ಕೋಟೇಶ್ವರ: ಆಂಬುಲೆನ್ಸ್ ಚಾಲಕ ನೇಣಿಗೆ ಶರಣು!!
Sunday, July 27, 2025
ಕುಂದಾಪುರ; ತಾಲೂಕಿನ ಕೋಟೇಶ್ವರ ಆಂಬುಲೆನ್ಸ್ ಚಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜುಲೈ 27ರಂದು ಕೊಟೇಶ್ವರದಲ್ಲಿ ಬೆಳಿಗ್ಗೆ ನಡೆದಿದೆ.ಅಯ್ಯೂಬ್ ಕೋಟೇಶ್ವರ (55) ಮೃತಪಟ್ಟವರು. ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ.ಇವರು ಕೆಲವು ವರ್ಷಗಳಿಂದ ಕೋಟೇಶ್ವರ ಎನ್ ಆರ್ ಆಚಾರ್ಯ ನರ್ಸಿಂಗ್ ಹೋಮ್ ನಲ್ಲಿ ಆಂಬುಲೆನ್ಸ್ ಚಾಲಕನಾಗಿ ಮತ್ತು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದರು.ಸ್ವಂತ ಆಂಬುಲೆನ್ಸ್ ನ್ನು ನಡೆಸುತ್ತಿದ್ದ ಇವರು ರೋಗಿಯೊಬ್ಬರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಉಡುಪಿ ಎಂಜೆಎಂ ಕಾಲೇಜಿನ ಸಮೀಪ ರಸ್ತೆ ಡಿವೈಡರ್ ಬಳಿ ನಿಯಂತ್ರಣ ತಪ್ಪಿ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದ ಪರಿಣಾಮ ರೋಗಿ ಸಾವನ್ನಪ್ಪಿದ್ದರು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ