BREAKING NEWS ಹಂಗಳೂರು ಸಾರ್ವಜನಿಕರ ದೂರಿಗೆ : ಕೆ. ಪಾಂಡುರಂಗ ನಾಯಕ್ ಮನೆ ಮೇಲೆ ಮೆಸ್ಕಾಂ ಅಧಿಕಾರಿಗಳ ದಾಳಿ
Wednesday, October 15, 2025
ಕುಂದಾಪುರ: ಹಂಗಳೂರು ಗ್ರಾಮದಲ್ಲಿ ಇಂದು ಮಧ್ಯಾಹ್ನ ಹಂಗಳೂರು ಪಂಚಾಯತ್ ವ್ಯಾಪ್ತಿಯ ಸಂಜಯ ಗಾಂಧಿ ರಸ್ತೆಯಲ್ಲಿರುವ ಕೆ. ಪಾಂಡುರಂಗ ನಾಯಕ್ ರವರು ತಾನು ವಾಸವಾಗಿರುವ ಹೊಸ ಮನೆಗೆ ಒಂದೇ ಡೋರ್ ನಂಬರ್ ಪಡೆದಿರುತ್ತಾರೆ. ಆದರೆ ಬಹಳ ವರ್ಷಗಳಿಂದ ತಾನು ಇದ್ದ ಹಳೆ ಹಂಚಿನ ಮನೆಗೆ ಯಾವುದೇ ಡೋರ್ ನಂಬರ್ ಪಡೆಯದೆ ಅಲ್ಲದೆ ಹಂಚಿನ ಮನೆಯನ್ನು ಬಾಡಿಗೆ ನೀಡಿದ್ದು ಅದಕ್ಕೆ ಯಾವುದೇ ಡೋರ್ ನಂಬರ್ ಪಡೆದಿರುವುದಿಲ್ಲ ಎಂದು ತಿಳಿದುಬಂದಿದೆ ತನ್ನ ಹೊಸ ಮನೆಗೆ ನೀಡಿದ ವಿದ್ಯುತ್ ಮೀಟರ್ ನಿಂದ ಬಾಡಿಗೆ ಮನೆಗೆ ಕರೆಂಟ್ ಒದಗಿಸಿದ್ದನ್ನು ಸಾರ್ವಜನಿಕರು ಮೆಸ್ಕಾಂ ದೂರು ಪ್ರಾಧಿಕಾರಕ್ಕೆ ಇವರ ಅಕ್ರಮ ಕರೆಂಟ್ ಕಳ್ಳತನದ ಮಾಹಿತಿ ನೀಡಿದ್ದು, ಸಾರ್ವಜನಿಕ ಮಾಹಿತಿ ಮೇರೆಗೆ
ಮೆಸ್ಕಾಂ ಅಧಿಕಾರಿಗಳು ಮತ್ತು ಮೆಸ್ಕಾಂ ಜಾಗ್ರತ್ ದಳ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ, ಪರಿಶೀಲಿಸಿ ಇವರ ಅಕ್ರಮ ಸಾಭಿತ್ತಾಗಿದ್ದು ಇವರ ಮೇಲೆ ಮುಂದಿನ ಕ್ರಮಕ್ಕೆ ಆದೇಶ ಮಾಡಿದ್ದರೆ ಎಂದು ಮಾಹಿತಿ ಲಭ್ಯವಾಗಿದೆ.