ಕುಂದಾಪುರ| ಕಾರು- ಬೈಕ್ ನಡುವೆ ಡಿಕ್ಕಿ: ಬೈಕ್ ಸವಾರ ಹೊಳೆಗೆ ಬಿದ್ದು ಪಾರು!!
Tuesday, September 30, 2025
ಕುಂದಾಪುರ: ಕಾರೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಹೊಳಗೆ ಬಿದ್ದು ಪ್ರಾಣಾಪಾಯದಿಂದ ಪಾರಾದ ಘಟನೆ ಸೆ.30 ರಂದು ಮಂಗಳವಾರ ಸಂಜೆ ಕುಂದಾಪುರ ತಾಲೂಕಿನ
ಕೋಟೇಶ್ವರ ಸಮೀಪ ವಕ್ವಾಡಿ ಸೇತುವೆ ಬಳಿ ಸಂಭವಿಸಿದೆ.
ಬೈಕ್ ಸವಾರ ತೆಕ್ಕಟ್ಟೆ ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಾಹನ ಚಾಲಕ ಕೃಷ್ಣ ಎಂದು ಗುರುತಿಸಲಾಗಿದೆ.
ವಿಕ್ರಮ್ ಶೇಟ್ ಎನ್ನುವವರು ಓಮಿನಿ ಕಾರನ್ನು ವಕ್ವಾಡಿಯಿಂದ ಕೋಟೇಶ್ವರದ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ವಕ್ವಾಡಿ ಸೇತುವೆ ಬಳಿ ಅಡ್ಡ ಬಂದ ಹಾವೊಂದನ್ನು ತಪ್ಪಿಸಲು ಹೋಗಿ ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ.
ಕಾರು ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಕೃಷ್ಣ ಅವರು ನಿಯಂತ್ರಣ ತಪ್ಪಿ ಹೊಳಗೆ ಬಿದ್ದಿದ್ದಾರೆ. ಕೂಡಲೇ ಕಾರಿನ ಚಾಲಕ ವಿಕ್ರಮ್ ರಕ್ಷಣೆಗೆಂದು ಹೊಳೆಗೆ ಇಳಿದು ರಕ್ಷಿಸಲು ಹೋದಾಗ ನೀರಿನಲ್ಲಿ ಸ್ವಲ್ಪ ದೂರ ಕೊಚ್ಚಿಕೊಂಡು ಹೋಗಿದ್ದರು.
ತಕ್ಷಣ ಸ್ಥಳೀಯರಾದ ಸದಾಶಿವ ಶೆಟ್ಟಿಗಾರ್ ಮತ್ತು ಶಂಕರ್ ಪೂಜಾರಿ ಹೊಳೆಗೆ ಇಳಿದು ಇಬ್ಬರನ್ನೂ ರಕ್ಷಿಸಿದ್ದಾರೆ.
ತಲೆ, ಕೈ ಕಾಲುಗಳಿಗೆ ಗಂಭೀರ ಗಾಯಗೊಂಡ ಬೈಕ್ ಸವಾರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ,