Kundapura ಗುಜ್ಜಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಜಲಜ ಮೊಗವೀರ ಅವಿರೋಧ ಆಯ್ಕೆ
Thursday, July 31, 2025
ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮ ಪಂಚಾಯತ್ ಕ್ಷಪ್ರ ರಾಜಕೀಯ ಬೆಳವಣಿಗೆಯಿಂದಾಗಿ ಉಪಾಧ್ಯಕ್ಷರ ಬದಲಾವಣೆ ಯಾಗಿದೆ.
ಕಳೆದ ಬಾರಿಯ ಉಪಾಧ್ಯಕ್ಷರಾದ ನಾಗರತ್ನ ಖಾರ್ವಿ ವಿರುದ್ಧ ಬಹು ಸಂಖ್ಯೆಯ ಪಂಚಾಯತ್ ಸದಸ್ಯರು ಪಂಚಾಯತ್ ಅಭಿವೃದ್ಧಿ ಕಾಣದೆ ಅವರ ಕಾರ್ಯ ವೈಖರಿಗೆ ಬೇಸತ್ತು ಆವಿಶ್ವಾಸ ಮಂಡನೆಯನ್ನು ಕಳೆದ ಎರಡು ತಿಂಗಳು ಹಿಂದೆ ಮಂಡಿಸಿ ಸರಕಾರದ ಸುತ್ತೋಲೆ ಪ್ರಕಾರ ಅಧಿಕಾರದಿಂದ ಗ್ರಾಮ ಪಂಚಾಯತ್ ಸರ್ವ ಸದಸ್ಯರು ಸೇರಿ ಇಳಿಸಿದ್ದಾರೆ.
ನಂತರದ ಬೆಳವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಕ್ರೀಡ ಕ್ಷೇತ್ರದ ಅಧಿಕಾರಿ ಕುಸುಮ ಕರ್ ಶೆಟ್ಟಿ ಅವರು ಚುನಾವಣೆ ಅಧಿಕಾರಿಯಾಗಿ ನೇಮಕ ಮಾಡಲಾಯಿತು, ಈ ತಿಂಗಳ 31 :ರಂದು ಉಪಾಧ್ಯಕ್ಷರ ಚುನಾವಣೆಗೆ ದಿನ ನಿಗದಿಪಡಿಸಿದರು. ಚುನಾವಣಾ ಪ್ರಕ್ರಿಯೆಯನ್ನು ಕ್ರೀಡೆ ಕ್ಷೇತ್ರದ ನಿರ್ದೇಶಕರಾದ ಕುಸುಮ ಕರ್ ಶೆಟ್ಟಿ ನಡೆಸಿಕೊಟ್ಟರು. ಗುಜ್ಜಾಡಿ ಗ್ರಾಮ ಪಂಚಾಯಿತಿನಲ್ಲಿ ಜಲಜ ಮೊಗವೀರ ಅವರ ಹೊರತಾಗಿ ಯಾರು ನಾಮಪತ್ರ ಸಲ್ಲಿಸದೆ ಇರುವ ಕಾರಣ ಅವಿರೋದವಾಗಿ ಆಯ್ಕೆ ಆಗಿದ್ದಾರೆ. ಇದು ಕಾಂಗ್ರೆಸ್ ಬೆಂಬಲಿತ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಗೊಳಿಸಿದೆ
ಇನ್ನು ಮುಂದಿನ ದಿನದಲ್ಲಿ ಜಲಜ ಮೊಗವೀರ ಯವರ ಆಡಳಿತ ಅವಧಿಯಲ್ಲಿ ಇನ್ನಷ್ಟು ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಹಾಗೂ ಸೇವೆಗಳು ನಮ್ಮೂರ ಜನರಿಗೆ ಖಂಡಿತವಾಗಿ ಸಿಗಲಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ಪಟ್ಟಿದ್ದಾರೆ.
ಈ ಸಂದರ್ಭದಲ್ಲಿ ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಹಾಗೂ ಪಂಚಾಯತ್ ಅಧಿಕಾರಿ ಮತ್ತು ಸಿಬ್ಬಂದಿಗಳು ಗಂಗೊಳ್ಳಿ ಠಾಣೆಯ ಪೊಲೀಸ್ ಸಿಬ್ಬಂದಿಗಳು ಮತ್ತು ಊರಿನ ಗ್ರಾಮಸ್ಥರು ಹಾಜರಿದ್ದರು.
ಕಾಂಗ್ರೆಸ್ ಕಾರ್ಯಕರ್ತರ ಬೆಂಬಲ ಇನ್ನಷ್ಟು ಹೆಚ್ಚಾಗಿದೆ