ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

COSTALNEWS BIG BREAKING  ಕುಂದಾಪುರ: RI  ದಿನೇಶ್ ಉದ್ದಾರ್ ವರ್ಗಾವಣೆ ಗೊಂದಲ..!ಹೆಬ್ರಿಗೆ ವರ್ಗಾವಣೆ; ಕುಂದಾಪುರದಲ್ಲೇ ಉಳಿಯಲು ಕಸರತ್ತು ಗುಸು ಗುಸು ಸುದ್ದಿ ಆರೋಪ ..!

COSTALNEWS BIG BREAKING ಕುಂದಾಪುರ: RI ದಿನೇಶ್ ಉದ್ದಾರ್ ವರ್ಗಾವಣೆ ಗೊಂದಲ..!ಹೆಬ್ರಿಗೆ ವರ್ಗಾವಣೆ; ಕುಂದಾಪುರದಲ್ಲೇ ಉಳಿಯಲು ಕಸರತ್ತು ಗುಸು ಗುಸು ಸುದ್ದಿ ಆರೋಪ ..!


ಕುಂದಾಪುರ ತಾಲೂಕಿನ ಕಂದಾಯ ನಿರೀಕ್ಷಕರಾಗಿರುವ ದಿನೇಶ್ ಉದ್ದಾರ್ ಅವರು ಕುಂದಾಪುರದಿಂದ ಹೆಬ್ರಿ ತಾಲೂಕಿಗೆ ವರ್ಗಾವಣೆಗೊಂಡಿದ್ದರೂ, ನಿಯೋಜಿತ ಸ್ಥಳಕ್ಕೆ ತೆರಳದೆ ಕುಂದಾಪುರದಲ್ಲೇ ಮುಂದುವರಿಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
 ಸರ್ಕಾರದ ವರ್ಗಾವಣೆ ಆದೇಶದಂತೆ ಹೆಬ್ರಿಯಿಂದ ಗುರುಪ್ರಸಾದ್ ಅವರು ಕುಂದಾಪುರಕ್ಕೆ ನೂತನ ಕಂದಾಯ ನಿರೀಕ್ಷಕರಾಗಿ ಬಂದಿದ್ದಾರೆ ಎನ್ನಲಾಗಿದ್ದು, ಈ ನಡುವೆಯೇ ಹಳೆಯ ಅಧಿಕಾರಿಯ ಮುಂದುವರಿಕೆ ಪ್ರಯತ್ನದ ಕುರಿತು ಸಾರ್ವಜನಿಕರಿಂದ ಪ್ರಶ್ನೆಗಳು ಕೇಳಿಬರುತ್ತಿವೆ.
 ದಿನೇಶ್ ಉದ್ದಾರ್ ಅವರು ಸುಮಾರು 25 ವರ್ಷಗಳಿಂದ ಕುಂದಾಪುರ ತಾಲೂಕು ಕಚೇರಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಕಳೆದ ಏಳು ವರ್ಷಗಳಿಂದ RI ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬ ಮಾಹಿತಿ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
 ಇದೇ ವೇಳೆ, ಅಧಿಕಾರಿಯ ವಿರುದ್ಧ ಈ ಹಿಂದೆ ಲೋಕಾಯುಕ್ತ ಇಲಾಖೆಗೆ ದೂರುಗಳು ಸಲ್ಲಿಕೆಯಾಗಿದ್ದವು ಎಂದು ಆರೋಪಿಸಲಾಗಿದ್ದು, ದೂರುದಾರರಾದ ಸತೀಶ್ ಖಾರ್ವಿ ಅವರ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ವಿಚಾರಣೆ ನಡೆದಿತ್ತು ಎಂಬ ಮಾತುಗಳು ಇದೀಗ ಮತ್ತೆ ಚರ್ಚೆಗೆ ಬಂದಿವೆ.
 ಆದರೆ ಈ ಎಲ್ಲಾ ಆರೋಪಗಳು ಮತ್ತು ಹಿಂದಿನ ದೂರುಗಳ ಬಗ್ಗೆ ಸಂಬಂಧಪಟ್ಟ ದಾಖಲೆಗಳು ಹಾಗೂ ಅಧಿಕೃತ ಸ್ಪಷ್ಟೀಕರಣ ಅಗತ್ಯವಾಗಿದೆ.
ಮಾನ್ಯ ಉಡುಪಿ ಜಿಲ್ಲಾಧಿಕಾರಿಗಳೇ,
ಸರ್ಕಾರದ ವರ್ಗಾವಣೆ ಆದೇಶದ ಸ್ಥಿತಿ ಏನು?
ಅದು ಜಾರಿಯಾಗಿದೆಯೇ?
ಜಾರಿಯಾಗಿದ್ದರೆ ದಿನೇಶ್ ಉದ್ದಾರ್ ಅವರನ್ನು ಹೆಬ್ರಿಗೆ ನಿಯೋಜಿಸಿದ ಆದೇಶವನ್ನು ತಕ್ಷಣ ಅನುಷ್ಠಾನಗೊಳಿಸಲಾಗುತ್ತದೆಯೇ?
ಎಂಬುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವರ್ಗಾವಣೆ ಆದೇಶದ ಕುರಿತು ಉಂಟಾಗಿರುವ ಗೊಂದಲಕ್ಕೆ ಜಿಲ್ಲಾಡಳಿತ ತಕ್ಷಣ ತೆರೆ ಎಳೆಯಬೇಕಿದೆ.
ಆದೇಶ ಜಾರಿಯಾಗುತ್ತದೆಯೇ?
ಅಥವಾ ಕುಂದಾಪುರದಲ್ಲೇ ಮುಂದುವರಿಯಲು ಅವಕಾಶ ಸಿಗುತ್ತದೆಯೇ?

Ads on article

Advertise in articles 1

advertising articles 2

Advertise under the article