ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ಇದರ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ

ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ಇದರ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ

COSTALNEWS ದಾಮೋದರ ಮೊಗವೀರ ಸಾರಥ್ಯದಲ್ಲಿ 

ಕುಂದಾಪುರ: ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ಇದರ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಕಾರ್ಯಕ್ರಮವು ದಿನಾಂಕ 27-07-2025 ನೇ ಆದಿತ್ಯವಾರ ಬನ್ನಾಡಿ ಸುಬ್ಬಣ್ಣ ಹೆಗ್ಡೆ ಸಭಾ ಭವನ ದಲ್ಲಿ ನೆರವೇರಿತು.

*ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಲಯನ್ ಎನ್.ಎಮ್. ಹೆಗ್ಡೆ ಎಮ್.ಜೆ.ಎಫ್* ಇವರು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಅತ್ಯುತ್ತಮ ರೀತಿಯಲ್ಲಿ ನೆರವೇರಿಸಿ, ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.

ನೂತನ‌ ಅಧ್ಯಕ್ಷರಾದ *ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ* ಯವರು ಅಧ್ಯಕ್ಷೀಯ ಭಾಷಣ ಮಾಡಿದರು.

ಲಯನ್ಸ್ ಜಿಲ್ಲಾ ಚೀಫ್ ಡಿಸ್ಟ್ರಿಕ್ಟ್ ಎಡ್ಮಿನಿಸ್ಟ್ರೇಟರ್ ಲಯನ್ ಯಡಾಡಿ ಅರುಣ್ ಕುಮಾರ್ ಹೆಗ್ಡೆ,
ರೀಜನ್ ಚಯರ್ ಪರ್ಸನ್ ಲಯನ್ ರಜತ್ ಹೆಗ್ಡೆ,
ಝೋನ್ ಚಯರ್ ಪರ್ಸನ್ ಲಯನ್ ಸಂತೋಷ್ ಶೆಟ್ಟಿ, ರೀಜನ್‌ ಸೆಕ್ರೆಟರಿ ಲಯನ್ ಏಕನಾಥ್ ಬೋಳಾರ್ ಶುಭಶಂಸನೆಗೈದರು.

ಮಾಜಿ ಜಿಲ್ಲಾ ಗವರ್ನರ್ ಲಯನ್ ಮಹಮ್ಮದ್ ಹನೀಫ್ 
&
ಕ್ಲಬ್ ನ ನೂತನ ಕೋಶಾಧಿಕಾರಿ ಲಯನ್ ನಿತೀಶ್ ಆಚಾರ್ ಮಧುವನ
&
ನಿಕಟಪೂರ್ವ ಕಾರ್ಯದರ್ಶಿ ಬನ್ನಾಡಿ ಅಶಿತ್ ಕುಮಾರ್ ಶೆಟ್ಟಿಯವರು ಉಪಸ್ಥಿತರಿದ್ದರು.

ಲಯನ್ ಬನ್ನಾಡಿ ಪ್ರಭಾಕರ್ ಶೆಟ್ಟಿ ಪ್ರಾರ್ಥಿಸಿದರು.

ನಿಕಟಪೂರ್ವ ಅಧ್ಯಕ್ಷರಾದ ಲಯನ್ ಬನ್ನಾಡಿ ಪ್ರವೀಣ್ ಹೆಗ್ಡೆಯವರು ಸ್ವಾಗತಿಸಿ, ಕ್ಲಬ್ ನ ಸದಸ್ಯರಿಗೆ ಕೃತಜ್ನತೆಗಳನ್ನು ಹೇಳಿದರು.

ಲಯನ್ ಬನ್ನಾಡಿ ದೀಪಕ್ ಕುಮಾರ್ ಶೆಟ್ಟಿಯವರು ಫ್ಲಾಗ್ ಸೆಲ್ಯುಟೇಷನ್ ಹಾಗೂ 

ಲಯನ್ ಕೂರಾಡಿ ಶೇಖರ್ ಶೆಟ್ಟಿಯವರು ಕೋಡ್ ಆಫ್ ಕಂಡಕ್ಟ್ ವಾಚಿಸಿದರು.

ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ಇದರ ಸ್ಥಾಪಾಕಾಧ್ಯಕ್ಷ & ಮಾಜಿ ರೀಜನ್ ಚೆಯರ್ ಪರ್ಸನ್ ಲಯನ್ Adv ಬನ್ನಾಡಿ ಸೋಮನಾಥ ಹೆಗ್ಡೆ ಪದಪ್ರಧಾನ ಅಧಿಕಾರಿಯ ಪರಿಚಯ
&
ಮಾಜಿ ಅಧ್ಯಕ್ಷರಾದ ಲಯನ್ Adv ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿಯವರು ನೂತನ ಅಧ್ಯಕ್ಷರ ಪರಿಚಯ ಮಾಡಿದರು.

ಈ ಸಂದರ್ಭ‌ ಲಯನ್ಸ್ ಕ್ಲಬ್ ನ‌ ಸೇವಾ ಕಾರ್ಯಕ್ರಮದ ಅಂಗವಾಗಿ, ಕೊತ್ತಾಡಿ ಆನಂದ ಮರಕಾಲ ಇವರಿಗೆ ವೈದ್ಯಕೀಯ ನೆರವು, ವಡ್ಡರ್ಸೆ ಸರಕಾರಿ ಪ್ರೌಢ ಶಾಲೆ, ಕಾವಡಿ ಸರಕಾರಿ ಪ್ರೌಢ ಶಾಲೆ & ಕೋಟ ವಿವೇಕ ಪ್ರೌಢ ಶಾಲೆಯ ಈ ಸಾಲಿನ ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯುತ್ತಮ‌ ಅಂಕ ಗಳಿಸಿದ ನಿಶಾಂತ್, ಭರತ್ ರಾಜ್ & ಸಜನಿ ಇವರಿಗೆ ಶೈಕ್ಷಣಿಕ ನೆರವು ನೀಡಿ ಗೌರವಿಸಲಾಯಿತು. ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿನಿ, ಪ್ರಸ್ತುತ ‌ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿರುವ ಅಚ್ಲಾಡಿ ಶ್ರೀದೇವಿ ಶೆಟ್ಟಿ ಯವರನ್ನು ಗೌರವಿಸಲಾಯಿತು ಹಾಗೂ ಮಂಗಳೂರು ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷರಾದ ಲಯನ್ ಬನ್ನಾಡಿ ಬಾಲಕೃಷ್ಣ ಶೆಟ್ಟಿಯವರು ಕೊಡಮಾಡಿದ ಆರ್ಥಿಕ ನೆರವಿನ ಚೆಕ್ ನ್ನು ಓರ್ವ ಫಲಾನುಭವಿಗೆ ನೀಡಲಾಯಿತು.

ಕ್ಲಬ್ ನ ನೂತನ‌‌ ಕಾರ್ಯದರ್ಶಿ ಲಯನ್ ಚಂದ್ರ ಶೆಟ್ಟಿ ಯಾಳಕ್ಲು ವಂದಿಸಿದರು.

ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಇದರ ಸ್ಥಾಪಕ ಕಾರ್ಯದರ್ಶಿ ಲಯನ್ ಪ್ರೊ| ಕಲ್ಕಟ್ಟೆ ಚಂದ್ರ ಶೇಖರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಲಯನ್ "ಫೆಲೋಶಿಪ್" ನೊಂದಿಗೆ ಕಾರ್ಯಕ್ರ ಮ ಮುಕ್ತಾಯ ಗೊಂಡಿತು.

Ads on article

Advertise in articles 1

advertising articles 2

Advertise under the article