ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

 ಕುಂದಾಪುರ:  ಹೊಸಾಡು ಗ್ರಾಮದ ಗ್ರಾಮಸ್ಥರಿಗೆ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಿ ಕೊಡುವಂತೆ ; ತಹಸಿಲ್ದಾರ್ ಗೆ ಮನವಿ

ಕುಂದಾಪುರ: ಹೊಸಾಡು ಗ್ರಾಮದ ಗ್ರಾಮಸ್ಥರಿಗೆ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಿ ಕೊಡುವಂತೆ ; ತಹಸಿಲ್ದಾರ್ ಗೆ ಮನವಿ

ಸರ್ವೆ ನಂಬ್ರ 88/2 ರಲ್ಲಿ 3.44ಎಕೆ, 39/12121 0 3.9925, 87/10 3.1025, 87/2 0% 1.8225 2 ಇನ್ನಿತರ ಸರಕಾರಿ ಜಮೀನನ್ನು ಗ್ರಾಮ ಪಂಚಾಯತ್ ಹೊಂದಿದ್ದು, 

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರದ ಹೊಸಾಡು ಗ್ರಾಮದಲ್ಲಿ ನಮ್ಮ ಪೂರ್ವಜರ ಕಾಲದಿಂದಲೂ ವಾಸವಾಗಿದ್ದು, ಒಂದೊಂದು ಮನೆಯಲ್ಲಿ ನಾಲ್ಕಾರು ಕುಟುಂಬಗಳು ವಾಸ್ತವ್ಯ ಹೊಂದಿದ್ದು, ನಮಗೆ ಮನೆ ಕಟ್ಟಿಕೊಳ್ಳಲು ಭೂಮಿ ಇಲ್ಲವಾಗಿದ್ದು, ನಮ್ಮ ಗ್ರಾಮದಲ್ಲಿ ತುಂಬಾ ಸರಕಾರಿ ಜಾಗವಿದ್ದು ಅದು ಪಂಚಾಯತ್ ಅಧೀನಕ್ಕೆ ಒಳ ಪಡದೇ ಇರುವುದರಿಂದ ನಮಗೆ ನಿವೇಶನ ಕಲ್ಪಿಸಿಕೊಡಲು ಪಂಚಾಯತ್ ಹಿಂದೇಟು ಹಾಕುತ್ತ ಬಂದಿರುತ್ತದೆ ಎಂದು ಗ್ರಾಮಸ್ಥರು ಕುಂದಾಪುರ ತಹಸಿಲ್ದಾರ್ ಎದುರು ಅಳಲು ತೋಡಿಕೊಂಡರು 

 ಹೊಸಡು ಗ್ರಾಮದಲ್ಲಿ ಬಹಳಷ್ಟು ಸರಕಾರಿ ಜಮೀನು ಇದ್ದು ಸರಕಾರಿ ಜಮೀನನ್ನು ಎಲ್ಲವೂ ಹಣವಂತರ ಪಾಲಾಗಿದೆ ಹಾಗೂ ತುಂಬಾ ಭೂಮಿ ಇರುವ ಕೆಲವು ಜನರು ಸರಕಾರಿ ಭೂಮಿ ಕಬಳಿಕೆಗೆ ಮುಂದಾಗಿದ್ದು, ಸರ್ವೆ ನಂಬ್ರ 88/2 ರಲ್ಲಿ 3.44ಎಕೆ, 39/12121 0 3.9925, 87/10 3.1025, 87/2 0% 1.8225 2 ಇನ್ನಿತರ ಸರಕಾರಿ ಜಮೀನನ್ನು ಗ್ರಾಮ ಪಂಚಾಯತ್ ಹೊಂದಿದ್ದು, ಹೊಸಾಡು ಪಂಚಾಯತ್ ನಿವೇಶನ ರಹಿತರಿಗೆ ಕಾಯ್ದಿರಿಸಬೇಕಾಗಿ ತಹಸಿಲ್ದಾರರ ರಿಗೆ ವಿನಂತಿ ಮಾಡಿಕೊಂಡರು 
 ಹಾಗೂ ನಿವೇಶನ ರಹಿತರ ಅರ್ಜಿಯನ್ನು ಸಂಬಂದ ಪಟ್ಟ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ಸರಕಾರಿ ಜಮೀನನ್ನು ಸಾಮನ್ಯ ಬಡ ಜನರಿಗೆ ಉಪಯೋಗವಾಗುವಂತೆ( ಮನೆ ಕಟ್ಟಿಕೊಳ್ಳಲು) ತಾವು ಪರಿಶೀಲನೆ ನಡೆಸಿ ಎಂದು ತಹಸಿಲ್ದಾರ್ ಗ್ರಾಮಸ್ಥರು ಮನವಿ ಮಾಡಿಕೊಂಡರು, 

ಗ್ರಾಮಸ್ಥರ ಮನವಿಗೆ ಸ್ಪಂದಿಸಿ ತಕ್ಷಣ ಪರಿಶೀಲನೆ ನಡೆಸಿ ಕ್ರಮ ವಹಿಸುವ ಬಗ್ಗೆ ಕುಂದಾಪುರ ತಹಸಿಲ್ದಾರ್ ಪ್ರದೀಪ್ ರವರು ಭರವಸೆ ನೀಡಿದ್ದಾರೆ ಎಂದು ಗ್ರಾಮಸ್ಥರು ಮಾಧ್ಯಮಕ್ಕೆ ತಿಳಿಸಿದ್ದಾರೆ

Ads on article

Advertise in articles 1

advertising articles 2

Advertise under the article