ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

COSTALNEWS /ಕಂಡ್ಲೂರು–ಬಳ್ಕೂರು ಸೇತುವೆ ವಿಚಾರದಲ್ಲಿ ಹೋರಾಟದ ಕಿಚ್ಚು...!

COSTALNEWS /ಕಂಡ್ಲೂರು–ಬಳ್ಕೂರು ಸೇತುವೆ ವಿಚಾರದಲ್ಲಿ ಹೋರಾಟದ ಕಿಚ್ಚು...!

ಕುಂದಾಪುರ ತಾಲೂಕಿನ ಕಂಡ್ಲೂರು–ಬಳ್ಕೂರು ಸೇತುವೆ ರಾಜ್ಯ ಹೆದ್ದಾರಿಯ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದು, ಕುಂದಾಪುರದಿಂದ ಶಿವಮೊಗ್ಗ, ತೀರ್ಥಹಳ್ಳಿ, ಆಗುಂಬೆ, ಶಂಕರನಾರಾಯಣ, ಹೆಬ್ರಿ, ಅಂಪಾರು, ನೇರಳಕಟ್ಟೆ ಸೇರಿದಂತೆ ಹಲವು ಪ್ರದೇಶಗಳಿಗೆ ಪ್ರತಿನಿತ್ಯ ಸಾವಿರಾರು ಜನರು ಸಂಚರಿಸುವ ಪ್ರಮುಖ ಮಾರ್ಗವಾಗಿದೆ, ಹೌದು ಹಳೆಯ ಸೇತುವೆ ಬದಲಿಗೆ ಹೊಸ ಸೇತುವೆ ನಿರ್ಮಾಣವಾಗುತ್ತಿರುವುದು ಸ್ವಾಗತಾರ್ಹವೇ ಸರಿ.
ಆದರೆ… ಹೊಸ ಸೇತುವೆ ಪೂರ್ಣಗೊಳ್ಳುವ ಮುನ್ನವೇ ಹಳೆಯ ಸೇತುವೆಯನ್ನು ಕೆಡವಿದರೆ ಜನರ ಸಂಚಾರಕ್ಕೆ ಗತಿಯೇನು? ಮುಂದಿನ ದಿನದಲ್ಲಿ 
ಶಾಲಾ ಮಕ್ಕಳು…
ಅನಾರೋಗ್ಯ ಪೀಡಿತರು…
ವೃದ್ಧರು…
ತುರ್ತು ಚಿಕಿತ್ಸೆಗೆ ತೆರಳುವವರು…
ತಾಲೂಕು ಕಚೇರಿ ಹಾಗೂ ಸರ್ಕಾರಿ ಕೆಲಸಗಳಿಗೆ ಬರುವ ಸಾರ್ವಜನಿಕರಿಗೆ 
 ತೀವ್ರ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
“ಹೊಸ ಸೇತುವೆ ನಿರ್ಮಾಣವಾಗುವವರೆಗೆ ಹಳೆಯ ಸೇತುವೆಯನ್ನು ಉಳಿಸಿಕೊಂಡು ಸಾರ್ವಜನಿಕ ಸಂಚಾರಕ್ಕೆ ಅವಕಾಶ ನೀಡಬೇಕು” ಎಂಬುದು ಸಾರ್ವಜನಿಕರ ಪ್ರಮುಖ ಆಗ್ರಹವಾಗಿದೆ.
ಆದರೆ ಈ ವಿಚಾರಕ್ಕಾಗಿ ಕೂಡ ಜನಪ್ರತಿನಿಧಿಗಳಿಗೆ ಮನವಿ ಮಾಡಿ, ಇದೀಗ ಹೋರಾಟದ ಹಾದಿ ಹಿಡಿಯಬೇಕಾದ ಪರಿಸ್ಥಿತಿ ಬಂದಿರುವುದು ದುರಂತವೇ ಸರಿ ಎಂದು ಪ್ರಜ್ಞಾವಂತ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ,
ಸ್ಥಳೀಯ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಪಿಡಬ್ಲ್ಯೂಡಿ ಅಧಿಕಾರಿಗಳು ಯೋಜನೆ ರೂಪಿಸುತ್ತಿದ್ದಾರೆಯೇ? ಎಂಬ ಪ್ರಶ್ನೆಯೂ ಇದೀಗ ಕೇಳಿಬರುತ್ತಿದೆ.
ಎಸ್ಟಿಮೇಟ್ ಮಾಡುವ ಮೊದಲೇ ಸ್ಥಳೀಯರ ಸಮಸ್ಯೆ, ಜನಸಂಚಾರ ಹಾಗೂ ಪರ್ಯಾಯ ಮಾರ್ಗಗಳ ಬಗ್ಗೆ ಅಧಿಕಾರಿಗಳು ಸಮಗ್ರವಾಗಿ ಚರ್ಚಿಸಬೇಕಿತ್ತು ಎಂದು ಸ್ಥಳೀಯ ಮುಖಂಡರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕಂಡ್ಲೂರು–ಬಳ್ಕೂರು ಸೇತುವೆ ವಿಚಾರದಲ್ಲಿ ಇದೀಗ ಪಕ್ಷಾತೀತ ಹೋರಾಟಕ್ಕೆ ಸ್ಥಳೀಯ ಮುಖಂಡರು ಮುಂದಾಗಿದ್ದಾರೆ.
ಬಿಜೆಪಿ ಪಕ್ಷದ ನಾಯಕರು, ಕಾಂಗ್ರೆಸ್ ಪಕ್ಷದ ಮುಖಂಡರು, ವಿವಿಧ ರಾಜಕೀಯ ಮುಖಂಡರು, ಪ್ರಜ್ಞಾವಂತ ನಾಗರಿಕರು, ಸ್ಥಳೀಯ ನಿವಾಸಿಗಳು ಸೇರಿದಂತೆ ಹಲವು ಸಾರ್ವಜನಿಕರು ಚಿಂತನ ಸಭೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಇದೀಗ ಕಂಡ್ಲೂರು–ಬಳ್ಕೂರು ಸೇತುವೆ ವಿಚಾರದಲ್ಲಿ ಹೋರಾಟದ ಕಿಚ್ಚು ಮತ್ತಷ್ಟು ಹೆಚ್ಚಾಗುವ ಲಕ್ಷಣಗಳು ಗೋಚರಿಸುತ್ತಿವೆ!                             
ಜನರ ಈ ಆಗ್ರಹಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಾವ ರೀತಿಯ ಸ್ಪಂದನೆ ನೀಡುತ್ತಾರೆ?
ಕಾದು ನೋಡಬೇಕಿದೆ…!

Ads on article

Advertise in articles 1

advertising articles 2

Advertise under the article