ಕೋಸ್ಟಲ್ ನ್ಯೂಸ್ ವಾಟ್ಸಪ್ ಗ್ರೂಪ್ ಗೆ ಸೇರಿ

COSTALEWS / ಗಂಗೊಳ್ಳಿ: ಮೀನುಗಾರರ ಸಹಕಾರ ಸಂಘಕ್ಕೆ ವಿಶಿಷ್ಟ ಮಾನ್ಯತೆ..!

COSTALEWS / ಗಂಗೊಳ್ಳಿ: ಮೀನುಗಾರರ ಸಹಕಾರ ಸಂಘಕ್ಕೆ ವಿಶಿಷ್ಟ ಮಾನ್ಯತೆ..!

ಗಂಗೊಳ್ಳಿ: ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರ ಸಂಘ ನಿಯಮಿತದ 2025–26ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ವಿಶೇಷವಾಗಿ ನಡೆಯಿತು.
ಮೀನುಗಾರರ ಬದುಕಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ನೀಡುವ ನಿಟ್ಟಿನಲ್ಲಿ ಸಂಘ ಕೈಗೊಂಡಿರುವ ವಿವಿಧ ಜನಪರ ಕಾರ್ಯಗಳು ಸಭೆಯಲ್ಲಿ ಗಮನ ಸೆಳೆದವು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ, “ಅಖಿಲ ಭಾರತ ಮಟ್ಟದಲ್ಲಿ ಗುರುತಿಸಿಕೊಂಡಿರುವ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆ ನಮ್ಮ ಸಂಘಕ್ಕಿದೆ” ಎಂದು ಹೇಳಿದರು.
ಸಂಘದ ವರ್ಷದ ಆದಾಯವನ್ನು ಕೇವಲ ಸಂಘದ ಆಡಳಿತಕ್ಕೆ ಸೀಮಿತಗೊಳಿಸದೆ, ಸದಸ್ಯರು ಹಾಗೂ ಅವರ ಕುಟುಂಬಗಳ ಹಿತಕ್ಕಾಗಿ ವಿನಿಯೋಗಿಸುವುದು ಸಂಘದ ಪ್ರಮುಖ ಗುರಿಯಾಗಿದೆ ಎಂದು ಅವರು ತಿಳಿಸಿದರು.
ವಿಶೇಷವಾಗಿ, ಸಂಘದ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಅನಾರೋಗ್ಯದಿಂದ ಬಳಲುತ್ತಿರುವ ಸದಸ್ಯರು ಹಾಗೂ ಕುಟುಂಬಗಳಿಗೆ ವೈದ್ಯಕೀಯ ನೆರವು, ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ಅನಾಹುತ ಸಂಭವಿಸಿ ಕುಟುಂಬ ಸಂಕಷ್ಟಕ್ಕೆ ಸಿಲುಕಿದಾಗ ಸಹಾಯಹಸ್ತ ಚಾಚುವುದು ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಮೀನುಗಾರರ ಬದುಕಿನ ಸಂಕಷ್ಟದ ಸಂದರ್ಭದಲ್ಲಿ ಸಂಘವು ಕೇವಲ ಸಹಕಾರಿ ಸಂಸ್ಥೆಯಾಗಿ ಉಳಿಯದೆ, ಸದಸ್ಯರ ಕುಟುಂಬದ ಬೆಂಬಲವಾಗಿ ನಿಲ್ಲುವ ಸಾಮಾಜಿಕ ಹೊಣೆಗಾರಿಕೆಯ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಸಂದೇಶವನ್ನು ಸಭೆ ನೀಡಿತು.
ಸದಸ್ಯರ ಒಗ್ಗಟ್ಟು, ಸಹಕಾರ ಮತ್ತು ಸಂಘದ ಜನಪರ ಚಟುವಟಿಕೆಗಳ ಮೂಲಕ ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವ ಸಂಕಲ್ಪದೊಂದಿಗೆ ಸಭೆ ನಡೆಯಿತು.

Ads on article

Advertise in articles 1

advertising articles 2

Advertise under the article