COSTALNEWS ಕುಂದಾಪುರ : ಪುರಸಭೆ ಭಾಗದ ಹೊಸ ಬಸ್ ನಿಲ್ದಾಣದ ಹತ್ತಿರ ರಸ್ತೆಯಲ್ಲೇ ಕಾರು ನಿಲ್ಲಿಸಿ ಮೋಜು-ಮಸ್ತಿ? ಕುಂದಾಪುರ ಸಂಚಾರಿ ಪೊಲೀಸರಿಂದ ದಂಡದ ಶಾಕ್..!”
Sunday, September 27, 2026
ಕುಂದಾಪುರ : ಪುರಸಭೆ ಭಾಗದ ಹೊಸ ಬಸ್ ನಿಲ್ದಾಣದ ಹತ್ತಿರ ರಸ್ತೆಯಲ್ಲೇ ಕಾರು ನಿಲ್ಲಿಸಿ ಮೋಜು-ಮಸ್ತಿ?
ಕುಂದಾಪುರ ಸಂಚಾರಿ ಪೊಲೀಸರಿಂದ ದಂಡದ ಶಾಕ್..!”
ಕುಂದಾಪುರ:
ಪುರಸಭೆ ವ್ಯಾಪ್ತಿಯಲ್ಲಿ ರಸ್ತೆಯ ಮೇಲೆ ಅಡ್ಡಾದಿಡ್ಡಿಯಾಗಿ ಕಾರುಗಳನ್ನು ಪಾರ್ಕಿಂಗ್ ಮಾಡಿ ತೆರಳುತ್ತಿದ್ದ ವಾಹನ ಸವಾರರಿಗೆ ಕುಂದಾಪುರ ಸಂಚಾರಿ ಪೊಲೀಸರು ದಂಡದ ಬಿಸಿ ಮುಟ್ಟಿಸಿದ್ದಾರೆ.
ಖಾಸಗಿ ಹೊಸ ಬಸ್ ನಿಲ್ದಾಣದ ಸಮೀಪ ರಸ್ತೆಯಲ್ಲೇ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಹೋಟೆಲ್ಗಳಿಗೆ ತೆರಳುತ್ತಿದ್ದ ವಾಹನ ಸವಾರರ ವಿರುದ್ಧ ಸಂಚಾರಿ ಪೊಲೀಸ್ ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ.
ದಿನನಿತ್ಯ ರಸ್ತೆಯಲ್ಲಿನ ಅಕ್ರಮ ಪಾರ್ಕಿಂಗ್ ಕುರಿತು ವಾಹನ ಸವಾರರಿಗೆ ಸೂಚನೆ ನೀಡುತ್ತಿದ್ದರೂ, ನಿಯಮ ಪಾಲನೆ ಮಾಡದ ಹಿನ್ನೆಲೆಯಲ್ಲಿ ಇಂದು ಭಾನುವಾರ ಪೊಲೀಸರು ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
ಯುವಕರು ಸೇರಿದಂತೆ ಕುಟುಂಬ ಸಮೇತರಾಗಿ ಆಗಮಿಸಿದ್ದ ಕೆಲ ವಾಹನ ಸವಾರರು ಕೂಡ ರಸ್ತೆಯ ಮೇಲೆ ವಾಹನಗಳನ್ನು ನಿಲ್ಲಿಸಿರುವುದು ಕಂಡುಬಂದಿದ್ದು, ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗಿದೆ.
ಇನ್ನು ಈ ಪ್ರದೇಶದ ಒಂದು ಬದಿಯಲ್ಲಿ ನ್ಯಾಯಾಲಯ, ತಾಲೂಕು ಕಚೇರಿ ಹಾಗೂ ಪೊಲೀಸ್ ಠಾಣೆಗಳು ಇರುವುದರಿಂದ ದಿನನಿತ್ಯ ಸಾವಿರಾರು ಮಂದಿ ಸಂಚರಿಸುತ್ತಾರೆ. ಇಂತಹ ಪ್ರಮುಖ ರಸ್ತೆಯಲ್ಲೇ ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ