ಕುಂದಾಪುರ: B H ಸರ್ಕಲ್ ಬಳಿ ಹಲವಾರು ದ್ವಿಚಕ್ರ ವಾಹನಗಳು ನಿಲ್ಲಿಸಿ !! ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಕಂಟಕ!!
Saturday, September 6, 2025
ಕುಂದಾಪುರ: ತಾಲೂಕಿನ ಬಳ್ಕೂರು ಗ್ರಾಮದ B H ಸರ್ಕಲ್ ಬಳಿ ದಿನನಿತ್ಯ ರಾಜ್ಯ ರಸ್ತೆಯ ಮಧ್ಯಭಾಗದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿ ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ಸಂಕಷ್ಟ ಎದುರಾಗುತ್ತಿರುವ ಘಟನೆ ನಡೆಯುತ್ತಿದೆ ಎನ್ನಲಾಗುತ್ತಿದೆ,
ಹೌದು B H ಸರ್ಕಲ್ ನಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತಿರುವ ಸರ್ಕಲ್ ಇದಾಗಿದ್ದು
ಈ ಸರ್ಕಲ್ ರಾಜ್ಯ ಹೆದ್ದಾರಿಯ ಮುಖ್ಯ ಸರ್ಕಲ್ ಆಗಿರುವ ಹಿನ್ನೆಲೆಯಲ್ಲಿ ದಿನದ 24 ಗಂಟೆಯೂ ಕುಂದಾಪುರ ಬೆಂಗಳೂರು ಆಗುಂಬೆ ಸಿದ್ದಾಪುರ ಶಿವಮೊಗ್ಗ ಹುಣ್ಸ್ ಮಕ್ಕಿ ಹಾಲಾಡಿ ಬಿದ್ಕಲ್ ಕಟ್ಟೆ ಹಾಗೂ ರಾಜ್ಯದ ವಿವಿಧ ಭಾಗಗಳಿಗೆ ಸಂಪರ್ಕಿಸುವ ಅತಿ ಮುಖ್ಯ ಸರ್ಕಲ್ ಇದಾಗಿದೆ,
ಹೌದು ಸರ್ಕಾರ ಇವಾಗಲೇ B H ಸರ್ಕಲ್ ಅಭಿವೃದ್ಧಿಗೆ ಹಾಗೂ ರಸ್ತೆಯ ಅಗಲೀಕರಣ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿದೆ ಏನಲಾಗುತ್ತಿದೆ?? ಆದರೆ ಸರ್ಕಲ್ ಬಳಿ ಇರುವ ಸರಕಾರದ ಜಾಗದಲ್ಲಿ ಅಕ್ರಮವಾಗಿ ಅಂಗಡಿ ನಡೆಸುವ ಮಾಲೀಕರು ಹಾಗೂ ಅದರ ಹಿಂದುಗಡೆ ಇರುವ ಖಾಸಗಿ ಜಾಗದ ಮಾಲೀಕರ ಕೂಗಾಟ ಹಾರಾಟ ಚೀರಾಟದ ಜಟಾ ಪಟಿಯಲ್ಲಿ ಅಭಿವೃದ್ಧಿ ಹಂತದಲ್ಲಿರುವ ರಸ್ತೆಯ ಕಾಮಗಾರಿಯು ಅರ್ಧಂಬರ್ಧಕ್ಕೆ ಸ್ಥಗಿತಗೊಳಿಸಿದ ಕಾರಣ ವಾಹನ ಸವಾರರಿಗೆ ಹಾಗೂ ಪಾದಾಚಾರಿಗಳಿಗೆ ಸಂಕಷ್ಟ ಎದುರಾಗಿರುವುದಂತೂ ಸತ್ಯ??!!
ಬರುವ ಬೇಸಿಗೆಯಲ್ಲಿ ಇನ್ನಷ್ಟು ವಾಹನಗಳ ಓಡಾಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಾಗೂ ಜನರ ಸುರಕ್ಷತೆಗಾಗಿ ಮತ್ತು ಸುಗಮ ಸಂಚಾರದ ಹಿತ ದೃಷ್ಟಿಯಿಂದ ತಕ್ಷಣ B H ಸರ್ಕಲ್ ಕಾಮಗಾರಿ ಪೂರ್ಣಗೊಳಿಸುವಂತೆ ಸಾರ್ವಜನಿಕರ ಅಭಿಪ್ರಾಯವಾಗಿದೆ,
PWD ಅಧಿಕಾರಿಗಳು, ಪೋಲಿಸ್ ಇಲಾಖೆ, ಜನಪ್ರತಿನಿಧಿಗಳು, ಶಾಸಕರು, ಗ್ರಾಮ ಪಂಚಾಯತ್ , ತಕ್ಷಣ BH ಸರ್ಕಲ್ ಅಗಲೀಕರಣ ಅಭಿವೃದ್ಧಿಯ ಬಗ್ಗೆ ಗಮನ ಹರಿಸಬೇಕೆಂದು ಸಾರ್ವಜನಿಕರ ಅಭಿಪ್ರಾಯವಾಗಿದೆ,