ಕುಸ್ತಿಯಲ್ಲಿ ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಮಿಂಚಿನ ಸಂಚಾರ ಮಾಡಿದ 17 ಜನತಾ ಕುಸ್ತಿಪಟುಗಳು
Friday, August 8, 2025
ಕಿರಿಮಂಜೇಶ್ವರ: ಆಗಸ್ಟ್ 8ರಂದು ಶಾಲಾ ಶಿಕ್ಷಣ ಇಲಾಖೆ ಹಾಗೂ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರ ಇವರ ಆತಿಥ್ಯದಲ್ಲಿ ಬೈಂದೂರು ವಲಯ ಮಟ್ಟದ ಕುಸ್ತಿ ಪಂದ್ಯಾಟವು ಹೆಮ್ಮಾಡಿಯಲ್ಲಿ ನಡೆಯಿತು. ಈ ಕುಸ್ತಿ ಪಂದ್ಯಾಟದಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ 17 ಕುಸ್ತಿಪಟುಗಳು ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.
14ರ ವಯೋಮಾನದ ಹುಡುಗರ ವಿಭಾಗದಲ್ಲಿ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ವಿದ್ಯಾರ್ಥಿಗಳಾದ ನಿನಾದ್(8ನೇ ತರಗತಿ ), ರಿಷಿಕ್(8ನೇ ತರಗತಿ), ಆನ್ಸ್ಟನ್( 8ನೇತರಗತಿ),
ಆದಿತ್ಯ( 8ನೇ ತರಗತಿ), ಅಶ್ವಿನ್(7ನೇ ತರಗತಿ), ಅಭಿರಾಜ್ (7ನೇ ತರಗತಿ)ಮತ್ತು ರಯಾನ್ ಅಹಮದ್ ಖಾನ್(7ನೇ ತರಗತಿ)ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
14ರ ವಯೋಮಾನದ ಹುಡುಗಿಯರ ವಿಭಾಗದಲ್ಲಿ ಸನ್ಮಿತಾ(8ನೇತರಗತಿ), ಸನ್ವಿತಾ (8ನೇತರಗತಿ) ಮತ್ತು ತಕ್ಷಾ (8ನೇತರಗತಿ) ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
17ರ ವಯೋಮಾನದ ಹುಡುಗರ ವಿಭಾಗದಲ್ಲಿ ಸ್ಕಂದ(9ನೇ ತರಗತಿ), ಸ್ವಸ್ತಿಕ್ (9ನೇ ತರಗತಿ) ಮತ್ತು
ಸೋಹನ್(8ನೇ ತರಗತಿ) ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
17ರ ವಯೋಮಾನದ ಹುಡುಗಿಯರ ವಿಭಾಗದಲ್ಲಿ ಸಪ್ತಮಿ(9ನೇ ತರಗತಿ), ನಿರೀಕ್ಷಾ(9ನೇ ತರಗತಿ), ಸಾನ್ವಿ(9ನೇ ತರಗತಿ) ಮತ್ತು ಅಪೇಕ್ಷಾ(8ನೇ ತರಗತಿ) ಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ,ಮುಖ್ಯ ಶಿಕ್ಷಕಿ, ಬೋಧಕ/ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.