ಶಿರಸಿ : ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಆರೋಪಿತರ ಬಂಧನ
Friday, October 17, 2025
ಶಿರಸಿ :    ತಾಲೂಕಿನ ಹುಲೇಕಲ್ ಹೆಂಚಟರ್ಾ ಎಂಬಲ್ಲಿ   ಪರಶುರಾಮ ಮಾದೇವ ಶೆಟ್ಟಿ ಎಂಬುವವರ ಕುಟುಂಬದವರಿಗೆ ಸಂಬಂಧಿಸಿದ ಶ್ರೀ ಚೌಡೇಶ್ವರಿ ದೇವಸ್ಥಾನದ   ಸ್ಟೀಲ್ ಬಾಗಿಲನ್ನು ಮುರಿದು ದೇವರ ಮೂರ್ತಿಯ ಮೇಲಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣ ಸೇರಿದಂತೆ ಒಟ್ಟೂ 2.31.400/-ರೂ ಮೌಲ್ಯದ ಆಭರಣಗಳನ್ನು ಹಾಗೂ ಕಾಣಿಕೆ ಹುಂಡಿ ಯಲ್ಲಿದ್ದ ನಗದು ಹಣ 80,000/-ರೂಗಳನ್ನು ಕಳ್ಳತನ ಮಾಡಿರುವ ಆರೋಪಿಗಳನ್ನು   ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪರಶುರಾಮ ಮಾದೇವ ಶೆಟ್ಟಿ ಎಂಬುವವರು ದೂರು ನೀಡಿದ್ದರು.  
ಬಾಲ ಕುಮಾರ ತಂದೆ ವಾಸು ಕೆ, @ ಬಾಲರಾಜು ಸ್ವಾಮಿ,ಅಂತರಗಂಗೆ, ಭದ್ರಾವತಿ ಹಾಲಿ: ಬೆಂಗಳೂರು, ಮಹಮ್ಮದ್ ಅಲಿ ತಂದೆ ಅಲಿಕಾಕಾ @ ಜಯರಾಜ್, ಸಾ|| ಅಂತರಗಂಗೆ, ತಾ: ಭದ್ರಾವತಿ. ಜಿಲ್ಲೆ: ಶಿವಮೊಗ್ಗ.ಇವರನ್ನು ಪತ್ತೆ ಮಾಡಿ ವಶಕ್ಕೆ ಪಡೆದು ಆರೋಪಿತರಿಂದ ಸುಮಾರು 1,50,000/- ರೂ ಮೌಲ್ಯದ ಬೆಳ್ಳಿಯ ಆಭರಣ ಹಾಗೂ 60,000/- ರೂ ನಗದು ಹಣ ವಶ ಪಡಿಸಿಕೊಂಡು, ಆರೋಪಿತರನ್ನು ಬಂಧಿಸಲಾಗಿದೆ.DYSP ಗೀತಾ ಪಾಟೀಲ್ ಮಾರ್ಗದರ್ಶನದಲ್ಲಿ,ಪಿ ಎಸ್ ಐ ಸಂತೋಷ ಕುಮಾರ ಮತ್ತು ಅಶೋಕ ರಾಟೋಡ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ವರಿಷ್ಠಾಧಿಕಾರಿ  ದೀಪನ್  ಇಲಾಖೆಯ ಸಿಬ್ಬಂದಿಗಳಿಗೆ ಶ್ಲಾಘಿಸಿದ್ದಾರೆ