ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

 C ತ್ರಾಸಿ–ಮೋವಾಡಿ ಕ್ರಾಸ್ ಅಪಘಾತ ಪ್ರಕರಣಕ್ಕೆ ಅಂತಿಮ ತೀರ್ಪು..!ಅಜಾಗರೂಕ ಚಾಲನೆಗೆ ಬಸ್ ಚಾಲಕನಿಗೆ 1 ವರ್ಷ 17 ದಿನಗಳ ಕಾರಾಗೃಹ ಶಿಕ್ಷೆ..!

C ತ್ರಾಸಿ–ಮೋವಾಡಿ ಕ್ರಾಸ್ ಅಪಘಾತ ಪ್ರಕರಣಕ್ಕೆ ಅಂತಿಮ ತೀರ್ಪು..!ಅಜಾಗರೂಕ ಚಾಲನೆಗೆ ಬಸ್ ಚಾಲಕನಿಗೆ 1 ವರ್ಷ 17 ದಿನಗಳ ಕಾರಾಗೃಹ ಶಿಕ್ಷೆ..!

COSTALNEWS SPECIAL NEWS ಕುಂದಾಪುರ: 2016ರಲ್ಲಿ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ  ತ್ರಾಸಿ–ಮೋವಾಡಿ ಕ್ರಾಸ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತ ಪ್ರಕರಣಕ್ಕೆ ಬರೋಬ್ಬರಿ 10 ವರ್ಷಗಳ ಬಳಿಕ ನ್ಯಾಯಾಲಯ ಅಂತಿಮ ತೀರ್ಪು ನೀಡಿದೆ.
2016ರ ಜೂನ್ 21ರಂದು ಬೆಳಗ್ಗೆ ಸುಮಾರು 9.25ರ ವೇಳೆಗೆ ಹೆಮ್ಮಾಡಿಯಿಂದ ಮೋವಾಡಿಯ ಡಾನ್ ಬಾಸ್ಕೋ ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಓಮಿನಿ ವಾಹನವನ್ನು ತ್ರಾಸಿ–ಮೋವಾಡಿ ಕ್ರಾಸ್‌ನಲ್ಲಿ ಬಲಕ್ಕೆ ತಿರುಗಿಸುತ್ತಿದ್ದ ಸಂದರ್ಭದಲ್ಲಿ, ತ್ರಾಸಿ ಕಡೆಯಿಂದ ಕುಂದಾಪುರದತ್ತ ತೆರಳುತ್ತಿದ್ದ ಬಸ್ ಢಿಕ್ಕಿ ಹೊಡೆದಿತ್ತು.
ಅತೀವೇಗ ಹಾಗೂ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿತ್ತು. ಢಿಕ್ಕಿಯ ಪರಿಣಾಮ ಓಮಿನಿ ಸಂಪೂರ್ಣ ಜಖಂಗೊಂಡಿದ್ದು, ವಾಹನದಲ್ಲಿದ್ದ ಹಲವು ಶಾಲಾ ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದರು. ಕೆಲವರು ಮೃತಪಟ್ಟಿದ್ದು, ಇತರರಿಗೆ ಗಂಭೀರ ಗಾಯಗಳಾಗಿದ್ದವು.
ಈ ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ 3ನೇ ಹೆಚ್ಚುವರಿ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಮಣಿಕಂಠ ಎಂ.ಎಸ್. ಅವರು 2026ರ ಸೆಪ್ಟೆಂಬರ್ 7ರಂದು ಅಂತಿಮ ತೀರ್ಪು ಪ್ರಕಟಿಸಿದ್ದಾರೆ.
ಆರೋಪಿತ ಬಸ್ ಚಾಲಕನಿಗೆ ಐಪಿಸಿ ಕಲಂ 279, 337, 338 ಹಾಗೂ 304(ಎ) ಅಡಿಯಲ್ಲಿ ಒಟ್ಟು 1 ವರ್ಷ 17 ದಿನಗಳ ಸಾಧಾರಣ ಕಾರಾಗೃಹ ವಾಸ ಶಿಕ್ಷೆ ವಿಧಿಸಲಾಗಿದೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಉಮಾ  ದಾಮೋದರ ನಾಯ್ಕ ಅವರು ಪ್ರಕರಣವನ್ನು ನಡೆಸಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಸುದರ್ಶನ್ ಸಿಪಿಐ ಅವರು ಭಾಗಶಃ ನಡೆಸಿದ್ದು, ಬಳಿಕ ಅಂದಿನ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕರಾದ ರಾಘವ ಎಸ್. ಪಡೀಲ್ ಅವರು ಸಂಪೂರ್ಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.  
ಹತ್ತು ವರ್ಷಗಳ ಬಳಿಕ ಬಂದ ನ್ಯಾಯಾಲಯದ ತೀರ್ಪು — ಅಪಘಾತ ಪ್ರಕರಣದಲ್ಲಿ ಹೊಣೆಗಾರಿಕೆಗೆ ಶಿಕ್ಷೆಯ ಸಂದೇಶ..!


Ads on article

Advertise in articles 1

advertising articles 2

Advertise under the article