COSTALNEWS/ಬೆಣ್ಣೆಗೆರೆ ಅಂಗನವಾಡಿ ಜಮೀನಿನ ಅಕ್ರಮ ಮಾರಾಟ ಆರೋಪ: ಗುಜ್ಜಾಡಿ ಗ್ರಾ. ಪಂ. ಎದುರು ಪ್ರತಿಭಟನೆಯ ಎಚ್ಚರಿಕೆ..! ವಿನೋದ್ ಭಂಡಾರಿ
Saturday, September 5, 2026
ಕುಂದಾಪುರ: ಅಕ್ರಮ ಜಮೀನು ವರ್ಗಾವಣೆ ಆರೋಪ: ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಣ್ಣೆಗೆರೆ ಅಂಗನವಾಡಿ ಕೇಂದ್ರಕ್ಕೆ ಸೇರಿದ ಜಮೀನನ್ನು ಖಾಸಗಿಯವರಿಗೆ ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂದು ಸ್ಥಳೀಯ ಮುಖಂಡ ವಿನೋದ್ ಭಂಡಾರಿ ಆರೋಪಿಸಿದ್ದಾರೆ.
ಸಿಡಿಪಿಒ (CDPO) ಕಚೇರಿಯಿಂದ ಕುಂದಾಪುರ ಜಿಲ್ಲಾ ಪಂಚಾಯತ್ ತಾಂತ್ರಿಕ ಅಭಿಯಂತರರಿಗೆ ಪತ್ರ ರವಾನೆಯಾಗಿದ್ದು, ಅಂಗನವಾಡಿ ಕಟ್ಟಡದ ದುರಸ್ತಿ ಮತ್ತು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ.
ಆರ್.ಟಿ.ಸಿ (RTC) ದಾಖಲೆ: ಲಭ್ಯವಿರುವ ಪಹಣಿ ದಾಖಲೆಯಲ್ಲಿ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಸರ್ವೆ ನಂಬರ್ 94/9 ರ 0.16 ಎಕರೆ ಜಮೀನಿನ ಹಕ್ಕು ಖಾಸಗಿ ವ್ಯಕ್ತಿಯ ಹೆಸರಿಗೆ ನಮೂದಾಗಿರುವುದು ಕಂಡುಬಂದಿದೆ.
ಪುಟಾಣಿ ಮಕ್ಕಳ ಅಂಗನವಾಡಿ ಕೇಂದ್ರದ ಜಮೀನು ಅಕ್ರಮ ಹಸ್ತಾಂತರ ಖಂಡಿಸಿ ಹಾಗೂ ತಪ್ಪಿತಸ್ಥ ಅಧಿಕಾರಿಗಳ ಮತ್ತು ವ್ಯಕ್ತಿಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗುಜ್ಜಾಡಿ ಗ್ರಾಮ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಲು ಸಾರ್ವಜನಿಕರು ಸಿದ್ಧತೆ ನಡೆಸಿದ್ದಾರೆ
ತಕ್ಷಣ ಹಿರಿಯ ಅಧಿಕಾರಿಗಳು ಜನಪ್ರತಿನಿಧಿಗಳು ಸೇರಿದಂತೆ ಇಲಾಖೆ ಅಧಿಕಾರಿಗಳು ಇದ್ದ ಕಡೆ ಗಮನಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡ ಉದ್ಯಮಿ ವಿನೋದ್ ಭಂಡಾರಿ ಎಚ್ಚರಿಕೆ ನೀಡಿದ್ದಾರೆ