ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

COSTALNEWS /ಹೊನ್ನಾವರ: ಪಶ್ಚಿಮ ಘಟ್ಟ ಸಂರಕ್ಷಣಾ ಚಾತುರ್ಮಾಸ್ಯ ವೃತ" ಸಂಪನ್ನತೆ, ಸೀಮೋಲ್ಲಂಘನ, ಗುರುವಂದನಾ ಕಾರ್ಯಕ್ರಮ

COSTALNEWS /ಹೊನ್ನಾವರ: ಪಶ್ಚಿಮ ಘಟ್ಟ ಸಂರಕ್ಷಣಾ ಚಾತುರ್ಮಾಸ್ಯ ವೃತ" ಸಂಪನ್ನತೆ, ಸೀಮೋಲ್ಲಂಘನ, ಗುರುವಂದನಾ ಕಾರ್ಯಕ್ರಮ

ಹೊನ್ನಾವರ : ಪಶ್ಚಿಮ ಘಟ್ಟ ಸಂರಕ್ಷಣಾ ಚಾತುರ್ಮಾಸ್ಯ ವೃತ" ಸಂಪನ್ನತೆ, ಸೀಮೋಲ್ಲಂಘನ, ಗುರುವಂದನಾ ಕಾರ್ಯಕ್ರಮ ಹಾಗೂ ಯಕ್ಷ ನಾದಾಮೃತ ಕಾರ್ಯಕ್ರಮವು ದಿನಾಂಕ 26-09-2026 ರಂದು ಅತ್ಯಂತ ಭಕ್ತಿಪೂರ್ವಕವಾಗಿ ನೆರವೇರಿರುವುದು ತುಂಬಾ ಸಂತೋಷದ ಸಂಗತಿ.ವಿದ್ಯಾರ್ಥಿಗಳು ಮತ್ತು ಭಕ್ತರು ಶ್ರೀ ಗುರುಗಳಿಗೆ ಗುರುವಂದನೆ ಸಲ್ಲಿಸಿ, ಅವರ ಅಮೂಲ್ಯವಾದ ಶುಭಾಶೀರ್ವಾದಗಳನ್ನು ಪಡೆದುಕೊಂಡಿರುವುದು ಈ ಧಾರ್ಮಿಕ ಮತ್ತು ಪರಿಸರ ಜಾಗೃತಿಯ ಕಾರ್ಯಕ್ರಮಕ್ಕೆ ಮತ್ತಷ್ಟು ದಿವ್ಯತೆಯನ್ನು ತಂದಿದೆ. ಪಶ್ಚಿಮ ಘಟ್ಟಗಳಂತಹ ಪ್ರಕೃತಿಯ ಕೊಡುಗೆಯನ್ನು ಉಳಿಸುವ ಸಂಕಲ್ಪದೊಂದಿಗೆ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿರುವುದು ಶ್ಲಾಘನೀಯ.

 ಈ ವೇಳೆ ಗುರುಗಳು ವಿದ್ಯಾರ್ಥಿಗಳಿಗೆ ಧಾರ್ಮಿಕ ಚಿಂತನೆಯ ವಿಚಾರವಾಗಿ ಅಚ್ಚುಗಟ್ಟಾಗಿ ತಿಳಿಸಿ ವಿದ್ಯಾರ್ಥಿಗಳಿಗೆ ಆಶೀರ್ವಾದ ಮಾಡಿದರು ಈ ಸಂದರ್ಭ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ವೇದಿಕೆಯಲ್ಲಿ ಜರುಗಿತು 
 ಈ ಕಾರ್ಯಕ್ರಮಕ್ಕೆ ಪೂರ ಹಾಗೂ ಪರವೂರ ಭಕ್ತರು ಶ್ರೀ ಸನ್ನಿಧಾನಕ್ಕೆ ಆಗಮಿಸಿ ಶ್ರೀ ದೇವರಮುಡಿಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು ಹಾಗೂ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಜರುಗಿತು  

Ads on article

Advertise in articles 1

advertising articles 2

Advertise under the article