ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

COSTALNEWS /ಕುಂದಾಪುರ : ಉಡುಪಿ ಜಿಲ್ಲೆಯಲ್ಲಿ ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಇದೀಗ ಗಂಭೀರ ಪ್ರಶ್ನೆಗಳು ಎದ್ದಿವೆ..!

COSTALNEWS /ಕುಂದಾಪುರ : ಉಡುಪಿ ಜಿಲ್ಲೆಯಲ್ಲಿ ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಇದೀಗ ಗಂಭೀರ ಪ್ರಶ್ನೆಗಳು ಎದ್ದಿವೆ..!

ಕುಂದಾಪುರ: ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ FSSAI ಅಂದರೆ ಫುಡ್ ಸೇಫ್ಟಿ ಪರವಾನಿಗೆ ಇಲ್ಲದೇ ಆಹಾರ ಸಂಬಂಧಿತ ಉದ್ಯಮಗಳು ನಡೆಯುತ್ತಿವೆ ಎಂಬ ಆರೋಪ ಕೇಳಿಬಂದಿದೆ..!
ವಿಶೇಷವಾಗಿ ಕುಂದಾಪುರ–ಬೈಂದೂರು ಭಾಗದಲ್ಲಿ ಬೇಕರಿ, ಫುಡ್ ಫ್ಯಾಕ್ಟರಿ, ಶುಂಠಿ ಸೋಡಾ, ಬ್ರೆಡ್ ಫ್ಯಾಕ್ಟರಿ ಸೇರಿದಂತೆ ಹಲವು ಆಹಾರ ಉದ್ಯಮಗಳು ಅಗತ್ಯ ಪರವಾನಿಗೆ ಹೊಂದಿವೆಯೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ..!
ಪರವಾನಿಗೆ ಇಲ್ಲದೇ ಆಹಾರ ಉತ್ಪಾದನೆ ಅಥವಾ ಮಾರಾಟ ನಡೆಯುತ್ತಿದ್ದರೆ, ಅದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಗಂಭೀರ ವಿಚಾರವಾಗಲಿದೆ..!
ಹಾಗಾದರೆ, ಈ ಉದ್ಯಮಗಳಿಗೆ FSSAI ಪರವಾನಿಗೆ ಇದೆಯೇ..? ನಿಯಮಾನುಸಾರ ಪರವಾನಿಗೆ ನವೀಕರಿಸಲಾಗಿದೆಯೇ..?
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ತೆರಳಿ ದಾಖಲೆಗಳ ಪರಿಶೀಲನೆ ಹಾಗೂ ದಿಢೀರ್ ತಪಾಸಣೆ ನಡೆಸಬೇಕೆಂಬ ಒತ್ತಾಯ ಕೇಳಿಬಂದಿದೆ..!
ಮಾನ್ಯ ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕುಂದಾಪುರ–ಬೈಂದೂರು ಭಾಗದಲ್ಲಿ ದಿಢೀರ್ ತಪಾಸಣೆ ನಡೆಸಬೇಕೆಂಬುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ..!
 ಜನರ ಆರೋಗ್ಯದ ವಿಚಾರದಲ್ಲಿ ಯಾವುದೇ ರಾಜಿ ಬೇಡ..!
 FSSAI ಪರವಾನಿಗೆ ಇಲ್ಲದೇ ಉದ್ಯಮ ನಡೆಯುತ್ತಿದೆಯೇ ಎಂಬ ಆರೋಪಕ್ಕೆ ಅಧಿಕಾರಿಗಳ ತಪಾಸಣೆಯಿಂದಲೇ ಸತ್ಯ ಹೊರಬರಬೇಕಿದೆ..!

Ads on article

Advertise in articles 1

advertising articles 2

Advertise under the article