COSTALNEWS SPECIAL NEWS/ಕುಂದಾಪುರ: ಅವಳಿ ಕಂದಮ್ಮಗಳಿಗೆ ಜನ್ಮ ನೀಡಿದ ಗೋಮಾತೆ..!
Tuesday, September 15, 2026
ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಕಂಚುಗೋಡು–ಕೊಡಪಾಡಿ ಸಮೀಪದಲ್ಲಿ ಅಪರೂಪದ ಅಚ್ಚರಿಯೊಂದು ನಡೆದಿದೆ.
ಅಂತೋನಿ ಎಂಬುವರಿಗೆ ಸೇರಿದ ಗೋಮಾತೆಯೊಂದು ಗೌರಿ–ಗಣೇಶ ಹಬ್ಬದ ಮರುದಿನವೇ ಶುಭ ಸಂದರ್ಭದಲ್ಲಿ ಎರಡು ಮುದ್ದಾದ ಕಂದಮ್ಮಗಳಿಗೆ ಜನ್ಮ ನೀಡಿದ್ದು, ಸ್ಥಳೀಯರಲ್ಲಿ ಸಂತಸ ಹಾಗೂ ಕುತೂಹಲ ಮೂಡಿಸಿದೆ.
ಗೋಮಾತೆ ಹಾಗೂ ಎರಡು ಪುಟ್ಟ ಕಂದಮ್ಮಗಳನ್ನು ನೋಡಲು ಅಕ್ಕಪಕ್ಕದ ಊರುಗಳಿಂದಲೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಸ್ಥಳೀಯರು ಗೋಮಾತೆ ಮತ್ತು ಕಂದಮ್ಮಗಳನ್ನು ಭಕ್ತಿ ಭಾವದಿಂದ ಆರೈಕೆ ಮಾಡುತ್ತಿದ್ದು, ಅವುಗಳ ಆರೋಗ್ಯ ಹಾಗೂ ಸುರಕ್ಷತೆಯ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ.
ಹಬ್ಬದ ಸಂಭ್ರಮದ ಬೆನ್ನಲ್ಲೇ ನಡೆದ ಈ ಅಪರೂಪದ ಘಟನೆ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದ್ದು, ಅವಳಿ ಕಂದಮ್ಮಗಳ ಜನನ ಇದೀಗ ಗುಜ್ಜಾಡಿ ಭಾಗದ ವಿಶೇಷ ಆಕರ್ಷಣೆಯಾಗಿದೆ.