COASTAL NEWS EXCLUSIVE BIG BREAKING ಮುಂಬಡ್ತಿಯಾಗಿಯೂ ನಾಪತ್ತೆ – PDO ದಿನಕರ್ ಬೆಂಗ್ರೆ ಎಲ್ಲಿದ್ದಾರೆ? ಗುಜ್ಜಾಡಿ ಗ್ರಾಮಸ್ಥರಿಂದ ಆಕ್ರೋಶ!
Monday, September 7, 2026
ಕುಂದಾಪುರ: ರಾಜ್ಯದಲ್ಲಿ ಸರಕಾರಿ ಹುದ್ದೆಗಾಗಿ ಜನರು ದಿನನಿತ್ಯ ಸಾಹಸದ ಜೊತೆಗೆ ಶ್ರಮ ವಹಿಸುವುದು ಸರ್ವಸಾಮಾನ್ಯ ಆದರೆ ಇಲ್ಲಿ ಕೆಳ ಹುದ್ದೆಯಿಂದ ಮೇಲ್ದರ್ಜೆಗೆ ಬಡ್ತಿ ಸಿಕ್ಕರೂ ಕಚೇರಿಗೆ ಕೈಕೊಟ್ಟ ಅಧಿಕಾರಿ , ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ (PDO) ಮುಂಬಡ್ತಿ ಪಡೆದು ಅಧಿಕಾರ ಸ್ವೀಕರಿಸಿದ್ದ ದಿನಕರ್ ಬೆಂಗ್ರೆ, ಕರ್ತವ್ಯಕ್ಕೆ ಹಾಜರಾಗದೆ
ದಿಢೀರನೆ ನಾಪತ್ತೆಯಾಗಿದ್ದಾರೆ ಎಂಬ ಆರೋಪ ಅಂಬೇಡ್ಕರ್ ಸೇನೆ ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ .
ಗ್ರಾಮಸ್ಥರು ತುರ್ತು ಕೆಲಸಗಳಿಗೆ ಹಾಗೂ ಮೂಲಭೂತ ಸೌಕರ್ಯಗಳ ಅರ್ಜಿಗಳು ವಿಲೇವಾರಿಯಾಗದೆ ಗ್ರಾಮಸ್ಥರು ಪರದಾಡುವಂತಾಗಿದೆ.
ದಿನಕರ್ ಬೆಂಗ್ರೆ ಅವರು ಮುಂಬಡ್ತಿ ಸಮಯದಲ್ಲಿ ಗುಜ್ಜಾಡಿ ಗ್ರಾಮ ಪಂಚಾಯತ್ ಆಯ್ಕೆ ಮಾಡಿಕೊಂಡು ಇವಾಗ ತನ್ನ ಸ್ವಂತಲಾಬಿಗಾಗಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಎಂದುು ಹೇಳಲಾಗುುತ್ತಿದೆ ಒಟ್ಟಾರಿಯಾಗಿ ಪಿಡಿಓ ನಡೆಯಿಂದ ಗುಜ್ಜಾಡಿ ಗ್ರಾಮಸ್ಥರಿಗೆ ಅನ್ಯಾಯ ಎಸಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ, ಮುಂದಿನ ದಿನದಲ್ಲಿ ಗುಜ್ಜಾಡಿ ಗ್ರಾಮ ಪಂಚಾಯಿತಿಗೆ ಕರ್ತವ್ಯಕ್ಕೆ ಹಾಜರಾಗದೆ ಇದ್ದರೆ
ಗ್ರಾಮಸ್ಥರಿಂದ ಬಹಿರಂಗ ಸಭೆ ಕರೆದು ಪ್ರತಿಭಟನೆ ಮಾಡಲಾಗುವುದು ಎಂದು ಅಂಬೇಡ್ಕರ್ ಸೇನೆ ಖಡಕ್ ಎಚ್ಚರಿಕೆ ನೀಡಿದೆ
ದಿನಕರ್ ಬೆಂಗ್ರೆ ಅವರ ನಿಗೂಢ ನಡೆಗೆ ಬೇಸತ್ತಿರುವ ಗುಜ್ಜಾಡಿ ಜನತೆ, "ನಮ್ಮ ಪಿಡಿಒ ಎಲ್ಲಿದ್ದಾರೆಂದು ಹುಡುಕಿ ಕೊಡಿ" ಎಂದು ಮನವಿ ಮಾಡುತ್ತಾ ವಿಭಿನ್ನ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಾನ್ಯ ಜಿಲ್ಲಾಧಿಕಾರಿಗಳೇ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯವರೇ , ಕುಂದಾಪುರ ಕಾರ್ಯ ನಿರ್ವಹಣಾಧಿಕಾರಿ ಯವರೇ, ಕುಂದಾಪುರ ತಹಸೀಲ್ದಾರರು , ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಿಸಿ ಇಂತಹ ಅಧಿಕಾರಿಗಳ ವಿರುದ್ಧ ಗಮನಹರಿಸಬೇಕೆಂದು ಹಾಗೂ ಕರ್ತವ್ಯ ಲೋಪದಡಿ ಪ್ರಕರಣ ದಾಖಲಿಸಿ ಮುಂಬಡ್ತಿ ಆದೇಶ ರದ್ದುಪಡಿಸುವಂತೆ ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ ,
ಕಚೇರಿಗೆ ಬಾರದೆ ಅಡಗಿ ಕುಳಿತಿರುವುದಕ್ಕೆ ಮೂಲ ಕಾರಣವೇನು?
ಇದು ಕರ್ತವ್ಯ ಲೋಪವೇ ಅಥವಾ ಮೇಲಾಧಿಕಾರಿಗಳ ಹಾಗೂ ರಾಜಕೀಯ ನಾಯಕರ ಒತ್ತಡವೇ?
ಈ ಕುರಿತಾದ ಕ್ಷಣ ಕ್ಷಣದ ಮಾಹಿತಿಗಾಗಿ ನೋಡ್ತಾ ಇರಿ — COASTAL NEWS