಿವಾಸಿಗಳು ಬಹಳಷ್ಟು ಬಾರಿ ಪುರಸಭೆಗೆ ಮನವಿ ಮಾಡಿದರು ಏನು ಪ್ರಯೋಜನವಾಗದೆ  ಹೈರಾಣ ಹಾಗಿ ಹೋಗಿದ್ದ ವೇಳೆ ನಿವಾಸಿಗಳು   ಸಮಾಜ ಸೇವಕ ಹೃದಯವಂತ ಮಾನವೀಯತೆಯ ಸರದಾರ ಪುರಸಭೆಯ ಕೌನ್ಸಿಲರ್ ಅಬೂ ಮಹಮ್ಮದ್ ರವರಿಗೆ ಹೇಳಿದಾಗ   ಜನರ ಸಮಸ್ಯೆಯನ್ನು ಆಲಿಸಿ   ತನ್ನ ವ್ಯಾಪ್ತಿಗೆ  ಈ ರಸ್ತೆ ಬರದಿದ್ದರೂ ವಿಶೇಷ ಕಾಳಜಿ ವಹಿಸಿ    ಶಿಲೆಕಲ್ಲಿನ ಜೆಲ್ಲಿ (ವೆಡ್ ಮೇಟ್)  ಎರಡು ಲೋಡ್ ರಸ್ತೆಗೆ ತಂದು ಕಾಮಗಾರಿ ಮಾಡಲು ಸಹಕರಿಸಿದರು  ಹಾಗೂ  ಈ ಹದಗೆಟ್ಟಿದ ರಸ್ತೆಗೆ  ಸಂಬಂಧಿಸಿದ ವಾರ್ಡಿನ   ಪುರಸಭೆ ಕೌನ್ಸಿಲರ್ ರಾಘವೇಂದ್ರ ಖಾರ್ವಿ ಯವರು ಒಂದು ಲೋಡು ಜೆಲ್ಲಿ ಕಲ್ಲು ( ವೆಡ್ ಮೇಟ್)  ನೀಡಿ ಕಾಮಗಾರಿಗೆ ಸಹಕರಿಸಿದರು 
ಒಟ್ಟಾರೆಯಾಗಿ ಬಹಳಷ್ಟು ವರ್ಷಗಳಿಂದ ಕಂಡ ಕನಸು ನನಸಾಗಿದೆ ಎಂದು ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ ಎನ್ನಲಾಗುತ್ತಿದೆ 
ಈ ವೇಳೆ ಮಾಧ್ಯಮದವರು ಪುರಸಭೆ ಕೌನ್ಸಿಲರ್ ಅಬೂ ಮಹಮ್ಮದ್  ರವರಿಗೆ ಫೋನ್ ಕರೆ ಮಾಡಿ ಮಾಹಿತಿ ಕೇಳಿದಾಗ ರಾಜಕೀಯ ಮಾಡುವುದು ನನ್ನ  ಜೀವನವಲ್ಲ ರಾಜಕೀಯ ಜೊತೆ ಜೊತೆಯಲಿ ಜನರ ಸಮಸ್ಯೆಗಳನ್ನು ಆಲಿಸಿ ಸಮಸ್ಯೆ ಬಗೆಹರಿಸುವುದೇ ನಿಜವಾದ ರಾಜಕೀಯ ಎಂದು ಹೇಳಿದರು
ಒಟ್ಟಾರೆಯಾಗಿ ಕುಂದಾಪುರ ಪುರಸಭೆಯ ಕೌನ್ಸಿಲರ್ ಅಬೂ ಮಹಮ್ಮದ್ ಸಾಹೇಬರ ಮಾನವೀಯತೆಯ ಕಾರ್ಯಕ್ಕೆ ನಿವಾಸಿಗಳು ತುಂಬು ಹೃದಯದ ಕೃತಜ್ಞತೆ ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು 
ಈ ವೇಳೆ ಮುದ್ದು ಗುಡ್ಡೆ ನಿವಾಸಿಗಳಾದ  ಸಂತೋಷ ಯಾನೆ ಸಂತು ಖಾರ್ವಿ,  ಕೃಷ್ಣ  ಕೆ  ಮೆಂಡನ್, ಚೇತನ್ ಖಾರ್ವಿ, ಸಂತೋಷ್ ಮೊಗವೀರ, ಸುಧಾಕರ ಮೊಗವೀರ , COSTALNEWS ನ್ಯೂಸ್ ವರದಿಗಾರರು   ಸುರೇಶ್, ಹಾಗೂ ಗೋಪಾಲ್ ಕವ್ರಾಡಿ  ಹಾಜರಿದ್ದು ಕಾಮಗಾರಿ ಯಶಸ್ಸಿಗೊಳಿಸಿದರು